ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ತ ವ್ಯಕ್ತಿ ಮುಂಬೈ ಶವಾಗಾರದಲ್ಲಿ ಎದ್ದು ಕುಳಿತ!

|
Google Oneindia Kannada News

ಮುಂಬೈ, ಅಕ್ಟೋಬರ್. 13: ಸತ್ತ ಮಗ ಪುನಃ ಮನೆಗೆ ಬಂದ, ಶವ ಹೊತ್ತುಕೊಂಡು ಹೋಗುವಾ ಗ ಮಲಗಿದ್ದ ವ್ಯಕ್ತಿ ಎದ್ದು ನಿಂತ.. ಮಣ್ಣು ಮಾಡಿದ್ದ ವ್ಯಕ್ತಿ ತಿಂಗಳುಗಳ ನಂತರ ಮನೆಗೆ ಬಂದ ಈ ಬಗೆಯ ಅನೇಕ ಸುದ್ದಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಮುಂಬೈನಲ್ಲಿ ಇನ್ನೇನು ಶವ ಪರೀಕ್ಷೆ ಮಾಡಬೇಕು ಎಂದಾಗ ಶವ ಎದ್ದು ನಿಂತಿದೆ. ಡಾಕ್ಟರ್ ಕತೆ ಹೇಗಾಗಿರಬೇಡ!

ಮುಂಬೈನ ಲೋಕಮಾನ್ಯ ತಿಲಕ್ ಆಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ನಗರದ ಬಸ್‌ಸ್ಟಾಂಡ್‌ನ‌ಲ್ಲಿ ಪ್ರಜ್ಞೆ ಇಲ್ಲದಂತೆ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತು. ಪರೀಕ್ಷೆ ಮಾಡಿದವರು ಈತ ಸಾವಿಗೀಡಾಗಿದ್ದಾನೆ ಎಂದು ವರದಿ ನೀಡಿದ್ದರು.

death

ನಂತರ ಆಸ್ಪತ್ರೆ ಸಿಬ್ಬಂದಿ ದೇಹಕ್ಕೆ ಬಟ್ಟೆ ಸುತ್ತಿ ಶವಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ. ಅಷ್ಟರವರೆಗೂ ಏನೂ ಸಮಸ್ಯೆ ಇರಲಿಲ್ಲ. ಆದರೆ.. ಇನ್ನೇನು ದೇಹಕ್ಕೆ ಚಾಕು ಬೀಳಬೇಕು ಎನ್ನುವಷ್ಟರಲ್ಲಿ ವ್ಯಕ್ತಿ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ನಂತರ ವ್ಯಕ್ತಿಯನ್ನು ಮರಳಿ ವಾರ್ಡ್‌ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.

ವ್ಯಕ್ತಿಯನ್ನು 50 ವರ್ಷದ ಪ್ರಕಾಶ್ಎಂದು ಗುರುತಿಸಲಾಗಿದೆ. ಆದರೆ ವೈದ್ಯರು ವ್ಯಕ್ತಿ ಸತ್ತಿದ್ದಾನೆ ಎಂದು ಯಾವ ಆಧಾರದಲ್ಲಿ ವರದಿ ನೀಡಿದರು ಎನ್ನುವುದು ಮಾತ್ರ ವಿಚಿತ್ರ. ಅಕ್ಟೋಬರ್ 11 ರಂದೇ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

English summary
Doctors, who were present in the mortuary of Sion Hospital in Mumbai, got scared when a dead man started breathing suddenly. The man, who was believed to be dead, was lucky enough as he regained consciousness minutes before postmortem. The doctors were preparing for the postmortem when they noticed the "dead man" moving. The incident took place in the hospital in Mumbai on Sunday, Oct 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X