ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮೋಹನ್ ಸಿಂಗ್ 'ಪಿಎಂ' ಆದ ಕಥೆ ತೆರೆಗೆ

By Mahesh
|
Google Oneindia Kannada News

ನವದೆಹಲಿ, ಜೂನ್ 13: 'ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಯಸದೇ ಬಂದ ಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ ಎಂಬುದು ಅವರಿಗೆ ಹಿಂದಿನ ದಿನದವರೆಗೂ ತಿಳಿದಿರಲಿಲ್ಲ' ಸಂಜಯ್ ಬರು ಬರೆದಿರುವ ಪುಸ್ತಕದ ಸಾಲುಗಳು ಸಿನಿಮಾವೊಂದರ ಡೈಲಾಗ್ ಆಗಿ ಪರಿವರ್ತನೆಗೊಂಡಿದೆ. ಆಕಸ್ಮಿಕವಾಗಿ ಪಿಎಂ ಆದ ಎಂಎಂ ಸಿಂಗ್ ಕಥೆ ಬೆಳ್ಳಿತೆರೆಯ ಮೇಲೆ ಬರಲಿದೆ.

ಮನಮೋಹನ್ ಸಿಂಗ್ ಆಡಳಿತಾವಧಿ 2004 ರಿಂದ 2008 ರವರೆಗೆ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ : ಮೇಕಿಂಗ್ ಆಂಡ್ ಅನ್​ವೆುೕಕಿಂಗ್ ಆಫ್ ಮನಮೋಹನ್ ಸಿಂಗ್' ಎಂಬ ಕಾದಂಬರಿ ಕಮ್ ಜೀವನಚರಿತ್ರೆ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಈಗ ಇದೇ ಪುಸ್ತಕ ಆಧಾರಿತ ಚಿತ್ರ ನಿರ್ಮಾಣ ಹಂತದಲ್ಲಿದೆ. 2017 ರ ಅಂತ್ಯಕ್ಕೆ ಚಿತ್ರ ತೆರೆಕಾಣುವ ನಿರೀಕ್ಷೆಯಿದೆ.[ಮಾಜಿ ಪ್ರಧಾನಿ ಸಿಂಗ್ ಟ್ರಾವೆಲ್ ಶೀಟ್ ಬಹಿರಂಗ]

Movie on Manmohan Singh based on Sanjaya Baru’s book

ಮನಮೋಹನ್​ಸಿಂಗ್ ಹೇಗೆ ಕಾಂಗ್ರೆಸ್ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದರು ಎಂಬ ಅಂಶಗಳು ಚಿತ್ರಿತವಾಗಲಿವೆ. ಈ ಚಿತ್ರವು 12 ಕ್ಕೂ ಹೆಚ್ಚು ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ಮಾಣ ಮಾಡುತ್ತಿರುವ ಸುನಿಲ್ ಬೊಹ್ರಾ ಮತ್ತು ತಂಡದವರು ಎಕಾನಾಮಿಕ್ಸ್ ಟೈಮ್ಸ್ ಗೆ ತಿಳಿಸಿದ್ದಾರೆ. ಆಗಸ್ಟ್ 30ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ಟೀಸರ್ ನಲ್ಲೇ ವಿವಾದಿತ ಅಂಶಗಳು ಕಾಣಬಹುದಾಗಿದ್ದು, ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಸರ್ಕಾರಿ ಗೌರವದಿಂದ ಅಂತ್ಯಸಂಸ್ಕಾರ ನಡೆಸಲಿಲ್ಲ ಏಕೆ ಎಂಬ ಪ್ರಶ್ನೆ ಕಾಣಿಸುತ್ತದೆ.

ಪಂಜಾಬ್ ಮೂಲದ ನಟರೊಬ್ಬರು ಮನಮೋಹನ್ ಸಿಂಗ್ ಪಾತ್ರ ನಿರ್ವಹಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪಾತ್ರಕ್ಕಾಗಿ ಸೂಕ್ತ ಕಲಾವಿದರನ್ನು ಹುಡುಕಲಾಗುತ್ತಿದೆ, ಸಂಜಯ್ ಬರು ಪಾತ್ರವನ್ನು ಮನೋಜ್ ಬಾಜಪೇಯಿ ನಿರ್ವಹಿಸಲಿದ್ದಾರೆ.

English summary
'Manmohan Singh - The Accidental Prime Minister', a Bollywood flick that is slated to be released towards the end of 2017. The film, based on Sanjay Baru's controversial book 'The Accidental Prime Minister: the Making and Unmaking of Manmohan Singh'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X