ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 5 ಕ್ಕೆ ಕೇರಳ ಪ್ರವೇಶಿಸಲಿರುವ ಮಾನ್ಸೂನ್

|
Google Oneindia Kannada News

ನವದೆಹಲಿ, ಜೂ. 02: ಮಾನ್ಸೂನ್ ಮಾರುತಗಳೂ ಜೂನ್ 5 ಕ್ಕೆ ಕೇರಳ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೇ 30 ಕ್ಕೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಾರುತಗಳು ಕೊಂಚ ವಿಳಂಬವಾಗಿ ಆಗಮಿಸಲಿವೆ.

ಮುಂಗಾರು ಮಾರುತಗಳು ಬಲಿಷ್ಠವಾಗಿದ್ದು, ಜೂನ್ 5ಕ್ಕೆ ಕೇರಳ ಕರಾವಳಿ ಪ್ರವೇಶಿಸಲಿವೆ ಎಂದು ಭಾರತದ ಹವಾಮಾನ ಇಲಾಖೆ ನಿರ್ದೇಶಕ ಬಿ.ಪಿ.ಯಾದವ್ ತಿಳಿಸಿದ್ದಾರೆ.[ಮುಂಗಾರು ಮಳೆರಾಯ ಸಮಯಕ್ಕೆ ಬಾರದೆ ಕೈಕೊಟ್ಟವ್ನೆ]

rain

ಈ ಬಾರಿಯ ಮಾನ್ಸೂನ್ ಮೇಲೆ ಎನ್ ನಿನೋ ಸಹ ತನ್ನ ಕರಾಳ ಛಾಯೆ ಬೀರಿದೆ. ಆದರೆ ಸದ್ಯ ಹವಾಮಾನ ಇಲಾಖೆ ಹೇಳುವಂತೆ ಮುಂಗಾರು ಮಾರುತಗಳು ಬಲಿಷ್ಠವಾಗಿವೆ. ರೈತರಿಗೆ ಯಾವ ಸಮಸ್ಯೆ ಎದುರಾಗುವ ಲಕ್ಷಣ ಕಾಣುತ್ತಿಲ್ಲ. [ದೇಶದ ಮಾನ್ಸೂನ್ ಮೇಲೆ 'ಎಲ್ ನಿನೋ' ಕರಾಳ ಛಾಯೆ]

ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆ ಮಾವು, ಭತ್ತ, ಜೋಳ ಸೇರಿದಂತೆ ಹಿಂಗಾರಿನ ಫಸಲನ್ನು ನಾಶ ಮಾಡಿತ್ತು. ದೇಶದ ಆಹಾರ ಧಾನ್ಯ ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಿತ್ತು. ಮಾನ್ಸೂನ್ ಕೇರಳ ಪ್ರವೇಶ ಮಾಡಿದ ನಂತರದ ಒಂದು ವಾರದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಮಳೆ ಆರಂಭವಾಗಲಿದೆ.

English summary
This year's monsoon may arrive on southern Kerala coast in the next five days as the rains have missed their normal start date of June 1, weather officials said on Monday. The annual rainy season is vital for India as half its cropland lacks irrigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X