ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಹೇರ್ ಸ್ಟೈಲ್ ಅನುಕರಿಸಿ: ವಿದ್ಯಾರ್ಥಿಗಳಿಗೆ ಮೀರತ್ ಶಾಲೆಯೊಂದರ ಹುಕುಂ

ವ್ಯಾಸಂಗ ಮಾಡುತ್ತಿರುವ, 1ರಿಂದ12ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ಸುಮಾರು 2,800 ವಿದ್ಯಾರ್ಥಿಗಳು ಈಗಾಗಲೇ ಯೋಗಿ ಹೇರ್ ಸ್ಟೈಲ್ ಫಾಲೋ ಮಾಡಿದ್ದಾರೆ.

|
Google Oneindia Kannada News

ಮೀರತ್, ಏಪ್ರಿಲ್ 28: ಉತ್ತರ ಪ್ರದೇಶದ ಮೀರತ್ ನಲ್ಲಿರುವ ಸಿಬಿಎಸ್ ಸಿ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಚಿತ್ರ ವಿಚಿತ್ರ ಸೂಚನೆಗಳನ್ನು ನೀಡಲಾರಂಭಿಸಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ತನ್ನಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಆದಿತ್ಯ ನಾಥ್ ಅವರ ಹೇರ್ ಸ್ಟೈಲ್ ಅನ್ನು ಅನುಕರಿಸಬೇಕು ಎಂದು ಹುಕುಂ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿ ವ್ಯಾಸಂಗ ಮಾಡುತ್ತಿರುವ, 1ರಿಂದ12ನೇ ತರಗತಿವರೆಗಿನ ವಿದ್ಯಾರ್ಥಿಗಳಲ್ಲಿ ಸುಮಾರು 2,800 ವಿದ್ಯಾರ್ಥಿಗಳು ಯೋಗಿ ಹೇರ್ ಸ್ಟೈಲ್ ಅನುಕರಿಸುವ ಒತ್ತಡಕ್ಕೆ ಸಿಲುಕಿದ್ದಾರೆಂದು ಹೇಳಲಾಗಿದೆ.

Meerut school wants students to get ‘Yogi Adityanath-like haircut’

ಅಷ್ಟೇ ಅಲ್ಲ, ಶಾಲಾ ಆಡಳಿತ ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಗಡ್ಡ ಬಿಡಕೂಡದೆಂದು ಸೂಚಿಸಿದೆಯಂತೆ. ''ಶಾಲೆಗಳು ಮದರಾಸಾಗಳಲ್ಲ. ಹಾಗಾಗಿ, ಇಲ್ಲಿ ಯಾರೂ ಗಡ್ಡ ಬಿಡುವಂತಿಲ್ಲ'' ಎಂದು ಮಂಡಳಿ ತಾಕೀತು ಮಾಡಿದೆಯಂತೆ.

ಇದಿಷ್ಟೇ ಅಲ್ಲ. ಇನ್ನೂ ಇವೆ. ವಿದ್ಯಾರ್ಥಿಗಳು ಮನೆಯಿಂದ ತರುವ ಬುತ್ತಿಯಲ್ಲಿ ಮಾಂಸಾಹಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ, ಲವ್ ಜಿಹಾದ್ ಅನ್ನು ತಡೆಗಟ್ಟಲು ತರಗತಿಗಳಲ್ಲಿ ಬಾಲಕ, ಬಾಲಕಿಯನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

English summary
A school in Meerut affiliated to the CBSE Board has issued bizarre orders asking its students to sport hair like Uttar Pradesh Chief Minister Yogi Adityanath. Nearly 2,800 students, to get hairstyles on the line of CM Yogi Adityanath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X