ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವಳಿ ತಲಾಖಿಗೆ 'ನೋ' ಎನ್ನಲು ಮಹಿಳೆಯರಿಗೆ ಅವಕಾಶ -ಸುಪ್ರೀಂ

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರವಾಗಿ ವಾದ ಮಂಡಿಸುತ್ತಿರುವ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್ ಈ ರೀತಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡರೆ ಅದು ತಪ್ಪು ಸಂದೇಶ ನೀಡುತ್ತದೆ ಎಂದು ಹೇಳಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮೇ 17: ತ್ರಿವಳಿ ತಲಾಖ್ ಬೇಡ ಎನ್ನಲು ಮುಸ್ಲಿಂ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟಗ್ ಬುಧವಾರದ ವಿಚಾರಣೆಯಲ್ಲಿ ಸಲಹೆ ನೀಡಿದೆ. ವಿಚಾರಣೆ ವೇಳೆ ಈ ರೀತಿ ಅವಕಾಶ ನೀಡಿದರೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಎತ್ತಿದ್ದಾರೆ.

ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪರವಾಗಿ ವಾದ ಮಂಡಿಸುತ್ತಿರುವ ಕಪಿಲ್ ಸಿಬಲ್, ಸುಪ್ರೀಂ ಕೋರ್ಟ್ ಈ ರೀತಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡರೆ ಅದು ತಪ್ಪು ಸಂದೇಶ ನೀಡುತ್ತದೆ ಎಂದು ಹೇಳಿದ್ದಾರೆ.

 Muslim women should be allowed to say no to triple talaq: SC

ಮುಸ್ಲಿಮರು ಹಾಗೇ ಎದ್ದು ನೇರ ವಿಚ್ಛೇದನ ನೀಡುವುದಿಲ್ಲ. ಹೊಸ 'ನಿಖ್ಹಾನಾಮ' ಹೊರಡಿಸಲಾಗಿದೆ. ಈಗಾಗಲೇ ತ್ರಿವಳಿ ತಲಾಖಿಗೆ ಸಂಬಂಧಿಸಿದಂತೆ ನಾವೂ ಸಾಮಾಜಿಕ ಸುಧಾರಣೆಯಲ್ಲಿ ನಿರತರಾಗಿದ್ದೇವೆ ಎಂದು ಸಿಬಲ್ ವಿಚಾರಣೆ ವೇಳೆ ವಾದ ಮಂಡಿಸಿದ್ದಾರೆ.

ಇನ್ನು ವಿಚಾರಣೆ ವೇಳೆ ಮಹಿಳೆಯರೂ ತ್ರಿವಳಿ ತಲಾಖ್ ನೀಡಬಹುದು ಎಂದು ಮುಸ್ಲಿಂ ಕಾನೂನು ಮಂಡಳಿ ಸುಪ್ರೀಂ ಕೋರ್ಟಿಗೆ ಹೇಳಿದೆ. ಮಾತ್ರವಲ್ಲ ವಿಚ್ಛೇದನ ಸಂದರ್ಭ ದೊಡ್ಡ ಮೊತ್ತದ ಮೆಹರ್ (ಪರಿಹಾರ) ಕೂಡಾ ಪಡೆಯಬಹುದು ಎಂದು ಮಂಡಳಿ ಹೇಳಿದೆ.

{promotion-urls}

English summary
The Supreme Court on Wednesday suggested that Muslim women must be given the option to say no to triple talaq. The Constitution Bench headed by Chief Justice of India, J S Khehar sought to know that if such an option could be given.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X