ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇ ಸರ್ವೇ: ಅತ್ಯುತ್ತಮ ಪ್ರಧಾನಿಯಾಗಿ ಮೋದಿ ಮುಂದುವರಿಕೆ

|
Google Oneindia Kannada News

ಇಂಡಿಯಾ ಟುಡೇ ಸಮೂಹ 'ಮೂಡ್ ಆಫ್ ದಿ ನೇಶನ್' ಶೀರ್ಷಿಕೆಯಡಿಯಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಖಾರ್ವಿ ಇನ್ಸೈಟ್ಸ್ ಸಂಸ್ಥೆ ಇಂಡಿಯಾ ಟುಡೇ ಪರವಾಗಿ ದೇಶಾದ್ಯಂತ ಸಮೀಕ್ಷೆ ನಡೆಸಿದ್ದು, ಪ್ರಧಾನಿಯಾಗಿ ಮೋದಿ ಈಗಲೂ 'ಫೇವರೇಟ್' ಎನ್ನುವ ಫಲಿತಾಂಶ ಹೊರಬಿದ್ದಿದೆ.

19 ರಾಜ್ಯಗಳ 97 ಲೋಕಸಭಾ ಕ್ಷೇತ್ರದ 13,576 ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. ಜನವರಿ 24ರಿಂದ ಫೆಬ್ರವರಿ 5ರ ವರೆಗಿನ ಅವಧಿಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. (ಸಮೀಕ್ಷೆ: ಚೀನಾ, ರಷ್ಯಾಗಿಂತ ನಾವೇ ಉತ್ತಮ)

ಆಂಧ್ರ, ಅಸ್ಸಾಂ, ಬಿಹಾರ, ಛತ್ತೀಸಗಢ, ದೆಹಲಿ, ಗುಜರಾತ್, ಹರ್ಯಾಣ, ಜಾರ್ಖಂಡ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಸರ್ವೇ ನಡೆಸಲಾಗಿದೆ.

ಮೋದಿ ಅತ್ಯುತ್ತಮ ಪ್ರಧಾನಿ ಎನ್ನುವ ಸ್ಥಾನ ಅಭಾದಿತವಾಗಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಜನಪ್ರಿಯತೆ ಕಮ್ಮಿಯಾಗಿರುವುದು ಸರ್ವೇಯಲ್ಲಿನ ಪ್ರಮುಖಾಂಶ. (ಸಾವಿರ ಮದ್ರಸಾಗಳಲ್ಲಿ ಸಮೀಕ್ಷೆ ಆರಂಭ)

ಇತ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಜನಪ್ರಿಯತೆ ಹೋದ ವರ್ಷಕ್ಕಿಂತ ಗಣನೀಯ ಏರಿಕೆ ಕಂಡು ಬಂದಿರುವುದು ಕಾಂಗ್ರೆಸ್ ಹೈಕಮಾಂಡ್ ಅಂಗಣಕ್ಕೆ ಸಂತಸದ ಸುದ್ದಿ. ಸರ್ವೇಯಲ್ಲಿನ ಇತರ ಪ್ರಮುಖ ಅಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಇಂದಿರಾ ಗಾಂಧಿ

ಇಂದಿರಾ ಗಾಂಧಿ

ಭಾರತ ಕಂಡ ಇದುವರೆಗಿನ ಅತ್ಯುತ್ತಮ ಪ್ರಧಾನಿಯಾರು ಎನ್ನುವ ಪ್ರಶ್ನೆಗೆ ಸಮೀಕ್ಷೆಯಲ್ಲಿ ಇಂದಿರಾ ಗಾಂಧಿ ಎನ್ನುವ ಉತ್ತರ ಬಂದಿದೆ. ಮೋದಿಯವರ ಜನಪ್ರಿಯತೆ ಶೇ. 30ರಿಂದ ಶೇ. 14ಕ್ಕೆ ಕುಗ್ಗಿದೆ.

ರಾಹುಲ್ ಗಾಂಧಿ

ರಾಹುಲ್ ಗಾಂಧಿ

ಪ್ರಧಾನಮಂತ್ರಿ ಸ್ಥಾನಕ್ಕೆ ಮೋದಿ ನಂತರದ ಉತ್ತಮ ಆಯ್ಕೆಯಾರು ಎನ್ನುವ ಪ್ರಶ್ನೆಗೆ ರಾಹುಲ್ ಗಾಂಧಿ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಶೇ. 8ರಿಂದ ಶೇ. 22ಕ್ಕೆ ರಾಹುಲ್ ಜನಪ್ರಿಯತೆ ಹೆಚ್ಚಾಗಿದೆ.

ಮೋದಿ ಬೆಸ್ಟ್

ಮೋದಿ ಬೆಸ್ಟ್

ನರೇಂದ್ರ ಮೋದಿಯೇ ಪ್ರಧಾನಿ ಹುದ್ದುಗೆ ಅತ್ಯುತ್ತಮ ಆಯ್ಕೆ ಎಂದು ಶೇ. 58ರಷ್ಟು ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಮೋದಿಯವರ ವಿದೇಶ ಪ್ರವಾಸವನ್ನು ಸಮರ್ಥಿಸಿಕೊಂಡವರ ಸಂಖ್ಯೆಯೂ ಹೆಚ್ಚಿದೆ. ಮೋದಿಯವರ ಆಡಳಿತ ಉತ್ತಮ ಮತ್ತು ಅತ್ಯುತ್ತಮ ಎಂದವರು ಶೇ. 60.

ಸೋನಿಯಾ, ಕೇಜ್ರಿವಾಲ್

ಸೋನಿಯಾ, ಕೇಜ್ರಿವಾಲ್

2019ರ ಚುನಾವಣೆಗೆ ಮೋದಿಗೆ ಅತ್ಯುತ್ತಮ ಪರ್ಯಾಯ ಅಭ್ಯರ್ಥಿ ಎಂದರೆ ಅದು ರಾಹುಲ್ ಗಾಂಧಿ. ನಂತರದ ಸ್ಥಾನ ಸೋನಿಯಾ ಗಾಂಧಿ, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್ ಗೆ.

ಜಾತಿ ಲೆಕ್ಕಾಚಾರದಲ್ಲಿ

ಜಾತಿ ಲೆಕ್ಕಾಚಾರದಲ್ಲಿ

ಮೇಲ್ವರ್ಗದ ಜನ ಮೋದಿ ನಮ್ಮ ಜನಪ್ರಿಯ ಪ್ರಧಾನಿ ಎಂದರೆ, ಎಸ್ ಸಿ/ ಎಸ್ಟಿ ವರ್ಗದ ಶೇ. 33 ಮಂದಿ ಮೋದಿ ಉತ್ತಮ ಪ್ರಧಾನಿ ಎಂದಿದ್ದಾರೆ. ಇತ್ತ ರಾಹುಲ್ ಗಾಂಧಿಗೆ ಹಿಂದೂ ಸಮುದಾಯದಿಂದ ಶೇ. 20 ಮತ್ತು ಮುಸ್ಲಿಂ ಸಮುದಾಯದ ಶೇ. 38 ಜನ ಒಲವು ತೋರಿದ್ದಾರೆ.

English summary
Mood of the nation survey by India Today and Karvy Insights Limited: Narendra Modi is the best Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X