ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಧಾನಕ್ಕೆ ಒಪ್ಪದಿದ್ದರೆ ಕಾನೂನು ತಂದು ರಾಮಮಂದಿರ ನಿರ್ಮಾಣ: ಸ್ವಾಮಿ

ರಾಮ ಜನ್ಮ ಭೂಮಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಿದ್ದರೆ ನಮ್ಮದೇನೂ ಅಭ್ಯಂತರ ಇಲ್ಲ. ಇಲ್ಲ ಅಂದರೆ ಕೇಂದ್ರ ಸರಕಾರ ಅ ಬಗ್ಗೆ ಕಾನೂನು ಜಾರಿಗೆ ತಂದು, ರಾಮಮಂದಿರ ನಿರ್ಮಾಣ ಮಾಡ್ತೀವಿ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ

By ವಿಕಾಸ್ ನಂಜಪ್ಪ
|
Google Oneindia Kannada News

ಲಖನೌ, ಮೇ 5: ಮುಸ್ಲಿಮರು ಸಂಧಾನಕ್ಕೆ ಸಿದ್ಧರಿಲ್ಲ ಅಂದರೆ ಅದನ್ನು ಮಾಡುವುದಕ್ಕೆ ಕೋರ್ಟ್ ಇದೆ ಎಂದು ಬಿಜೆಪಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಯೋಧ್ಯಾ ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಮಾತನಾಡಿದ್ದಾರೆ. ಅಲಹಾಬಾದ್ ಹೈ ಕೋರ್ಟ್ ನಲ್ಲಿ ನಾವಿಗಾಗಲೇ ಗೆದ್ದಿದ್ದೀವಿ. ರಾಮ ಜನಿಸಿದ್ದು ಅದೇ ಸ್ಥಳದಲ್ಲಿ ಎಂದು ಹೇಳಲಾಗಿದೆ ಅಂತ ಸ್ವಾಮಿ ಹೇಳಿದ್ದಾರೆ.

ನೀವು ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಮಾತನಾಡ್ತೀರಿ ಅನ್ನೋದಾದರೆ ಮಸೀದಿಯನ್ನು ಎಲ್ಲಾದರೂ ಕಟ್ಟಿಕೊಳ್ಳಿ. ಆದರೆ ರಾಮ ಜನ್ಮಸ್ಥಳದಲ್ಲಿ ಅಲ್ಲ ಎಂದುಸ್ವಾಮಿ ಹೇಳಿದ್ದಾರೆ. ಮಸೀದಿ ಕಟ್ಟಿದ ಜಾಗದಲ್ಲಿ ದೇವಾಲಯವಿತ್ತು ಎಂಬುದನ್ನು ಹಟ ಹಿಡಿದು ಕೂತಿರುವ ಮುಸ್ಲಿಂ ಧರ್ಮಗುರುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನಂತರ ತಿಳಿಸಿದ್ದಾರೆ.[25 ವರ್ಷಗಳ ನಂತರ ಬಾಬ್ರಿ ಮಸೀದಿ ಕೆಡವಿದ ಕೇಸ್ ರೀ ಕ್ಯಾಪ್]

Mosque can be constructed anywhere, but not where Lord Ram took birth: Swamy

ಸುಪ್ರೀಂ ಕೋರ್ಟ್ ಮೂಲಕ ವಿವಾದ ಪರಿಹರಿಸಿಕೊಳ್ಳಬಹುದು. ಸಂವಿಧಾನದ ಪರಿಚ್ಛೇದ 25ರ ಪ್ರಕಾರ ನನಗೆ ಮೂಲಭೂತ ಹಕ್ಕು ಇದೆ. ನನ್ನ ನಂಬಿಕೆಗೆ ಅನ್ವಯ ನಡೆದುಕೊಳ್ಳುವ ಸ್ಥಳದಲ್ಲಿ ಪೂಜೆ ಮಾಡುವುದು ಮೂಲಭೂತ ಹಕ್ಕು. ಆದರೆ ಅವರು ಆಸ್ತಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಸ್ವಾಮಿ ಹೇಳಿದ್ದಾರೆ.

ವಿವಾದಿತ ಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ಬೆಂಬಲ ನೀಡಬೇಕು ಎಂದು ಸ್ವಾಮಿ ಒತ್ತಾಯಿಸಿದ್ದರು. ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ಆವರು ರಾಮ ಜನ್ಮ ಸ್ಥಳ ಎಂದು ಖಾತ್ರಿ ಪಡಿಸಿರುವ ಸ್ಥಳದಲ್ಲಿ ಮಾತ್ರ, ಅಂದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದ್ದರು.[ರಾಮಮಂದಿರ ನಿರ್ಮಾಣ: ಸಿಎಂ ಯೋಗಿ ಕೈಲಿದೆ 'ಪವರ್' ಅಸ್ತ್ರ]

ರಾಜೀ-ಸಂಧಾನದ ಮೂಲಕ ಈ ವಿಚಾರ ಬಗೆಹರಿದರೆ ಸರಿ. 2018ರ ಏಪ್ರಿಲ್ ನಲ್ಲಿ ನಮಗೆ ರಾಜ್ಯಸಭೆಯಲ್ಲಿ ಬಹುಮತ ಲಭಿಸುತ್ತದೆ. ಆಗ ಆಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಕಾನೂನು ಜಾರಿಗೆ ತರುತ್ತೇವೆ ಎಂದು ಸ್ವಾಮಿ ತಿಳಿಸಿದ್ದಾರೆ.

English summary
If the Muslims are not ready for a compromise then the court is there to do it, BJP leader and Rajya Sabha MP, Subramanian Swamy said on the Ram Temple issue at Ayodhya. We have already won in the Allahabad High Court, which has ruled that Lord Rama was born at a place of central dome of faith, Swamy also said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X