ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಪೆಮಾ ಖಂಡು

By Mahesh
|
Google Oneindia Kannada News

ಇಟಾನಗರ, ಜುಲೈ 18: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಪೆಮಾ ಖಂಡು ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.ಈ ಮೂಲಕ 37 ವರ್ಷದ ಪೆಮಾ ಖಂಡು ದೇಶದ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಪೆಮಾ ಖಂಡು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪೆಮಾ ಖಂಡು ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಚೌನಾ ಮೇನ್ ಅವರು ಕೂಡಾ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಥಾಗತ ರಾಯ್ ಅವರು ಪೆಮಾ ಖಂಡು ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಕಾಂಗ್ರೆಸ್​ನ ಪದಚ್ಯುತ ಸಿಎಂ ಖಲಿಕೋ ಪಾಲ್ ಸೇರಿದಂತೆ 30 ಭಿನ್ನಮತೀಯ ಶಾಸಕರೊಂದಿಗೆ ಪೆಮಾ ಖಂಡು ಅವರಿಗೆ ಬೆಂಬಲ ಸೂಚಿಸಿದ್ದಾರೆ. 60 ಸದಸ್ಯ ಬಲದ ಅರುಣಾಚಲ ವಿಧಾನ ಸಭೆಯಲ್ಲಿ ಪ್ರಸ್ತುತ 58 ಶಾಸಕರಿದ್ದು, ಕಾಂಗ್ರೆಸ್ ಪಕ್ಷಕ್ಕೆ ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 47 ಶಾಸಕರ ಬೆಂಬಲ ಸಿಕ್ಕಿದೆ. ಪೆಮಾ ಖಂಡು ಅವರು ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿ ಬೆಳೆದಿದ್ದು ಹೇಗೆ? ಓದಿದ್ದು ಎಲ್ಲಿ? ಕೌಟುಂಬಿಕ ಹಿನ್ನೆಲೆ ಏನು? ಮುಂದೆ ಓದಿ...

 ದೆಹಲಿ ಹಿಂದೂ ಕಾಲೇಜಿನ ಪದವೀಧರ

ದೆಹಲಿ ಹಿಂದೂ ಕಾಲೇಜಿನ ಪದವೀಧರ

ಕುಟುಂಬದ ಹಿರಿಯ ಮಗ ಪೆಮಾ ಅವರು ದೆಹಲಿಯ ಪ್ರತಿಷ್ಠಿತ ಹಿಂದೂ ಕಾಲೇಜಿನ ಪದವೀಧರ, ತಂದೆ ದೋರ್ಜಿ ಖಂಡು ಅವರ ನಿಧನ ನಂತರ ರಾಜಕೀಯಕ್ಕೆ ಪ್ರವೇಶ.

2011ರಲ್ಲಿ ದೋರ್ಜಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಬಳಿಕ ಪೆಮಾ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡರು.

ತವಾಂಗ್ ಜಿಲ್ಲೆ ಬುಡಕಟ್ಟು ಜನಾಂಗದ ನಾಯಕ

ತವಾಂಗ್ ಜಿಲ್ಲೆ ಬುಡಕಟ್ಟು ಜನಾಂಗದ ನಾಯಕ

ಚೀನಾ ಗಡಿ ಪ್ರದೇಶದಲ್ಲಿ ತವಾಂಗ್ ಜಿಲ್ಲೆಯಿಂದ ಬಂದಿರುವ ಪೆಮಾ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ. ಮೊನ್ಪಾ ಬುಡಕಟ್ಟು ಜನಾಂಗಕ್ಕೆ ಸೇರಿದ ಪೆಮಾ ಅವರು 2000ರಲ್ಲಿ ಕಾಂಗ್ರೆಸ್ ಸೇರಿದರು 2005ರಲ್ಲಿ ಎಪಿಸಿಸಿ ಕಾರ್ಯದರ್ಶಿಯಾದರು. 2010ರಲ್ಲಿ ತವಾಂಗ್ ಜಿಲ್ಲೆ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದರು. 2014ರಲ್ಲಿ ಮುಕ್ತೋನಿಂದ ಅಸೆಂಬ್ಲಿಗೆ ಮರು ಆಯ್ಕೆಯಾದರು.

ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕನಸು

ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕನಸು

ಅರುಣಾಚಲ ಪ್ರದೇಶದಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕನಸು ಹೊತ್ತಿರುವ ಪೆಮಾ ಅವರು ಜಪಾನ್, ಥೈಲ್ಯಾಂಡ್, ಮಕಾವ್, ಶ್ರೀಲಂಕಾ, ಯುಎಸ್ ಎ, ಕೆನಡಾ, ದಕ್ಷಿಣ ಆಫ್ರಿಕಾ, ಭೂತನ್ ಮುಂತಾದ ದೇಶಗಳನ್ನು ಸುತ್ತಿ ಬಂದಿದ್ದಾರೆ.

ನಾಗರಿಕರ ಆರ್ಮಿ ರಚನೆ, ಮೆಡಿಕಲ್ ಕ್ಯಾಂಪ್ ಮೂಲಕ ಜನಪ್ರಿಯತೆ ಗಳಿಸಿದವರು, ಬೋಧಿ ಭಾಷೆ ಬಲ್ಲವರು.

ಕ್ರೀಡಾಭಿಮಾನಿ ಪೆಮಾ

ಕ್ರೀಡಾಭಿಮಾನಿ ಪೆಮಾ

ಫುಟ್ಬಾಲ್, ಕ್ರಿಕೆಟ್, ಬಾಡ್ಮಿಂಟನ್ ಹಾಗೂ ವಾಲಿಬಾಲ್ ಆಡುವ ಪೆಮಾ ಅವರು ಗ್ರಾಮೀಣಾಭಿವೃದ್ಧಿ, ಜಲ ಸಂಪನ್ಮೂಲ, ಪ್ರವಾಸೋದ್ಯಮ, ನಾಗರಿಕ ವಿಮಾನ ಹಾಗೂ ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವಿದೆ.

English summary
From assisting his father Dorjee Khandu in politics to working for social transformation, Pema Khandu has travelled a long way to sit in the coveted post of Chief Minister of Arunachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X