ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ನೇಮಕಾತಿ ಹಗರಣ ಆರೋಪಿ ನಿಗೂಢ ಸಾವು

By Mahesh
|
Google Oneindia Kannada News

ನವದೆಹಲಿ, ಮಾ.25: ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(Vyapam) ನೇಮಕಾತಿ ಹಗರಣದ ಅವ್ಯವಹಾರದಲ್ಲಿ ಸಿಲುಕಿರುವ ರಾಜ್ಯಪಾಲ ರಾಮ್‌ ನರೇಶ್‌ ಯಾದವ್‌ ಅವರ ಪುತ್ರ ಶೈಲೇಶ್ ಅವರು ಬುಧವಾರ ಬೆಳಗ್ಗೆ ಲಕ್ನೋದಲ್ಲಿ ಸಾವನ್ನಪ್ಪಿದ್ದಾರೆ. ಶೈಲೇಶ್ ಅವರು ಕೂಡಾ ನೇಮಕಾತಿ ಹಗರಣದ ಸಹ ಆರೋಪಿಯಾಗಿದ್ದರು.

ಶೈಲೇಶ್ ಅವರು ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ. ಅವರ ನಿವಾಸದಲ್ಲಿ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಲಕ್ನೋ ಪೊಲೀಸರು ಹೇಳಿದ್ದಾರೆ. ಈ ನಡುವೆ ರಾಮ್ ನರೇಶ್ ಅವರು ಮಗನ ಸಾವಿನ ದುಃಖ ತಾಳಲಾರದೆ ಕುಸಿದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಐಸಿಯುನಲ್ಲಿರಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

MP Governor Ram Naresh Yadav's son Shailesh, accused in PEB scam found dead

ಭ್ರಷ್ಟಾಚಾರ ತಡೆ ಖಾಯ್ದೆ ಅಡಿಯಲ್ಲಿ ಯಾದವ್‌ ಅವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ವಿಶೇಷ ತನಿಖಾ ತಂಡ(ಎಸ್ ಐಟಿ) ಹಾಗೂ ಸ್ಪೆಷಲ್ ಟಾಸ್ಕ್ ಫೋರ್ಸ್ ತನಿಖೆ ನಡೆಸುತ್ತಿದೆ. [ಇದೇ ಮೊದಲು: ರಾಜ್ಯಪಾಲರ ಮೇಲೆ ಎಫ್ಐಆರ್]

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಯಾದವ್ ಅವರನ್ನು ಯುಪಿಎ ಅಧಿಕಾರ ಅವಧಿಯಲ್ಲಿ 2011ರಲ್ಲಿ ಮಧ್ಯಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು. 2016ರ ಸೆಪ್ಟೆಂಬರ್ ತನಕ ಅವರ ಅಧಿಕಾರ ಅವಧಿ ಇದೆ.

ಎಂಪಿಪಿಇಬಿ ಅಥವಾ ವ್ಯಾಪಂ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಶಿಕ್ಷಣಾಧಿಕಾರಿ ಧನರಾಜ್ ಯಾದವ್ ಅವರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಈ ಪ್ರಕರಣದಲ್ಲಿ ಗವರ್ನರ್ ಯಾದವ್ ಕೈವಾಡ ಇರುವುದು ಪತ್ತೆಯಾಯಿತು. ರಾಜ್ಯಪಾಲರಲ್ಲದೆ ಅನೇಕ ಐಎಎಸ್ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಈ ಬಹುಕೋಟಿ ಹಗರಣದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. (ಪಿಟಿಐ)

English summary
MP Governor Ram Naresh Yadav's son Shailesh Yadav, an accused in MPPEB or Vyapam scam has been found dead at his residence in Lucknow. His body was found on the floor of his room, police rushing to the spot
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X