ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಗೋಳ ವಿಸ್ಮಯ 'ಬುಧ ಸಂಕ್ರಮಣ' ಕಣ್ಣು ತುಂಬಿಕೊಳ್ಳಿ

|
Google Oneindia Kannada News

ಬೆಂಗಳೂರು, ಮೇ. 08: ಬುಧ ಗ್ರಹವು ಸೂರ್ಯನ ಮುಂದೆ ಹಾದು ಹೋಗುವ ದೃಶ್ಯವನ್ನು ನಾಳೆ ಅಂದರೆ ಮೇ 9 ರಂದು ಕಣ್ಣು ತುಂಬಿಕೊಳ್ಳಲು ಮರೆಯಬೇಡಿ.. ಖಗೋಳ ವಿಸ್ಮಯವಾದ ಬುಧ ಸಂಕ್ರಮಣಕ್ಕೆ ಸೋಮವಾರ ಸಾಕ್ಷಿಯಾಗಲಿದೆ.

ಸೋಮವಾರ ಸೂರ್ಯ ಮತ್ತು ಭೂಮಿಯ ಮಧ್ಯೆ ಬುಧ ಗ್ರಹ ಹಾದುಹೋಗಲಿದೆ. ಈ ಬುಧ ಸಂಕ್ರಮವಣನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳು, ಖಗೋಳ ಶಾಸ್ತ್ರಜ್ಞರು ಕುತೂಹಲದಿಂದ ಕಾಯುತ್ತಿದ್ದಾರೆ.[ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು]

sun

ಏನಾಗಲಿದೆ?
ಇದು ಗ್ರಹಣದಂತೆ ಅಲ್ಲ. ಸೂರ್ಯನ ಮುಂದೆ ಹಾದುಹೋಗುವ ಗ್ರಹ ಸಣ್ಣ ಚುಕ್ಕೆಯಂತೆ ಕಾಣಲಿದೆ. 2004ರಲ್ಲಿ ಶುಕ್ರ ಸಂಕ್ರಮಣ ಹಾಗೂ 2006ರಲ್ಲಿ ಬುಧ ಸಂಕ್ರಮಣ ನಡೆದಿತ್ತು. ಈಗ ಹತ್ತು ವರ್ಷದ ನಂತರ ಮತ್ತೆ ಬುಧ ಸಂಕ್ರಮಣ ಘಟಿಸಲಿದೆ.

ಸಮಯ? ಸೋಮವಾರ ಸಂಜೆ 4.45ರ ವೇಳೆಗೆ ಭಾರತದಲ್ಲಿ ಇದು ಗೋಚರವಾಗಲಿದೆ. ಸೂರ್ಯನಿಗೆ ಬಹಳ ಸಮೀಪದಲ್ಲಿರುವ ಗ್ರಹವೆಂದರೆ 'ಬುಧ'. ಕಂದು ಬಣ್ಣಹೊಂದಿದ್ದು, ಭೂಮಿಗೆ ಹೋಲಿಸಿದರೆ ಇದರ ಬುಧನ ಗಾಥ್ರ ಚಿಕ್ಕದು.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

ವೀಕ್ಷಿಸುವ ಪರಿ
ಸೌರ ಕನ್ನಡಕ ಇಲ್ಲವೆ ಸೋಲಾರ್‌ ಫಿಲ್ಟರ್ (solar filter) ಬಳಸಿ ದೂರದರ್ಶಕದ ಮೂಲಕ ವೀಕ್ಷಿಸುವುದೇ ಒಳ್ಳೆಯದು. ನೇರವಾಗಿ ವೀಕ್ಷಣೆ ಮಾಡಿದರೆ ಕಣ್ಣಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದನ್ನು ವೀಕ್ಷಣೆ ಮಾಡಿದರೆ ಯಾವ ಗಂಡಾಂತರವೂ ಇಲ್ಲ.

English summary
There would be a partial eclipse of the sun by Mercury on May 9. Planet will come between the sun and the earth, crossing their path.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X