ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್‌ಪೋರ್ಟ್‌ ಇಲ್ಲದ ಪಾಕ್‌ ಮಹಿಳೆ ಪೊಲೀಸರ ವಶಕ್ಕೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 31 : ಪಂಜಾಬಿನ ಜಲಂಧರ್‌ನಲ್ಲಿ ಪಾಕಿಸ್ತಾನದಿಂದ ಬಂದಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಪಾಸ್‌ಪೋರ್ಟ್ ಹಾಜರುಪಡಿಸಲು ಮಹಿಳೆ ವಿಫಲವಾಗಿದ್ದು, ವಿಚಾರಣೆ ಮುಂದುವರೆದಿದೆ.

ಬಂಧಿತ ಮಹಿಳೆಯನ್ನು 27 ವರ್ಷದ ಚಾಂದ್ ಖಾನ್ ಎಂದು ಗುರುತಿಸಲಾಗಿದೆ. ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಚಾಂದ್ ಖಾನ್ ಆಗಮಿಸಿದ್ದು, ಕರಾಚಿ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾಗಿ ಖಾನ್ ಪೊಲೀಸರಿಗೆ ತಿಳಿಸಿದ್ದಾಳೆ. [ಪಂಜಾಬಿಗೆ ನುಗ್ಗಿದ್ದು ಲಷ್ಕರ್ ಇ ತೋಯ್ಬಾ ಉಗ್ರರು?]

punjab

ರೈಲ್ವೆ ಪೊಲೀಸರು ಚಾಂದ್ ಖಾನ್ ಬಗ್ಗೆ ಜಲಂಧರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ವಿಚಾರಣೆಗೆ ಕೈ ಜೋಡಿಸಿದ್ದಾರೆ. ಸಂಜೋತಾ ಎಕ್ಸ್‌ಪ್ರೆಸ್ ರೈಲು ಜಲಂಧರ್‌ನಲ್ಲಿ ನಿಲ್ಲುವುದಿಲ್ಲ. ಆದರೆ, ಮಹಿಳೆ ಆಗಮಿಸುತ್ತಿರುವ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ರೈಲನ್ನು ನಿಲ್ಲಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. [ಚಿತ್ರಗಳು : ಪಂಜಾಬಿನಲ್ಲಿ ಉಗ್ರರನ್ನು ಮಟ್ಟ ಹಾಕಿದ ಯೋಧರು]

ಪೊಲೀಸರ ಹೈ ಅಲರ್ಟ್ : ಸೋಮವಾರ ಮುಂಜಾನೆ ಪಂಜಾಬಿನ ಗುರುದಾಸ್ ಪುರಕ್ಕೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಗುರುವಾರವೂ ಗುರುದಾಸ್ ಪುರ್ ಬಸ್ ನಿಲ್ದಾಣದ ಬಳಿ ಅನುಮಾಸ್ಪದ ವಸ್ತು ಪತ್ತೆಯಾಗಿತ್ತು. ಆದ್ದರಿಂದ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಆದ್ದರಿಂದ ಅಪರಿಚಿತ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

English summary
A 27 year old Pakistani woman has been detained by the Railway Police at Jalandhar. Chand Khan was on the Samjautha Express train and when asked about her passport, she failed to produce one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X