ಕೇಂದ್ರ ಗೃಹ ಸಚಿವಾಲಯದ ವೆಬ್ ಸೈಟ್ ಹ್ಯಾಕ್!

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 12: ಕೇಂದ್ರ ಗೃಹ ಸಚಿವಾಲಯದ ವೆಬ್ ಸೈಟ್ ಗೆ ಆನ್ ಲೈನ್ ನಲ್ಲಿ ಕನ್ನ ಹಾಕಲಾಗಿದ್ದು, ಈ ವಿಚಾರ ಪತ್ತೆಯಾಗುತ್ತಲೇ ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ ಆ ವೆಬ್ ಸೈಟ್ ಅನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದೆ.

ಈ ಬಗ್ಗೆ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡವು ಈ ಬಗ್ಗೆ ಕೂಲಕಂಷ ತನಿಖೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.[ಮೈಸೂರು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್]

Ministry of Home Affairs website hacked, temporarily blocked

ಕಳೆದ ತಿಂಗಳು, ರಾಷ್ಟ್ರೀಯ ಭದ್ರತಾ ಸಂಸ್ಥೆಯ (ಎನ್ ಎಸ್ ಜಿ) ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲಾಗಿತ್ತು. ಅದನ್ನು ಪಾಕಿಸ್ತಾನ ಮೂಲದ ಹ್ಯಾಕರ್ ಗಳೇ ಹ್ಯಾಕ್ ಮಾಡಿರುವ ಬಗ್ಗೆ ಅನುಮಾನಗಳಿದ್ದವು. ಈ ಬಾರಿಯೂ ಅಂಥದ್ದೇ ಪಾಕ್ ಪರ ಹ್ಯಾಕರ್ ಗಳೇ ಗೃಹ ಸಚಿವಾಲಯದ ವೆಬ್ ಸೈಟ್ ಗೆ ಕನ್ನ ಹಾಕಿರಬಹುದೆಂದು ಅಂದಾಜಿಸಲಾಗಿದೆ.[ರಾಜೀವ್ ಗಾಂಧಿ ಆರೋಗ್ಯ ವಿವಿ ವೆಬ್‌ಸೈಟ್‌ ಹ್ಯಾಕ್‌]

ನಾಲ್ಕು ವರ್ಷಗಳಲ್ಲಿ 700 ಕನ್ನ: ಕಳೆದ ನಾಲ್ಕು ತಿಂಗಳಲ್ಲಿ ಭಾರತ ಮೂಲದ ಸುಮಾರು 700 ವೆಬ್ ಸೈಟ್ ಗಳಿಗೆ ಕನ್ನ ಹಾಕಲಾಗಿದೆ ಎಂದು ಮೂಲಗಳು ಹೇಳಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಳೆದ ನಾಲ್ಕು ವರ್ಷಗಳಲ್ಲಿ 8,348 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದೂ ಹೇಳಲಾಗಿದೆ.

English summary
The Ministry of Home Affairs website was hacked today, prompting authorities to temporarily block it, an official said.
Please Wait while comments are loading...