ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಶಕದಲ್ಲಿ ಮುಸ್ಲಿಂ ಜನಸಂಖ್ಯೆ ಶೇ. 24ರಷ್ಟು ಏರಿಕೆ

By Kiran B Hegde
|
Google Oneindia Kannada News

ನವದೆಹಲಿ, ಜ. 23 : ದೇಶದಲ್ಲಿ ಮುಸ್ಲಿ ಸಮುದಾಯದ ಜನಸಂಖ್ಯೆ ತೀವ್ರವಾಗಿ ಏರುತ್ತಿದೆ ಎಂದು ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರು ಆತಂಕ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ಮುಸ್ಲಿಂ ಸಮುದಾಯದವರ ಸಂಖ್ಯೆ ದೇಶದಲ್ಲಿ 2001 - 2011ರ ಅವಧಿಯಲ್ಲಿ ಶೇ. 14.2ಕ್ಕೆ ಏರಿದೆ. ಮೊದಲು ಈ ಪ್ರಮಾಣ ಶೇ. 13.4ರಷ್ಟಿತ್ತು.

ಇದು ಕೋಮುವಾದಿ ಪಟ್ಟ ಹೊತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವರದಿಯಲ್ಲ. ಹಿಂದಿನ ಯುಪಿಎ ಸರ್ಕಾರವೇ ಕಲೆ ಹಾಕಿದ್ದ ಅಂಕಿ ಅಂಶ. ಆದರೆ, ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ವರದಿ ಬಹಿರಂಗಕ್ಕೆ ತಡೆಯೊಡ್ಡಿತ್ತು. [ಮರುಮತಾಂತರವೇಕೆ ತಪ್ಪು?]

ವರದಿಯ ಬಿಡುಗಡೆಗೆ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಹಾಗೂ ಗಣತಿ ಆಯುಕ್ತರಾದ ಸಿ. ಚಂದ್ರಮೌಳಿ ಪುನಃ ಅನುಮತಿ ಕೋರಿದಾಗ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಒಪ್ಪಿಗೆ ಸೂಚಿಸಿದ್ದರು.

muslim

ಎಲ್ಲೆಲ್ಲಿ ಎಷ್ಟು ಪ್ರಮಾಣ ಹೆಚ್ಚಳ : ಮುಸ್ಲಿ ಸಮುದಾಯದ ಜನಸಂಖ್ಯೆ 2001 - 2011ರ ಅವಧಿಯಲ್ಲಿ ಶೇ. 24ರಷ್ಟು ಹೆಚ್ಚಾಗಿದೆ. ಆದರೆ, ಹಿಂದಿನ ದಶಕಕ್ಕೆ ಹೋಲಿಸಿದರೆ ಏರಿಕೆ ಪ್ರಮಾಣ ಕಡಿಮೆಯಾಗಿದೆ. 1991 - 2010ರ ಅವಧಿಯಲ್ಲಿ ಏರಿಕೆ ಪ್ರಮಾಣ ಶೇ. 29ರಷ್ಟಿತ್ತು. [ಮರುಮತಾಂತರಕ್ಕೂ ಕರ್ನಾಟಕಕ್ಕೂ ಲಿಂಕ್ ಇದೆ]

ಬಾಂಗ್ಲಾದೇಶಿ ಅಕ್ರಮ ವಲಸಿಗರಿಂದ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡಿರುವ ರಾಜ್ಯಗಳೆಂದರೆ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಜನಸಂಖ್ಯೆ ಭಾರೀ ಹೆಚ್ಚಳ ಕಂಡಿದೆ. ಅಸ್ಸಾಂನಲ್ಲಿ 2001ರಲ್ಲಿ ಶೇ. 30ರಷ್ಟಿತ್ತು. 2011ಕ್ಕೆ ಶೇ. 34ಕ್ಕೇರಿದೆ. ಪಶ್ಚಿಮ ಬಂಗಾಳದಲ್ಲಿ ಶೇ. 25.2ರಷ್ಟಿತ್ತು. 2011ಕ್ಕೆ ಶೇ. 27.1ಕ್ಕೇರಿದೆ.

ಉತ್ತರಾಖಂಡದಲ್ಲಿ ಶೇ.11.9 ರಿಂದ ಶೇ.13.9ಕ್ಕೇರಿದೆ. ಕೇರಳದಲ್ಲಿ ಶೇ.24.7ರಿಂದ ಶೇ.26.6ಕ್ಕೆ, ಗೋವಾದಲ್ಲಿ ಶೇ.6.8ರಿಂದ ಶೇ.8.4ಕ್ಕೆ, ಜಮ್ಮು ಕಾಶ್ಮೀರದಲ್ಲಿ ಶೆ.67ರಿಂದ ಶೇ.68.3ಕ್ಕೆ, ಹರ್ಯಾಣಾದಲ್ಲಿ ಶೇ.5.8ರಿಂದ ಶೇ.7ಕ್ಕೆ, ನವದೆಹಲಿಯಲ್ಲಿ ಶೇ.11.7 ರಿಂದ ಶೇ.12.9 ಕ್ಕೇರಿದೆ. [ಮದುವೆಗಾಗಿ ಇಸ್ಲಾಂಗೆ ಮತಾಂತರ ಅಸಿಂಧು]

ಇಲ್ಲಿ ಇಳಿಕೆಯಾಗಿದೆ : ದೇಶದೆಲ್ಲೆಡೆ ಮುಸ್ಲಿಮರ ಜನಸಂಖ್ಯೆ ಏರಿದ್ದರೆ, ಇಳಿಕೆ ಕಂಡಿರುವ ಏಕೈಕ ರಾಜ್ಯ ಮಣಿಪುರ. ಇಲ್ಲಿ ಶೇ. 0.4ರಷ್ಟು ಕಡಿಮೆಯಾಗಿದೆ.

English summary
According to the latest census data released by central government shows that Muslim population grows 24% in a decade between 2001 and 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X