ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಆಳ್ವಿಕೆಯ 3ವರ್ಷ: ರೈತರ ಕಣ್ಣೀರಿಗೆ ಬೆಲೆಯಿಲ್ಲವೇ, ಕಾಂಗ್ರೆಸ್ ಪ್ರಶ್ನೆ?

ಇನ್ನು ಕೆಲವೇ ದಿನಗಳಲ್ಲಿ ಪಿಎಂ ಆಗಿ ಮೋದಿ ಅಧಿಕಾರಕ್ಕೆ ಬಂದು 3ವರ್ಷ ತುಂಬಲಿದೆ. #3yearsFarmersInTears ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ. ಕಾಂಗ್ರೆಸ್ ಕಳೆದ 3ವರ್ಷಗಳಲ್ಲಿ ರೈತರ ಆತ್ಮಹತ್ಯೆಯ ಬಗ್ಗೆ ಟ್ವೀಟ್ ಮಾಡುತ್ತಿದೆ.

|
Google Oneindia Kannada News

ಇನ್ನೈದಾರು ದಿನಕ್ಕೆ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಿ ರಾಜಕೀಯ ಮುಖಂಡರೊಲ್ಲಬ್ಬರಾದ ನರೇಂದ್ರ ದಾಮೋದರದಾಸ್ ಮೋದಿ, ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೆ ಬಂದು ಮೂರು ವರ್ಷ.

ಈ ಮೂರು ವರ್ಷಗಳಲ್ಲಿ ಚುನಾವಣೆಯ ವೇಳೆ ನೀಡಿದ್ದ ಭರಪೂರ ಭರವಸೆಗಳನ್ನು ಮೋದಿ ಸರಕಾರ ಈಡೇರಿಸಿದೆಯೇ ಅಥವಾ ಈಡೇರಿಸುವಲ್ಲಿ ಮುನ್ನಡೆಯುತ್ತಿದೆಯೇ, ದೇಶದ ಜೀವಾಳವಾಗಿರುವ ರೈತಾಪಿ ವರ್ಗ ನೆಮ್ಮದಿ ಬದುಕನ್ನು ಕಾಣುತ್ತಿದೆಯೇ?

#3yearsFarmersInTears ಎನ್ನುವ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಸದ್ಯ ಟ್ರೆಂಡಿಂಗ್ ನಲ್ಲಿದೆ. ವಿರೋಧ ಪಕ್ಷದಲ್ಲಿರುವುದರಿಂದ ಸ್ವಾಭಾವಿಕವಾಗಿ ಕಾಂಗ್ರೆಸ್, ಅಂಕಿಅಂಶದ ಸಮೇತ ಕಳೆದ ಮೂರು ವರ್ಷಗಳಲ್ಲಿ ರೈತರ ಆತ್ಮಹತ್ಯೆಯ ಬಗ್ಗೆ ಸಾಲುಸಾಲು ಟ್ವೀಟ್ ಮಾಡುತ್ತಿದೆ.

ಎಂಬತ್ತು ರೂಪಾಯಿ ಇದ್ದ ಈರುಳ್ಳಿ ಬೆಲೆ ಹತ್ತು ರೂಪಾಯಿಗಿಂತ ಕಮ್ಮಿಯಾಗಿದೆ. ಯೋಧರ ಸಾವು, ರೈತರ ಸಾವು, ಇದು ಬಿಜೆಪಿ ಸರಕಾರದ ಮೂರು ವರ್ಷದ ಸಾಧನೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಅದನ್ನು ಒಂದಷ್ಟು ಜನ ಟ್ವೀಟ್ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದಾರೆ.

ನಟರನ್ನು, ಕ್ರಿಕೆಟಿಗರನ್ನು, ಕಾರ್ಪೋರೇಟುಗಳನ್ನು ಭೇಟಿ ಮಾಡುವ ಸನ್ಮಾನ್ಯ ಪ್ರಧಾನಮಂತ್ರಿಗಳಿಗೆ ರೈತರನ್ನು ಮತ್ತು ಅವರ ಸಂಕಷ್ಟವನ್ನು ಅರಿಯಲು ಸಮಯವಿಲ್ಲ ಎಂದು ಟ್ವಿಟ್ಟಿಗರು ಕಿಡಿಕಾರುತ್ತಿದ್ದಾರೆ. ಮುಂದೆ ಓದಿ..

ದಿನವೊಂದಕ್ಕೆ 35ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

ದಿನವೊಂದಕ್ಕೆ 35ಕ್ಕೂ ಹೆಚ್ಚು ರೈತರ ಆತ್ಮಹತ್ಯೆ

ಮಾಹಿತಿಯ ಪ್ರಕಾರ ದಿನವೊಂದಕ್ಕೆ 35ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೋದಿಜೀ..ರೈತರು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಇನ್ನೂ ಭಾಷಣ ಏನಾದರೂ ನೀಡುವುದಿದೆಯೇ?

ರೈತರಿಗೆ ಕೊಟ್ಟ ಆಶ್ವಾಸನೆಗಳು

ರೈತರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದೂ ಕೇಂದ್ರ ಸರಕಾರ ನೀಡಿದ ಸುಳ್ಳು ಆಶ್ವಾಸನೆಗಳು.

ಕೃಷಿ ಉತ್ಪನ್ನಗಳ ರಫ್ತುನಲ್ಲಿ ಶೇ. 41 ಇಳಿಕೆ

ಕೃಷಿ ಉತ್ಪನ್ನಗಳ ರಫ್ತುನಲ್ಲಿ ಶೇ. 41 ಇಳಿಕೆ

ಭಾರತದ ಕೃಷಿ ಉತ್ಪನ್ನಗಳ ರಫ್ತು 2014 ರಿಂದ 2017ಕ್ಕೆ ಶೇ. 41 ಇಳಿದಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರಫ್ತಿನಲ್ಲಿ ಗಣನೀಯ ಇಳಿಮುಖವಾಗಿದೆ.

ದ್ವಿದಳ ಧಾನ್ಯ

ದಾಲ್ ಮೇ ಕುಚ್ ಕಾಲಾಹೇ.. ಕೆಜಿಗೆ 44 ರೂಪಾಯಿ ಕೊಟ್ಟು ದ್ವಿದಳ ಧಾನ್ಯ ಖರೀದಿಸುವ ಕೇಂದ್ರ ಸರಕಾರ ಅದನ್ನು ಮಾರುತ್ತಿರುವುದು ಕೆಜಿಗೆ 230 ರೂಪಾಯಿಗೆ.

ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ

ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ. ನೀವು ದೈನಂದಿನ ಊಟಕ್ಕೆ ಖರ್ಚು ಮಾಡುವ ವೆಚ್ಚವೇನಿದೆಯೋ ಅಷ್ಟು ಬಡವರ ತಿಂಗಳ ಸಂಬಳವೂ ಇರುವುದಿಲ್ಲ.

ಮೋದಿ ಸರಕಾರಕ್ಕಿಲ್ಲ ರೈತರ ಕಾಳಜಿ

ಮೋದಿ ಸರಕಾರದ ರೈತರ ಕಾಳಜಿ ಹೇಗಿದೆ ಎಂದರೆ, ಕ್ವಿಂಟಾಲ್ ಒಂದಕ್ಕೆ 1200 ರೂಪಾಯಿ ಕೊಟ್ಟು ಗೋಧಿ ಆಮದು ಮಾಡಿಕೊಳ್ಳುವ ಸರಕಾರ, ಇಲ್ಲಿನ ರೈತರಿಂದ ಗೋಧಿ ಖರೀದಿಸುತ್ತಿಲ್ಲ.

{promotion-urls}

English summary
Narendra Modi government completing 3 years, 3yearsFarmersInTears-hashtag trending in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X