ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗೆ ಮತಾಂತರವಾಗುತ್ತೇನೆ ಎಂದ ಮುಸ್ಲಿಂ ಮಹಿಳೆ

By Prasad
|
Google Oneindia Kannada News

ಉದ್ದಮ್ ಸಿಂಗ್ ನಗರ (ಉತ್ತರಾಖಂಡ್), ಮೇ 19 : ತಲಾಖ್ ತಲಾಖ್ ತಲಾಖ್ ವಿರುದ್ಧ ಸಿಡಿದೆದ್ದಿರುವ ಮುಸ್ಲಿಂ ಮಹಿಳೆಯೊಬ್ಬರು ತಾನು ಹಿಂದೂ ಧರ್ಮಕ್ಕೆ ಮತಾಂತರವಾಗುತ್ತೇನೆ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ.

ಹೀಗೆ ಬೆದರಿಕೆಯೊಡ್ಡಿ ಶಮೀಮ್ ಜಹಾನ್ ಎಂಬ ಆ ಮಹಿಳೆ ವಿಡಿಯೋವೊಂದನ್ನು ತಯಾರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ವೋಚ್ಚ ನ್ಯಾಯಾಲಯ ಕೂಡಲೆ ಮಧ್ಯ ಪ್ರವೇಶಿಸಿ ಈ ಟ್ರಿಪಲ್ ತಲಾಖ್ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.[ಗಂಡನಿಗೇ ತಲಾಖ್ ನೀಡಿದ ದಿಟ್ಟ ಮುಸ್ಲಿಂ ಮಹಿಳೆ!]

Muslim woman threatens to convert to Hinduism

ಹನ್ನೆರಡು ವರ್ಷಗಳ ಹಿಂದೆ ಅಸಿಫ್ ಎಂಬಾತನನ್ನು ಆಕೆ ಮದುವೆಯಾಗಿದ್ದಳು. ನಾಲ್ಕು ವರ್ಷ ಸಂಸಾರ ಸಾಗಿಸಿದ ನಂತರ ಆತ ಮೂರು ಬಾರಿ ತಲಾಖ್ ಹೇಳಿ ಆಕೆಗೆ ವಿಚ್ಛೇದನ ನೀಡಿದ್ದ. ಈಗ ಸುಪ್ರೀಂ ಕೋರ್ಟಿನಲ್ಲಿ ತಲಾಖ್ ಕುರಿತಂತೆ ವಾದ ಮಂಡನೆಯಾಗುತ್ತಿರುವಾಗ ಆಕೆ ತಿರುಗಿಬಿದ್ದಿದ್ದಾಳೆ.[ತಲಾಖ್ ವಿರುದ್ಧ ಹನುಮಾನ್ ಮೊರೆಹೋದ ಮುಸ್ಲಿಂ ಮಹಿಳೆಯರು]

ನನಗೆ ಆಗಿರುವ ಅನುಭವವನ್ನು ಪರಿಗಣನೆಗೆ ತೆಗೆದುಕೊಂಡರೆ ಹಿಂದೂ ಧರ್ಮಕ್ಕೆ ಮತಾಂತರವಾಗುವುದು ಒಳ್ಳೆಯದು. ಏಕೆಂದರೆ, ಹಿಂದೂ ಧರ್ಮದಲ್ಲಿ ಇಂತಹ ಅನಿಷ್ಟಗಳು ನಡೆಯುವುದಿಲ್ಲ. ನಾನು ಮುಸ್ಲಿಂ ಮಹಿಳೆಯಾಗಿ ಸಾಕಷ್ಟು ಅನುಭವಿಸಿದ್ದೇನೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

ನಾಲ್ಕು ವರ್ಷಗಳ ನಂತರ ಆತ ಆಕೆಗೆ ತಲಾಖ್ ನೀಡಿದ್ದರೂ, 40 ದಿನಗಳ ಹಲಾಲ್ ಅವಧಿಯ ನಂತರ ಇಬ್ಬರ ನಡುವೆ ಸಂಧಾನ ಮಾಡಿದ್ದರಿಂದ ಇಬ್ಬರೂ ಮತ್ತೆ ಒಟ್ಟಾಗಿ ಜೀವನ ಸಾಗಿಸುತ್ತಿದ್ದರು. ಆದರೆ, ನಂತರವೂ ಆಕೆಯ ಬದುಕು ಬದಲಾಗಲೇ ಇಲ್ಲ.[ತಲಾಖ್ ಹೇಳಿ 3 ತಿಂಗಳು ವಾಪಸ್ ಪಡೆಯದಿದ್ದರೆ 'ವಿಚ್ಛೇದನ'ವೇ? ಸುಪ್ರೀಂ ಪ್ರಶ್ನೆ]

ಆಕೆಯ ಮೇಲೆ ಲೈಂಗಿಕ ಮತ್ತು ದೈಹಿಕ ದೌರ್ಜನ್ಯ ನಡೆಸುತ್ತಲೇ ಇದ್ದ. ಎಲ್ಲದಕ್ಕೂ ಒಂದು ಮಿತಿ, ಅಂತ್ಯ ಇದ್ದೇ ಇರುತ್ತದೆ. ಒಂದು ಆಕೆ, ಗದರಪುರ ಪೊಲೀಸ್ ಸ್ಟೇಷನ್ನಿಗೆ ಹೋಗಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಆತ ಪೊಲೀಸ್ ಸ್ಟೇಷನ್ನಿನಲ್ಲೇ ಮೂರು ಸಾರಿ ತಲಾಖ್ ಹೇಳಿ ಮತ್ತೆ ವಿಚ್ಛೇದನ ನೀಡಿದ್ದಾನೆ. ಹೆಂಡತಿ ಈಗ ತಿರುಗಿಬಿದ್ದಿದ್ದಾಳೆ.

{promotion-urls}

English summary
A muslim woman has threaten to convert to hinduism or commit suicide if triple talaq is not abolished. She is a victim of triple talaq. She has requested prime minister Narendra Modi and Supreme Court of India to intervene, in a video, which has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X