ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ ಮೇಲಿನ ನಿರೀಕ್ಷೆ, ಅಪೇಕ್ಷೆಗಳು...

By ವಿಕಾಸ್ ನಂಜಪ್ಪ
|
Google Oneindia Kannada News

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸ (ಪೋರ್ಚುಗಲ್, ಅಮೆರಿಕ ಮತ್ತು ನೆದರ್ ಲ್ಯಾಂಡ್ಸ್) ಆರಂಭಿಸಿದ್ದಾರೆ. ಮೋದಿ ಅವರ ಅಮೆರಿಕ ಭೇಟಿ ಬಗ್ಗೆ ವಿಪರೀತ ನಿರೀಕ್ಷೆಗಳಿವೆ. ಜೂನ್ ಇಪ್ಪತ್ತಾರರಂದು ಮೋದಿ ಮೊದಲ ಬಾರಿಗೆ ಟ್ರಂಪ್ ರನ್ನು ಭೇಟಿ ಮಾಡಲಿದ್ದಾರೆ.

ಮೋದಿ ಹಾಗೂ ಟ್ರಂಪ್ ಜೂನ್ ಇಪ್ಪತ್ತೇಳರಂದು ಅಮೆರಿಕದ ಕಾಲಮಾನ ಮಧ್ಯಾಹ್ನ ಮೂರು ಮೂವತ್ತಕ್ಕೆ (ಭಾರತೀಯ ಕಾಲಮಾನದ ಪ್ರಕಾರ ಮಧ್ಯರಾತ್ರಿ ಒಂದು ಗಂಟೆ) ಒಟ್ಟಿಗೆ ಭೋಜನ ಕೂಟದಲ್ಲಿ ಭಾಗವಹಿಸಲು ಸಮಯ ನಿಗದಿಯಾಗಿದೆ. ರಕ್ಷಣಾ ವ್ಯವಸ್ಥೆ, ಭಯೋತ್ಪಾದನೆ, ಎಚ್ 1ಬಿ ವೀಸಾ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಈ ಬಾರಿಯ ಅಮೆರಿಕ ಭೇಟಿ ಹೆಚ್ಚು ಫಲಪ್ರದ: ಮೋದಿಈ ಬಾರಿಯ ಅಮೆರಿಕ ಭೇಟಿ ಹೆಚ್ಚು ಫಲಪ್ರದ: ಮೋದಿ

ನರೇಂದ್ರ ಮೋದಿ ಹಾಗೂ ತೀರಾ ಅನಿರೀಕ್ಷಿತದಂತೆ ನಡೆದುಕೊಳ್ಳುವ ಡೊನಾಲ್ಡ್ ಟ್ರಂಪ್ ಮಧ್ಯೆ ಹೇಗೆ ಹೊಂದಾಣಿಕೆ ಸಾಧ್ಯವಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.

ಪೋರ್ಚುಗಲ್ ನತ್ತ ಪ್ರಯಾಣ ಬೆಳಸಿದ ಪ್ರಧಾನಿ ಮೋದಿಪೋರ್ಚುಗಲ್ ನತ್ತ ಪ್ರಯಾಣ ಬೆಳಸಿದ ಪ್ರಧಾನಿ ಮೋದಿ

ಈ ಇಬ್ಬರು ನಾಯಕರ ಮಧ್ಯೆ ಯಾವ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗಬಹುದು ಎಂಬ ಬಗ್ಗೆ ಮೈಕೆಲ್ ಕುಗೆಲ್ ಮ್ಯಾನ್ ಹಾಗೂ ವಿಲ್ಸನ್ ಸೆಂಟರ್ ಎಂಬ ದಕ್ಷಿಣ ಏಷ್ಯಾದ ವ್ಯವಹಾರಗಳನ್ನು ನಿರ್ವಹಿಸುವ ಅಧಿಕಾರಿಗಳು ಕೆಲವು ಸಾಧ್ಯತೆಗಳನ್ನು ಒನ್ ಇಂಡಿಯಾ ಜತೆಗೆ ಹಂಚಿಕೊಂಡಿದ್ದಾರೆ.

ಎಚ್ 1ಬಿ ವೀಸಾ

ಎಚ್ 1ಬಿ ವೀಸಾ

ನರೇಂದ್ರ ಮೋದಿ ಅವರು ಎಚ್ 1ಬಿ ವೀಸಾ ಬಗ್ಗೆ ಖಂಡಿತಾ ಪ್ರಸ್ತಾವ ಮಾಡಲಿದ್ದಾರೆ. ಆದರೆ ಇದೊಂದು ವ್ಯರ್ಥ ಪ್ರಯತ್ನ ಆಗಬಹುದು. ಏಕೆಂದರೆ ಅಮೆರಿಕನ್ನರಿಂದ ಕೆಲಸ ಕಸಿಯುವ ಯಾವುದೇ ವಿಚಾರಕ್ಕೇ ಡೊನಾಲ್ಡ್ ಟ್ರಂಪ್ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿಲ್ಲ.

ದ್ವಿಪಕ್ಷೀಯ ಒಪ್ಪಂದಗಳು

ದ್ವಿಪಕ್ಷೀಯ ಒಪ್ಪಂದಗಳು

ತಂತ್ರಜ್ಞಾನ ವಿನಿಮಯ, ಶಸ್ತ್ರಾಸ್ತ್ರಗಳ ಮಾರಾಟದ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳಲು ಭಾರತ ಉತ್ಸುಕವಾಗಿದ್ದರೆ, ಜಂಟಿ ಸೇನಾ ಅಭ್ಯಾಸ ಹಾಗೂ ಜಂಟಿ ಯುದ್ಧ ಕಾರ್ಯಾಚರಣೆ ವಿಚಾರದಲ್ಲಿ ಒಪ್ಪಂದಕ್ಕೆ ಅಮೆರಿಕ ಆಸಕ್ತಿ ತೋರಿಸಬಹುದು. ಆದರೆ ಇಂಥ ವಿಚಾರಗಳಲ್ಲಿ ಭಾರತ ಹಾಗೂ ಅಮೆರಿಕ ಮಧ್ಯೆ ಸಂಬಂಧ ಇನ್ನೂ ಬಹಳ ಸುಧಾರಣೆ ಆಗಬೇಕಿದೆ.

ಚೀನಾ ಸಮಸ್ಯೆ

ಚೀನಾ ಸಮಸ್ಯೆ

ಎರಡೂ ದೇಶಗಳ ನಾಯಕರ ಚಿಂತೆಗೆ ಕಾರಣವಾಗಿರುವ ವಿಚಾರ ಇದು. ಈ ವಿಚಾರದಲ್ಲಿ ಇಬ್ಬರೂ ನಾಯಕರು ಬಹಳ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಇಬ್ಬರಿಗೂ ಚೀನಾವನ್ನು ರೊಚ್ಚಿಗೆಬ್ಬಿಸುವುದು ಬೇಡ. ಅಧ್ಯಕ್ಷರಾದ ತಕ್ಷಣವೇ ಟ್ರಂಪ್ ಚೀನಾ ಬಗ್ಗೆ ಆಕ್ಷೇಪ ಎತ್ತಿದ್ದರು. ಆದರೆ ಉತ್ತರ ಕೊರಿಯಾ ಜತೆ ವ್ಯವಹರಿಸುವುದಕ್ಕೆ ಸಂಧಾನಕಾರ ಸ್ಥಾನದಲ್ಲಿ ಚೀನಾ ಪಾತ್ರ ಬಹಳ ಮುಖ್ಯವಾದದ್ದು.


ಆದರೆ, ಈಗ ಇಬ್ಬರೂ ನಾಯಕರು ಚೀನಾ ಬಗ್ಗೆ ಕೆಲ ಸಾಮಾನ್ಯ ಒಪ್ಪಂದಗಳಿಗೆ ಬರಬಹುದು.

ಐಎಸ್ ಐಎಸ್ ವಿರುದ್ಧದ ಕದನಕ್ಕೆ ಕೈ ಜೋಡಿಸುವಂತೆ ಕೇಳಬಹುದು

ಐಎಸ್ ಐಎಸ್ ವಿರುದ್ಧದ ಕದನಕ್ಕೆ ಕೈ ಜೋಡಿಸುವಂತೆ ಕೇಳಬಹುದು

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅಮೆರಿಕವು ಭಾರತವನ್ನು ಕೇಳಬಹುದು. ಇಸ್ಲಾಮಿಕ್ ಸ್ಟೇಟ್ ವಿರುದ್ಧ ನಡೆಸುತ್ತಿರುವ ಕದನದಲ್ಲಿ ಕೈ ಜೋಡಿಸುವಂತೆ ಕೇಳಬಹುದು. ಈ ಹಿಂದೆ ಭಾರತ ಇದಕ್ಕೆ ಒಪ್ಪಿರಲಿಲ್ಲ. ಈಗಲೂ ಅಂಥ ಪ್ರಸ್ತಾವ ಇಟ್ಟರೆ ಹಿಂದೆ ಸರಿಯುತ್ತದೆ.

ಪಾಕಿಸ್ತಾನಿ ಜಿಹಾದಿಗಳ ವಿರುದ್ಧ ಹೋರಾಟ

ಪಾಕಿಸ್ತಾನಿ ಜಿಹಾದಿಗಳ ವಿರುದ್ಧ ಹೋರಾಟ

ಆದರೆ, ಪಾಕಿಸ್ತಾನದ ಜಿಹಾದಿಗಳ ವಿರುದ್ಧದ ಹೋರಾಟದಲ್ಲಿ ಅಮೆರಿಕ ಸಕ್ರಿಯವಾಗಿ ಹಾಗೂ ನಿರಂತರವಾಗಿ ಪಾಲ್ಗೊಳ್ಳಬೇಕು ಎಂದು ಮೋದಿ ಮನವಿ ಮಾಡುವ ಸಾಧ್ಯತೆ ಇದೆ.

ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿ ಬಗ್ಗೆ ಚರ್ಚೆ ಆಗುತ್ತಾ?

ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿ ಬಗ್ಗೆ ಚರ್ಚೆ ಆಗುತ್ತಾ?

ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಮೋದಿ ಪ್ರಶ್ನೆ ಎತ್ತುತ್ತಾರಾ ಎಂಬ ಬಗ್ಗೆ ಕುತೂಹಲ ಇದೆ. ಅದರಲ್ಲೂ ಇತ್ತೀಚೆಗೆ ಕನ್ಸಾಸ್ ನಲ್ಲಿ ನಡೆದ ಶ್ರೀನಿವಾಸ ಕುಚಿಬೋಟ್ಲಾ ಕೊಲೆ ಚರ್ಚೆ ಹುಟ್ಟುಹಾಕಿತ್ತು. ಈ ಘಟನೆಗೆ ಸ್ಪಂದಿಸಲು ಟ್ರಂಪ್ ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ವಾರದ ನಂತರ ಅಮೆರಿಕ ಕಾಂಗ್ರೆಸ್ ನಲ್ಲಿ ಮಾತನಾಡಿದ್ದರು.

English summary
Prime Minister Narendra Modi has left for this three nation visit to Portugal, US and Netherlands. Modi will visit the US which is probably one of the most anticipated. The two leaders are expected to discuss a variety of issues which would include defence, terrorism, strategic partnership and H-1B. A lot of focus would be on the chemistry between Modi and Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X