ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಯ ಉಳಿಸಲು ವಿಮಾನದಲ್ಲೇ ನಿದ್ದೆ ಮಾಡಿದ ಪ್ರಧಾನಿ ಮೋದಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 29: ಇತ್ತೀಚೆಗಿನ ತ್ರಿರಾಷ್ಟ್ರ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಸಮಯ ಉಳಿಸಲು ಭಿನ್ನ ಹಾದಿ ತುಳಿದಿದ್ದರು. ಅಕ್ಕಪಕ್ಕದ ರಾಷ್ಟ್ರಗಳಿಗೆ ಒಟ್ಟಾಗಿ ಪ್ರವಾಸ ಮಾಡಿ ಭಾರೀ ಸಮಯ ಉಳಿಸಿದ್ದಾರೆ.

ಪ್ರಧಾನಿ ನಿರ್ದೇಶನದ ಮೇರೆಗೆ ಪ್ರಧಾನ ಮಂತ್ರಿ ಕಾರ್ಯಾಲಯ ಸಮಯ ಉಳಿಸಲು ಅನುಕೂಲವಾಗುವಂತೆ ಪ್ರವಾಸದ ವೇಳಾಪಟ್ಟಿಯನ್ನು ಯೋಜಿಸಿತ್ತು. ಪ್ರವಾಸದ ವೇಳೆ ಸಮಯ ಉಳಿಸಲು ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲೇ ನಿದ್ದೆ ಮಾಡುತ್ತಿದ್ದರು ಎಂದು ಕಾರ್ಯಾಲಯದ ಮೂಲಗಳು ಒನ್ಇಂಡಿಯಾಗೆ ಹೇಳಿವೆ.

ಮೋದಿ-ಟ್ರಂಪ್ ಭೇಟಿ: ಚರ್ಚೆಯಾದ 8 ಪ್ರಮುಖ ಸಂಗತಿಮೋದಿ-ಟ್ರಂಪ್ ಭೇಟಿ: ಚರ್ಚೆಯಾದ 8 ಪ್ರಮುಖ ಸಂಗತಿ

Modi's foreign visit: How PM saves time by not checking into a hotel

ಇದೇ ರೀತಿ 2016ರಲ್ಲಿ ಸೌದಿ ಅರೇಬಿಯಾ, ಅಮೆರಿಕಾ, ಬೆಲ್ಜಿಯಂ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಎರಡು ರಾತ್ರಿಯ ನಿದ್ದೆಯನ್ನು ವಿಮಾನದಲ್ಲೇ ಪೂರೈಸಿದ್ದರು.

ಇತ್ತೀಚೆಗೆ ಪೋರ್ಚುಗಲ್, ಅಮೆರಿಕಾ, ನೆದರ್ಲ್ಯಾಂಡ್ಸ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ 33 ಗಂಟೆಗಳನ್ನು ವಿಮಾನದಲ್ಲೇ ಕಳೆದಿದ್ದಾರೆ. ಮೋದಿ ಜೂಣ್ 24ರಂದು ಬೆಳಿಗ್ಗೆ 7 ಗಂಟೆಗೆ ಭಾರತ ಬಿಟ್ಟಿದ್ದರು. ಅದೇ ದಿನ ಸಂಜೆ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್ನಿಗೆ ಪ್ರಯಾಣ ಬೆಳೆಸಿದ್ದರು. ಎಲ್ಲೂ ಹೊಟೇಲಿಗೆ ಅವರು ಭೇಟಿ ನೀಡಿರಲಿಲ್ಲ.

ನಂತರ ಅಮೆರಿಕಾ ಅಧ್ಯಕ್ಷರನ್ನು ಭೇಟಿಯಾಗಿ ನೆದರ್ಲೆಂಡ್ ಗೆ ಪ್ರಧಾನಿ ತೆರಳಿದ್ದರು. ಈ ವೇಳೆಯೂ ಪ್ರಧಾನಿ ನರೇಂದ್ರ ಮೋದಿ ವಿಮಾನದಲ್ಲೇ ನಿದ್ದೆ ಮಾಡಿದ್ದರು. ಅಲ್ಲಿ 12 ಗಂಟೆಗಳನ್ನು ಕಳೆದು ನಂತರ ಭಾರತಕ್ಕೆ ವಾಪಾಸಾಗಿದ್ದರು. ಅಲ್ಲಿಂದ ಸಂಜೆ ಹೊರಟು ವಿಮಾನದಲ್ಲೇ ನಿದ್ದೆ ಹೋಗಿ ಭಾರತಕ್ಕೆ ಮುಂಜಾನೆ 6 ಗಂಟೆಗೆ ಬಂದು ತಲುಪಿದ್ದರು.

English summary
The recently concluded 3 nation tour of Prime Minister Narendra Modi shows that there is a new pattern in which he clubs nearby countries on a foreign tour. This is done to ensure that there is a maximum outreach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X