ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಪೀಡಿತ ಬಾಲಕನಿಗೆ ಪೊಲೀಸ್ ಸಮವಸ್ತ್ರದ ಪುಳಕ

|
Google Oneindia Kannada News

ಮುಂಬೈ, ಆಗಸ್ಟ್. 11: ಮುಂಬೈ ಫೋರನಿಗೆ ಪೊಲೀಸ್ ಆಗುವ ಕನಸು. ಆದರೆ ಕ್ಯಾನ್ಸರ್ ಎಂಬ ಮಹಾಮಾರಿ ಅವನನ್ನು ಸುತ್ತಿಕೊಂಡು ಹಿಂಸೆ ಮಾಡುತ್ತಲಿದೆ. ಆದರೆ ಆತನ ಕನಸನ್ನು ಮುಂಬೈ ಪೊಲೀಸರು ಪೂರೈಸಿದ್ದಾರೆ.

ಸೋಮವಾರ ಒಂದು ದಿನದ ಮಟ್ಟಿಗೆ ಬಾಲಕ ಕುನ್ವರ್ ಸಿಂಗ್ ಪಾಟೀಲ್ ಮುಂಬೈ ಠಾಣೆಯೊಂದರ ಹಿರಿಯ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ. ಮಕ್ಕಳ ಮುಗ್ಧ ಮನಸ್ಸಿನಲ್ಲಿ ನೂರಾರು ಕನಸುಗಳಿರುತ್ತವೆ. ಆದರೆ ವಿಧಿ ಅವರನ್ನು ಅರ್ಧ ದಾರಿಯಲಲ್ಲೆ ತನ್ನತ್ತ ಕರೆದುಕೊಳ್ಳಬೇಕು ಎಂದು ಕೆಟ್ಟ ತೀರ್ಮಾನ ಮಾಡಿರುತ್ತದೆ. ಅರಳಬೇಕಾದ ಜೀವ ಮಾರಕ ಕಾಯಿಲೆಯಡಿ ನರಳಿ ಪ್ರಾಣ ಕಳೆದುಕೊಳ್ಳುವ ಸಂಗತಿ ಊಹಿಸಿಕೊಳ್ಳಲು ಅಸಾಧ್ಯ.

ಮಕ್ಕಳ ಬಾಲ್ಯದ ಆಸೆಗಳೇ ಹಾಗೆ. ಹಿಂದೆ ಅತಿ ಕಿರಿಯ ಪೈಲಟ್ ಚಂದನ್ ನನ್ನು ಮಹಾಮಾರಿ ಹೊತ್ತೊಯ್ದಿತ್ತು. ಹೈದ್ರಾಬಾದ್ ನ ಪೊಲೀಸರು ಬಾಲಕ 10 ವರ್ಷದ ಬಾಲಕ ಸಾದಿಕ್ ನನ್ನು ಪೊಲೀಸ್ ಕಮಿಷನರ್ ಆಗಿ ಮಾಡಿ ಸೆಲ್ಯೂಟ್ ಹಾಕಿದ್ದರು. ಮುಂಬೈ ಪೊಲೀಸರೇ ಪುಟ್ಟ ಬಾಲಕಿ ಮೆಹಕ್ ಸಿಂಗ್ ಆಸೆಯನ್ನು ನೆರವೇರಿಸಿದ್ದರು. ಇದೀಗ ಬಾಲಕ ಕುನ್ವರ್ ಸಿಂಗ್ ಪಾಟೀಲ್ ನ ಬಯಕೆನ್ನು ಪೂರ್ಣ ಮಾಡಿದ್ದಾರೆ.

[ಪಿಟಿಐ ಚಿತ್ರ]

ಪೊಲೀಸ್ ಗತ್ತಿನಲ್ಲಿ ಕುನ್ವರ್ ಸಿಂಗ್

ಪೊಲೀಸ್ ಗತ್ತಿನಲ್ಲಿ ಕುನ್ವರ್ ಸಿಂಗ್

ಕ್ಯಾನ್ಸರ್ ಪೀಡಿತ ಬಾಲಕ ಕುನ್ವರ್ ಸಿಂಗ್ ಪಾಟೀಲ್ ಮುಂಬೈ ಠಾಣೆಯೊಂದರ ಹಿರಿಯ ಪೊಲೀಸ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ. ಬಾಲಕನ ಆಸೆಯನ್ನು ಮುಂಬೈ ಪೊಲೀಸರು ಪೂರೈಸಿದರು.

ಪೈಲಟ್ ಚಂದನ್ ನ್ನು ನುಂಗಿದ ಕ್ಯಾನ್ಸರ್

ಪೈಲಟ್ ಚಂದನ್ ನ್ನು ನುಂಗಿದ ಕ್ಯಾನ್ಸರ್

ಕ್ಯಾನ್ಸರ್ ವಿರುದ್ಧ ಹೋರಾಡುತ್ತ ವಾಯು ಸೇನೆ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಭಾರತದ ಲಕ್ಷಾಂತರ ಜನರ ಹೃದಯ ಗೆದ್ದಿದ್ದ ಚಂದನ್ ಎಂಬ ಸ್ಫೂರ್ತಿಯ ಸೆಲೆ ಫೆಬ್ರವರಿ ತಿಂಗಳಲ್ಲಿ ಬತ್ತಿಹೋಗಿತ್ತು. ಕ್ಯಾನ್ಸರ್ ಮಹಾಮಾರಿ ಭಾರತದ ಅತ್ಯಂತ ಕಿರಿಯ ಪೈಲಟ್ ಚಂದನ್ ಜೀವವನ್ನು ವಿಶ್ವ ಕ್ಯಾನ್ಸರ್ ದಿನಾಚರಣೆ ದಿನವೇ ಬಲಿ ಪಡೆದಿದ್ದು ದುರ್ದೈವ.[ಪುಟಾಣಿ ಚಂದನ್ ಹೋರಾಟಕ್ಕೆ ಅಂತ್ಯ ಹಾಡಿದ ಕ್ಯಾನ್ಸರ್]

ಹೈದರಾಬಾದ್ ಪೊಲೀಸ್ ಕಮಿಷನರ್ ಸಾದಿಕ್

ಹೈದರಾಬಾದ್ ಪೊಲೀಸ್ ಕಮಿಷನರ್ ಸಾದಿಕ್

ಹೈದರಾಬಾದ್‌ನ ಹತ್ತು ವರ್ಷದ ಬಾಲಕ ಸಾದಿಕ್‌ನ ಪೊಲೀಸ್ ಕಮಿಷನರ್ ಕಾಸೆಯನ್ನು ಸಾಕಾರ ಮಾಡಿದ್ದನ್ನು ಮರೆಯುವಂತಿಲ್ಲ. ಬಾಲಕನ ಕನಸಿಗೆ ಬೆಲೆ ಕೊಟ್ಟ ಪೊಲೀಸ್‌ ಅಧಿಕಾರಿಗಳು ಒಂದು ಇಡೀ ಹೈದರಾಬಾದ್ ಕಾನೂನು ಸುವ್ಯವಸ್ಥೆಯನ್ನು ಸುಪರ್ದಿಗೆ ವಹಿಸಿತ್ತು.[10 ವರ್ಷದ ಬಾಲಕ ಹೈದರಾಬಾದಿನ ಪೊಲೀಸ್ ಕಮಿಷನರ್]

ಬಾಲಕಿ ಮಾಹೆಕ್ ಸಿಂಗ್

ಬಾಲಕಿ ಮಾಹೆಕ್ ಸಿಂಗ್

ಎಲುಬಿನ ಕ್ಯಾನ್ಸರ್ ಗೆ ತುತ್ತಾಗಿದ್ದ ಉತ್ತರದ ಪ್ರದೇಶದ ಪ್ರತಾಪ್‌ಘಡದ ಬಾಲಕಿ ಮಾಹೆಕ್ ಸಿಂಗ್ ಕನಸನ್ನು ಮುಂಬೈ ಪೊಲೀಸರು ನನಸು ಮಾಡಿದ್ದರು. ಎನ್‌ಜಿಓ ಮೇಕ್-ಎ-ವಿಶ್ ಫೌಂಡೇಶನ್ ಆಫ್ ಇಂಡಿಯಾ ಮಾಡಿದ ಯತ್ನಕ್ಕೆ ಟಾಟಾ ಮೆಮೋರಿಯಲ್ ಸೆಂಟರ್ ಹಾಗೂ ಮುಂಬೈ ಪೊಲೀಸರು ಕೈಜೋಡಿಸಿ ಆಕೆಯನ್ನು ಒಂದು ದಿನದ ಮಟ್ಟಿಗೆ ಹಿರಿಯ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಳು.[7 ವರ್ಷದ ಬಾಲಕಿ ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್!]

English summary
The boy, who is suffering from cancer had his dream come true on Monday and got to be senior inspector for a day at a Mumbai police station. Young Kunwar Singh Patil was occupies senior inspector’s chair in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X