ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ

By Madhusoodhan
|
Google Oneindia Kannada News

ನವದೆಹಲಿ, ಜೂನ್ 02: ಈ ಬಾರಿ ಮುಂಗಾರು ಮಾರುತಗಳು ಉತ್ತಮ ಮಳೆ ಸುರಿಸಲಿದ್ದು ಯಾವ ಕೊರತೆ ಆಗುವುದಿಲ್ಲ ಎಂದು ಕೇಂದ್ರ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ.

ಮಾನ್ಸೂನ್ ಮಾರುತಗಳು ಇನ್ನು ನಾಲ್ಕೈದು ದಿನಗಳಲ್ಲಿ ಕೇರಳವನ್ನು ಪ್ರವೇಶ ಮಾಡಲಿವೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಮುಂಗಾರು ಮಳೆ ಒಂದು ವಾರ ತಡವಾಗಿ ಕೇರಳ ತೀರಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಹಿಂದೆ ಹೇಳಿತ್ತು. ಅದರಂತೆ ಜೂನ್ ಆರಂಭದಲ್ಲಿ ಆಗಮಿಸಬೇಕಿದ್ದ ಮಾರುತಗಳು ಒಂದು ವಾರ ತಡವಾಗಿಯೇ ಪ್ರವೇಶ ಮಾಡುತ್ತಿವೆ.[ಬೆಂಗಳೂರನ್ನು ನಡುಗಿಸಿದ ಮಳೆ]

monsoon

ದೇಶದ ರೈತರ ದೃಷ್ಟಿಯಲ್ಲಿ ಇದು ಸಿಹಿ ಸುದ್ದಿಯಾಗಿದ್ದು ಮುಂಗಾರು ಬೆಳೆಗಳ ಮೇಲೆ ಪರಿಣಾಮ ಬೀರಲಿದೆ. ಮಳೆ ಕೊರತೆ ಎದುರಿಸುತ್ತಿದ್ದ ರಾಜ್ಯಗಳು ಈ ಬಾರಿ ವರುಣನ ಕೃಪೆಗೆ ಪಾತ್ರವಾಗಲಿದೆ.[ಈ ಬಾರಿ ವಾಡಿಕೆಗಿಂತ ಹೆಚ್ಚು ಸುರಿಯಲಿದೆ ಮುಂಗಾರು ಮಳೆ]

ಹವಾಮಾನ ಇಲಾಖೆ ಸೂಚನೆಗಳು
* ಈ ವರ್ಷ ಶೇ.96ರಷ್ಟು ಸಾಧಾರಣ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

* ಮುಂದಿನ ನಾಲ್ಕೈದು ದಿನಗಳಲ್ಲಿ ಮಾನ್ಸೂನ್ ಕೇರಳ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ಜುಲೈ ಮತ್ತು ಆಗಸ್ಟ್​ನಲ್ಲಿ ಸಾಕಷ್ಟು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

* ಜುಲೈನಲ್ಲಿ ಸರಾಸರಿ 107% ರಷ್ಟು, ಆಗಸ್ಟ್​ನಲ್ಲಿ 104% ರಷ್ಟು ಮಳೆ ಆಗಲಿದೆ.

* ಜೂನ್ 5 ಅಥವಾ 6ರಂದು ದಕ್ಷಿಣ ಒಳನಾಡು ಪ್ರದೇಶಗಳಿಗೆ ಮುಂಗಾರು ಪ್ರವೇಶಿಸಲಿದ್ದು, ಈ ಪ್ರದೇಶದಲ್ಲಿ ಸೆಪ್ಟೆಂಬರ್ ಅಂತ್ಯದವರೆಗೂ ಮಳೆಯಾಗುವ ಸಾಧ್ಯತೆಗಳು ಹೆಚ್ಚಿದೆ.

* ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಮಳೆಯಾಗಲಿದೆ.

* ದೇಶದ ವಾಯುವ್ಯ ಭಾಗದಲ್ಲಿ ಸರಾಸರಿ 108%ರಷ್ಟು, ಮಧ್ಯ ವಲಯದಲ್ಲಿ 113%ರಷ್ಟು, ಈಶಾನ್ಯ ವಲಯಗಳಲ್ಲಿ 94%ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದ್ದಾರೆ.

* ಕೇರಳವನ್ನು ಪ್ರವೇಶ ಮಾಡಿದ ಮಾರುತಗಳು ವೇಗವಾಗಿ ಮುಂದಕ್ಕೆ ಬರಲಿವೆ.

* ಎಲ್ ನಿನೋದ ಯಾವ ಅಪಾಯವೂ ಈ ಬಾರಿ ಇಲ್ಲ.

English summary
Whether Report: There are 96 per cent chances that rainfall will be normal to excess this year, the Indian Meteorological Department said today, keeping its forecast for monsoon unchanged. There are also zero per cent chances of the monsoon being deficient this year. The Met Department also expects the monsoon to reach Kerala in the next four to five days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X