ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ 'ಮೂಡ್' ಬದಲಿಸಿದ ಮೋದಿಗೆ ಸಾಟಿಯುಂಟೆ!

|
Google Oneindia Kannada News

ನವದೆಹಲಿ, ಆಗಸ್ಟ್ 19: 2019ರಲ್ಲಿ ನಡೆಯಬೇಕಾಗಿರುವ ಸಾರ್ವತ್ರಿಕ ಚುನಾವಣೆ ಒಂದು ವೇಳೆ ಈಗ ನಡೆದರೆ, ಜನಾದೇಶ ಯಾರ ಪರವಾಗಿರಲಿದೆ ಎನ್ನುವ ಸಮೀಕ್ಷೆಯನ್ನು ಇಂಡಿಯಾ ಟುಡೇ ನಡೆಸಿದೆ.

ಆಗಸ್ಟ್ ತಿಂಗಳಲ್ಲಿ ಇಂಡಿಯಾ ಟುಡೇ ಗ್ರೂಪ್ ಮತ್ತು ಕಾರ್ವೇ ಇನ್ಸೈಟ್ಸ್ ಜಂಟಿಯಾಗಿ ದೇಶದ 19 ರಾಜ್ಯಗಳ, 194 ಅಸೆಂಬ್ಲಿ ಕ್ಷೇತ್ರದ ಮತದಾರರ ಅಭಿಪ್ರಾಯವನ್ನು ಕ್ರೋಢೀಕರಿಸಿ 'ಮೂಡ್ ಆಫ್ ದಿ ನೇಶನ್' ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. (ಟಾಪ್ 10 ಶ್ರೀಮಂತ ಸಚಿವರಲ್ಲಿ ರಾಜ್ಯದ ಐವರು)

ಆಂಧ್ರ, ಅಸ್ಸಾಂ, ಬಿಹಾರ, ಛತ್ತೀಸಗಢ, ದೆಹಲಿ, ಗುಜರಾತ್, ಹರ್ಯಾಣ, ಜಾರ್ಖಂಡ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮತದಾರರ ಅಭಿಪ್ರಾಯ ಪಡೆದು ಈ ಸಮೀಕ್ಷೆಯನ್ನು ಇಂಡಿಯಾ ಟುಡೇ ಸಿದ್ದಪಡಿಸಿದೆ.

194 ಅಸೆಂಬ್ಲಿ, 97 ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 12,321 ಜನರ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ಪಡೆಯಲಾಗಿದೆ. ಆಯಾಯ ರಾಜ್ಯಗಳ ಸ್ಥಳೀಯ ಪ್ರಾಮುಖ್ಯತೆಗಳನ್ನು ಆಧರಿಸಿ ಪ್ರಶ್ನೆಯನ್ನು ಸಿದ್ದಪಡಿಸಲಾಗಿತ್ತು.

ಇದರಲ್ಲಿ ಪ್ರಧಾನಿ ಹುದ್ದೆಗೆ ಅತ್ಯುತ್ತಮ ವ್ಯಕ್ತಿ, ಯಾರು ಅತ್ಯುತ್ತಮ ಮುಖ್ಯಮಂತ್ರಿ ಎನ್ನುವ ಪ್ರಶ್ನೆಗಳೂ ಇದ್ದವು. ಸಮೀಕ್ಷೆಯ ಫಲಿತಾಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಇದುವರೆಗಿನ ಅತ್ಯುತ್ತಮ ಪ್ರಧಾನಿ

ಇದುವರೆಗಿನ ಅತ್ಯುತ್ತಮ ಪ್ರಧಾನಿ

ದೇಶ ಕಂಡ ಇದುವರೆಗಿನ ಅತ್ಯುತ್ತಮ ಪ್ರಧಾನಮಂತ್ರಿ ಯಾರು ಎನ್ನುವ ಪ್ರಶ್ನೆಗೆ ಮೊದಲ ಸ್ಥಾನ ಇಂದಿರಾ ಗಾಂಧಿ, ನಂತರ ಅಟಲ್ ಬಿಹಾರಿ ವಾಜಪೇಯಿ ಮತ್ತು ಮೂರನೇ ಸ್ಥಾನದಲ್ಲಿ ನರೇಂದ್ರ ಮೋದಿ ಇದ್ದಾರೆ.

NDAಗೆ ಮುನ್ನಡೆ

NDAಗೆ ಮುನ್ನಡೆ

ಈಗ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಲಾಭವಾಗಲಿದೆ. ಯುಪಿಎ ಮೈತ್ರಿಕೂಟದ ಪರಿಸ್ಥಿತಿ ವಿಷಮಿಸುವ ಸಾಧ್ಯತೆ ಇದ್ದರೆ, ತೃತೀಯ ರಂಗ ಮತ್ತು ಇತರ ಪಕ್ಷಗಳ ಗೆಲ್ಲುವ ಸಾಧ್ಯತೆ ಗಣನೀಯವಾಗಿ ಹೆಚ್ಚಲಿದೆ.

ಯಾರಿಗೆ ಎಷ್ಟು ಸ್ಥಾನ ಸಿಗಬಹುದು

ಯಾರಿಗೆ ಎಷ್ಟು ಸ್ಥಾನ ಸಿಗಬಹುದು

ಬಿಜೆಪಿ 259, ಕಾಂಗ್ರೆಸ್ 54 ಮತ್ತು ಇತರರು 230 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ. ಒಟ್ಟಾರೆಯಾಗಿ ಎನ್ಡಿಎ ಮೈತ್ರಿಕೂಟ 304ರಲ್ಲಿ ಮತ್ತು ಯುಪಿಎ 94 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಮೋದಿ ಬೆಸ್ಟ್

ಮೋದಿ ಬೆಸ್ಟ್

ಸದ್ಯದ ಮಟ್ಟಿಗೆ ಪಿಎಂ ಸ್ಥಾನಕ್ಕೆ ಮೋದಿಗೆ ಪೈಪೋಟಿ ಯಾರೂ ಇಲ್ಲ. ಶೇ. 50 ಜನರು ಮುಂದಿನ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಲು ಮೋದಿ ಯೋಗ್ಯ ಎಂದಿದ್ದಾರೆ. ಎರಡನೇ ಸ್ಥಾನದಲ್ಲಿ ಶೇ.13 ಜನರು ರಾಹುಲ್ ಗಾಂಧಿ, ಶೇ. 6 ಜನರು ಸೋನಿಯಾ ಗಾಂಧಿ ನಂತರ ಕೇಜ್ರಿವಾಲ್ ಮತ್ತು ನಿತೀಶ್ ಕುಮಾರ್.

ಅತ್ಯುತ್ತಮ ಸಿಎಂ

ಅತ್ಯುತ್ತಮ ಸಿಎಂ

ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್ - ಶೇ. 14
ಮಮತಾ ಬ್ಯಾನರ್ಜಿ - ಶೇ. 10

English summary
Mood of the naton poll by India Today group and Karvy Insights: Narendra Modi continue as best PM candidate followed by Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X