ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಪತಂಜಲಿಯಿಂದ ಗೋಧಿ, ಮೆಣಸಿನ ಕಾಯಿ ಬೀಜ ಬಿಡುಗಡೆ

ಹರಿದ್ವಾರದಲ್ಲಿ ಕಂಪನಿಯು ನೂತನವಾಗಿ ನಿರ್ಮಿಸಿರುವ ಪತಂಜಲಿ ಸಂಶೋಧನಾ ಸಂಸ್ಥೆಯಲ್ಲಿ ನೂತನವಾಗಿ ಗೋಧಿ ಹಾಗೂ ಮೆಣಸಿನ ಕಾಯಿ ಬೀಜಗಳನ್ನು ಅಭಿವೃದ್ಧಿಪಡಿಸಲಾಗಿದೆ.

|
Google Oneindia Kannada News

ಹರಿದ್ವಾರ (ಉತ್ತರಾಖಾಂಡ), ಮೇ 3: ರಾಮ್ ದೇವ್ ಬಾಬಾ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಪತಂಜಲಿ ಉತ್ಪನ್ನ ತಯಾರಿಕಾ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಿದ ಗೋಧಿ ಹಾಗೂ ಮೆಣಸಿನ ಕಾಯಿ ಬೀಜಗಳನ್ನು ಬಿಡುಗಡೆ ಮಾಡಲಾಗಿದೆ.

ಹರಿದ್ವಾರದಲ್ಲಿ ಕಂಪನಿಯು ನೂತನವಾಗಿ ನಿರ್ಮಿಸಿರುವ ಪತಂಜಲಿ ಸಂಶೋಧನಾ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಉದ್ಘಾಟಿಸಿದರು. ಇದೇ ಸಂಶೋಧನಾ ಕೇಂದ್ರದಲ್ಲೇ ನೂತನವಾಗಿ ಗೋಧಿ ಹಾಗೂ ಮೆಣಸಿನ ಕಾಯಿ ಬೀಜಗಳನ್ನು ಅಭಿವೃದ್ಧಿಪಡಿಸಲಾಗಿದೆ.

Modi inaugurates Patanjali centre: What Ramdev claims ‘chamatkari’ seeds can do

ಈ ಬೀಜಗಳು ದುಪ್ಪಟ್ಟು ಫಸಲು ಕೊಡುವ ಶಕ್ತಿಯಿದ್ದು, ಪ್ರತಿ ಎಕರೆಗೆ 28ರಿಂದ 47 ಕ್ವಿಂಟಾಲ್ ಗಳಷ್ಟು ಇಳುವರಿ ಪಡೆಯಬಹುದು ಎಂದು ಪತಂಜಲಿ ಕಂಪನಿ ಹೇಳಿಕೊಂಡಿದೆ. ಇದು, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಗೋಧಿ, ಮೆಣಸಿನ ಕಾಯಿ ಬೀಜಗಳು ನೀಡುವ ಇಳುವರಿಗಿಂತ ದುಪ್ಪಟ್ಟು ಆಗಿರಲಿದೆ ಎಂದು ಅದು ಹೇಳಿದೆ.

English summary
Prime Minister Narendra Modi inaugurates on Wednesday morning a research institute run by spiritual leader Ramdev’s Patanjali Ayurveda in Uttarakhand’s Haridwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X