ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಚೂನ್‌ ಪಟ್ಟಿಯಲ್ಲಿ ಮೋದಿ, ಕೈಲಾಶ್‌ ಸತ್ಯಾರ್ಥಿ

|
Google Oneindia Kannada News

ನ್ಯೂಯಾರ್ಕ್‌ , ಮಾ. 28: ಫಾರ್ಚೂನ್‌ ನಿಯತಕಾಲಿಕ ಹೊರಡಿಸಿರುವ ವಿಶ್ವದ 50 ಮಂದಿ ಅತ್ಯುನ್ನತ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಸ್ಥಾನ ಪಡೆದುಕೊಂಡಿದ್ದಾರೆ.

ಉದ್ಯಮ, ಸರ್ಕಾರಿ ಸೇವೆ ಮತ್ತು ಸಮಾಜಸೇವಾ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ ಪುರುಷರು ಮತ್ತು ಮಹಿಳೆ­ಯರ ಪಟ್ಟಿಯನ್ನು ಫಾರ್ಚೂನ್‌ ಪ್ರತಿವರ್ಷ ಬಿಡುಗಡೆ ಮಾಡುತ್ತದೆ. 'ಜಗತ್ತಿನ ಮಹಾನ್‌ ನಾಯಕರ' ಪಟ್ಟಿಯಲ್ಲಿ ಮೋದಿ ಐದನೇ ಸ್ಥಾನದಲ್ಲಿದ್ದರೆ, ಸತ್ಯಾರ್ಥಿ 28ನೇ ಸ್ಥಾನದಲ್ಲಿದ್ದಾರೆ. 'ಆಪಲ್‌' ಕಂಪೆನಿಯ ಸಿಇಒ ಟಿಮ್‌ ಕುಮ್‌ ಮೊದಲನೆಯವರಾಗಿದ್ದಾರೆ.[ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಭಾರತ ರತ್ನ ಪ್ರದಾನ]

Modi, Kailash Satyarthi among world's greatest leaders: Fortune

ಒಬಾಮಾಗಿಲ್ಲ ಸ್ಥಾನ: ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಸಂಕಷ್ಟಗಳನ್ನು ಎದುರಿಸಿದ ಕಾರಣ ಒಬಾಮ ಸೋತಿ­ದ್ದಾರೆ ಎಂದು ಫಾರ್ಚೂನ್‌ ತಿಳಿಸಿದೆ.

ಮೋದಿ ಭಾರತವನ್ನು ಹೆಚ್ಚು ಉದ್ಯಮಸ್ನೇಹಿಯಾಗಿಸಿದ್ದು, ಮಹಿಳೆ­ಯರ ಮೇಲಿನ ದೌರ್ಜನ್ಯ ಪ್ರಕರಣ­ಗಳನ್ನು ನಿಭಾಯಿಸುವ ರೀತಿ, ಸ್ವಚ್ಛತೆಗೆ ಆದ್ಯತೆ ಮತ್ತು ಅಮೆರಿಕ ಹಾಗೂ ಏಷ್ಯಾದ ರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿ ಮಾಡಿಕೊಳ್ಳುವುದರಲ್ಲಿ ಸಫಲರಾಗಿದ್ದಾರೆ ಎದು ಪಟ್ಟಿ ತಿಳಿಸಿದೆ.[ಥೇಮ್ಸ್ ದಡದಲ್ಲಿ ಬಸವಣ್ಣನ ಪುತ್ಥಳಿ, ಮೋದಿಗೆ ಆಹ್ವಾನ]

ಪಟ್ಟಿಯಲ್ಲಿ ಯುರೋ­ಪಿ­ಯನ್‌ ಸೆಂಟ್ರಲ್‌ ಬ್ಯಾಂಕ್‌ನ ಅಧ್ಯಕ್ಷರಾದ ಮಾರಿಯೊ ಡ್ರಘಿ ಅವರು ಎರಡನೇ ಸ್ಥಾನದಲ್ಲಿದ್ದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮೂರನೇ ಮತ್ತು ಪೋಪ್‌ ಫ್ರಾನ್ಸಿಸ್‌ ಅವರು ನಾಲ್ಕನೆಯವರಾಗಿದ್ದಾರೆ.

ಬಾಲಕಾರ್ಮಿಕ ಪದ್ಧತಿ ನಿರ್ಮೂ­ಲನೆಗೆ ಸತ್ಯಾರ್ಥಿ ಮಾಡಿದ ಕೆಲಸಗಳ ಫಲವೇ ಅವರಿಗೆ ನೊಬೆಲ್ ದೊರೆತಿದೆ. ಅವರ ಸಾಮಾಜಿಕ ಕಾರ್ಯ ಹಾಗೆಯೇ ಮುಂದುವರಿದಿದ್ದು ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ಫಾರ್ಚೂನ್‌ ಮಾಹಿತಿ ನೀಡಿದೆ.

English summary
Prime Minister Narendra Modi and Nobel laureate Kailash Satyarthi have been named among the 50 greatest leaders in the world by Fortune magazine in its annual list of "extraordinary" men and women transforming business, govern­ment and philanthropy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X