ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್ ನಲ್ಲಿ ವಿಶ್ವಕ್ಕೆ ನಮ್ಮ ಮೋದಿನೇ ನಂಬರ್ 1

By Sachhidananda Acharya
|
Google Oneindia Kannada News

ನವದೆಹಲಿ, ಮೇ 28: ಪ್ರಧಾನಿ ನರೇಂದ್ರ ಮೋದಿ ಫೇಸ್ಬುಕ್ ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕರಾಗಿ ಮೂಡಿ ಬಂದಿದ್ದಾರೆ. ಸದ್ಯ ಅವರ ಫಾಲೋವರ್ಸ್ ಗಳ ಸಂಖ್ಯೆ ಬರೋಬ್ಬರಿ 4.17 ಕೋಟಿ.

2.0 ಕೋಟಿ ಹಿಂಬಾಲಕರೊಂದಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಪ್ರಧಾನ ಮಂತ್ರಿ ಕಾರ್ಯಾಲಯದ ಅಕೌಂಟ್ ಕೂಡಾ 1.3 ಕೋಟಿ ಹಿಂಬಾಲಕರನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದೆ.[ಮೋದಿ ಸರಕಾರಕ್ಕೆ 3ವರ್ಷ: ಗೌಡ್ರು, ಕುಮಾರಣ್ಣ ನೀಡಿದ ಸರ್ಟಿಫಿಕೇಟ್]

Modi becomes most followed world leader on Facebook

ಇನ್ನು ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಾಯಕರ ಪಟ್ಟಿಯಲ್ಲಿ ಟಾಪ್ 20ರ ಒಳಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 9ನೇ ಸ್ಥಾನ, ಸುಷ್ಮಾ ಸ್ವರಾಜ್ 16ನೇ ಸ್ಥಾನ ಪಡೆದಿದ್ದಾರೆ.[ಪ್ರಧಾನಿಯಾಗಿ 3 ವರ್ಷಗಳ ನಂತರವೂ ಮೋದಿ ಜನಪ್ರಿಯತೆ ಸೂಪರ್!]

ಇದರ ಜತೆಗೆ ಅತೀ ಹೆಚ್ಚು ಇಂಟರಾಕ್ಷನ್ಸ್ (ಲೈಕ್, ಕಮೆಂಟ್ ಮತ್ತು ಶೇರ್ ) ಇರುವ ನಾಯಕರೂ ಮೋದಿಯೇ ಆಗಿದ್ದಾರೆ. ಪ್ರಧಾನಿ ಮನೆಗೆ ತಾಯಿ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದ ಪೋಸ್ಟ್ ಎರಡನೇ ಅತ ಹೆಚ್ಚು ಇಂಟರಾಕ್ಷನ್ಸ್ ಹೊಂದಿದೆ. ಇಂಟರಾಕ್ಷನ್ ಗಳಲ್ಲಿ ಕಾಂಬೋಡಿಯಾ ಪ್ರಧಾನಿ ಸಮ್ದೇಚ್ ಹುನ್ ಸೆನ್ ಎರಡನೇ ಸ್ಥಾನದಲ್ಲಿದ್ದು, ಅವರಿಗಿಂತಲೂ ಮೋದಿ ಸರಿಸುಮಾರು ಎರಡು ಪಟ್ಟು ಹೆಚ್ಚಿನ ಇಂಟರಾಕ್ಷನ್ ಹೊಂದಿದ್ದಾರೆ.
ಇನ್ನು ಈ ಹಿಂದೆ ಬರಾಕ್ ಒಬಾಮ ಫೇಸ್ಬುಕ್ಕಿನಲ್ಲಿ ಅತೀ ಜನಪ್ರಿಯ ನಾಯಕರಾಗಿದ್ದರು. ಅವರಿಗೆ 5.2 ಕೋಟಿ ಹಿಂಬಾಲಕರಿದ್ದರು.

English summary
Prime Minister Narendra Modi is the most followed world leader on Facebook with over 41.7 million people following his personal account. While US President Donald Trump is at the second position with 20 million followers on his personal page. Other Indian leaders that featured in the top 20 list included President Pranab Mukherjee and External Affairs Minister Sushma Swaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X