ಮುಂಬೈ-ಗೋವಾ ಸೇತುವೆ ಧ್ವಂಸ, ಸಹಾಯವಾಣಿ ಇಲ್ಲಿದೆ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 03: ಮಹಾರಾಷ್ಟ್ರದ ಮಹಾಡ್ ಬಳಿಯಲ್ಲಿ ಸಾವಿತ್ರಿ ನದಿ ಆರ್ಭಟಿಸುತ್ತಿದೆ. ಮುಂಬೈ ಹಾಗೂ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆ ಕೊಚ್ಚಿ ಹೋಗಿದೆ. ಮಂಗಳವಾರ ರಾತ್ರಿ ಸಂಭವಿಸಿದ ಈ ದುರ್ಘಟನೆಯಿಂದ 22 ಮಂದಿ ನಾಪತ್ತೆಯಾಗಿದ್ದಾರೆ.

ಬುಧವಾರ ಮುಂಜಾನೆ ಸೇತುವೆ ಸಂಪೂರ್ಣ ಕುಸಿದಿದ್ದು, ಸೇತುವೆ ಮೇಲೆ ಚಲಿಸುತ್ತಿದ್ದ 2 ಬಸ್ ನೀರು ಪಾಲಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ ಎಂದು ರಾಯ್ ಘಡ್ ಜಿಲ್ಲಾಧಿಕಾರಿ ಶೀತಲ್ ಉಗಳೆ ಹೇಳಿದ್ದಾರೆ.

Mumbai-Goa highway bridge collapse: 2 buses with 22 people onboard missing

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾದ ಪರಿಣಾಮ ಮಹಾಬಲೇಶ್ವರದಲ್ಲಿರುವ ಸಾವಿತ್ರಿನದಿಯ ನೀರಿನ ಮಟ್ಟ ಅಧಿಕವಾಗಿದೆ. ಮುಂಬೈನ ಹೊರವಲಯದ ಮಹಾಡ್ ಬಳಿ ಸೇತುವೆ ಕುಸಿತ ಕಂಡಿದೆ.


ಸದ್ಯಕ್ಕೆ 2 ಬಸ್ ನೀರುಪಾಲಾಗಿರುವ ಮಾಹಿತಿ ಮಾತ್ರ ಸಿಕ್ಕಿದೆ. ಸಾವು ನೋವಿನ ಸಂಪೂರ್ಣ ಇನ್ನೂ ಸಿಕ್ಕಿಲ್ಲ. ಎರಡು ಬಸ್ ಗಳು ರತ್ನಗಿರಿಯಿಂದ ಹೊರಟಿದ್ದರ ಬಗ್ಗೆ ಮಾಹಿತಿ ಇದೆ.

ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್​ಡಿಆರ್​ಎಫ್) ತಂಡ ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ.

ಸೇತುವೆ ಕುಸಿತಕಂಡ ಸ್ಥಳದಲ್ಲಿ ಜನದಟ್ಟಣೆ ಹಾಗೂ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

ಪರ್ಯಾಯ ತಾತ್ಕಾಲಿಕ ಕಿರು ಸೇತುವೆ ವ್ಯವಸ್ಥೆ ಮಾಡಲಾಗಿದ್ದು, ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.


English summary
Around 22 people and several vehicles feared to have been swept away after a bridge across the Savitri river near Mahad on Mumbai-Goa Highway collapsed on late Tuesday.
Please Wait while comments are loading...