ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇ ಮೊದಲು: ರಾಜ್ಯಪಾಲರ ಮೇಲೆ ಎಫ್ಐಆರ್ ದಾಖಲು

By Mahesh
|
Google Oneindia Kannada News

ಭೋಪಾಲ್, ಫೆ.24: ಭಾರತದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಪಾಲರೊಬ್ಬರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿ ಇತಿಹಾಸ ನಿರ್ಮಿಸಿದ್ದಾರೆ. ಮಧ್ಯಪ್ರದೇಶ ರಾಮ್ ನರೇಶ್ ಯಾದವ್ ಅವರು ನೇಮಕಾತಿ ಹಗರಣದಲ್ಲಿ ಸಿಲುಕಿದ್ದಾರೆ.

ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(Vyapam) ನೇಮಕಾತಿ ಹಗರಣದ ಅವ್ಯವಹಾರದಲ್ಲಿ ರಾಜ್ಯಪಾಲ ರಾಮ್‌ ನರೇಶ್‌ ಯಾದವ್‌ ಅವರು ಭಾಗಿಯಾಗಿರುವ ಬಗ್ಗೆ ಸಾಕಷ್ಟು ಪುರಾವೆ ಸಿಕ್ಕಿದೆ. ಅವರ ವಿರುದ್ಧ ಸ್ಪೆಷಲ್‌ ಟಾಸ್ಕ್ ಫೊರ್ಸ್‌ ಎಫ್ಐಆರ್‌ ದಾಖಲಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆಶೀಶ್ ಖಾರೆ ಹೇಳಿದ್ದಾರೆ.

MP governor being booked for Vyapam scam: Police
ಭ್ರಷ್ಟಾಚಾರ ತಡೆ ಖಾಯ್ದೆ ಅಡಿಯಲ್ಲಿ ಯಾದವ್‌ ಅವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಹೈಕೋರ್ಟ್ ನಿರ್ದೇಶನದಂತೆ ವಿಶೇಷ ತನಿಖಾ ತಂಡ(ಎಸ್ ಐಟಿ) ಹಾಗೂ ಸ್ಪೆಷಲ್ ಟಾಸ್ಕ್ ಫೋರ್ಸ್ ತನಿಖೆ ನಡೆಸಲಿದೆ ಎಂದು ಖಾರೆ ತಿಳಿಸಿದರು.

ಎಸ್ ಐಟಿ ಮುಖ್ಯಸ್ಥ ಚಂದ್ರೇಶ್ ಭೂಷಣ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಖ್ಯಸ್ಥ ದಿಗ್ವಿಜಯ್ ಸಿಂಗ್ ಅವರು ಕೂಡಾ ಈ ಬಗ್ಗೆ ದೂರು ನೀಡಿದ್ದರು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ತನಕ ಈ ಹಗರಣದಲ್ಲಿ 539 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. 218ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ.

ಐಎಎನ್ಎಸ್

English summary
The process to book Madhya Pradesh Governor Ram Naresh Yadav for irregularities in MP professional examination board (Vyapam) has been initiated, a police officer said Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X