ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗೀಕಾರ ಆಗುವುದಿಲ್ಲ ಎಂದರಿತೂ ರಾಜೀನಾಮೆ ನೀಡಿದ ಮಾಯಾವತಿ?

ಬಿಎಸ್ಪಿ ನಾಯಕಿ ಮಾಯಾವತಿ ಮಂಗಳವಾರ (ಜುಲೈ 18) ಸಂಜೆ ರಾಜೀನಾಮೆ ಪತ್ರವನ್ನು ರಾಜ್ಯಸಭಾ ಸಭಾಪತಿಗಳಿಗೆ ರವಾನಿಸಿದ್ದಾರೆ. ಆದರೆ ರಾಜೀನಾಮೆ ಪತ್ರ ನಿಗದಿತ ವಿಧಾನದಲ್ಲಿ ಇಲ್ಲದೇ ಇರುವುದರಿಂದ ಮಾಯಾವತಿ ರಾಜೀನಾಮೆ ಅಂಗೀಕಾರವಾಗುವ ಸಾಧ್ಯತೆ ಇಲ್ಲ.

|
Google Oneindia Kannada News

ರಾಜ್ಯಸಭಾ ಸದಸ್ಯೆ ಕುಮಾರಿ ಮಾಯಾವತಿ ರಾಜೀನಾಮೆ 'ಪ್ರಹಸನ' ಒಂದು ರೀತಿ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎನ್ನುವಂತಾಗಿದೆ. ಜೊತೆಗೆ, ರಾಜೀನಾಮೆ ನೀಡಲು ಮೋದಿ ಸರಕಾರ ದಲಿತರ ಪರವಾಗಿ ಧ್ವನಿಯೆತ್ತಲು ಬಿಡುತ್ತಿಲ್ಲ ಎನ್ನುವ ಹೇಳಿಕೆಗಳು.

ಮೂರ್ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಗೆ ಭಾರತೀಯ ಸಂವಿಧಾನದಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ಯಾವ ರೀತಿ ರಾಜೀನಾಮೆ ನೀಡಬೇಕು ಎನ್ನುವುದು ಗೊತ್ತಿಲ್ಲವೇ?

ರಾಜ್ಯಸಭೆ ಸ್ಥಾನಕ್ಕೆ ಮಾಯಾವತಿ ರಾಜೀನಾಮೆ ಬೆದರಿಕೆರಾಜ್ಯಸಭೆ ಸ್ಥಾನಕ್ಕೆ ಮಾಯಾವತಿ ರಾಜೀನಾಮೆ ಬೆದರಿಕೆ

ತಾನಿಟ್ಟ ಹೆಜ್ಜೆ ಹಿಂಪಡೆಯದ ಮಾಯಾವತಿ ಮಂಗಳವಾರ (ಜುಲೈ 18) ಸಂಜೆ ರಾಜೀನಾಮೆ ಪತ್ರವನ್ನು ರಾಜ್ಯಸಭಾ ಸಭಾಪತಿಗಳಿಗೆ ರವಾನಿಸಿದ್ದಾರೆ. ಆದರೆ ರಾಜೀನಾಮೆ ಪತ್ರ ನಿಗದಿತ ವಿಧಾನದಲ್ಲಿ ಇಲ್ಲದೇ ಇರುವುದರಿಂದ ಮಾಯಾವತಿ ರಾಜೀನಾಮೆ ಅಂಗೀಕಾರವಾಗುವ ಸಾಧ್ಯತೆ ಇಲ್ಲ.

ರಾಜ್ಯಸಭೆಯ ಕಾನೂನಿನಂತೆ ರಾಜೀನಾಮೆ ಪತ್ರದಲ್ಲಿ ಯಾವುದೇ ಷರತ್ತು (condition) ಹಾಕಿ ರಾಜೀನಾಮೆ ನೀಡುವಂತಿಲ್ಲ, ರಾಜೀನಾಮೆ ಎನ್ನುವುದು ಒಂದು ವಾಕ್ಯದಲ್ಲಿ ಇರಬೇಕು. ಆದರೆ ಮಾಯಾವತಿಯ ನೀಡಿದ ರಾಜೀನಾಮೆ ಪತ್ರದಲ್ಲಿ ತಾನು ಯಾಕೆ ರಾಜೀನಾಮೆ ನೀಡುತ್ತಿದ್ದೇನೆಂದು ಸ್ಪಷ್ಟೀಕರಣ ನೀಡಿದ್ದಾರೆ.

ಮಾಯಾವತಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಬಿಎಸ್ಪಿ ಖಚಿತ ಪಡಿಸಿದೆ. ಒಟ್ಟಿನಲ್ಲಿ ಈ ವಿದ್ಯಮಾನ ರಾಜೀನಾಮೆ ನೀಡಿದ ಹಾಗೆಯೂ ಇರಬೇಕು, ಅದು ಆಂಗೀಕಾರನೂ ಆಗಬಾರದು ಎನ್ನುವ ಪೂರ್ವ ನಿಯೋಜಿತ ರಾಜಕೀಯ ತಂತ್ರಗಾರಿಕೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮುಂದೆ ಓದಿ

ರಾಜ್ಯಸಭಾ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನೆ

ರಾಜ್ಯಸಭಾ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನೆ

ತನ್ನ ರಾಜೀನಾಮೆಗೆ ಕಾರಣ ಏನು ಎಂದು ಮಾಯಾವತಿ ಮೂರು ಪುಟದ ಪತ್ರವನ್ನು ರಾಜ್ಯಸಭಾ ಅಧ್ಯಕ್ಷರಿಗೆ ರವಾನಿಸಿದ್ದಾರೆ. ಹಾಗಾಗಿ ಇದು ರಾಜ್ಯಸಭೆಯ ಕಾನೂನಿನ ಪ್ರಕಾರ ಅಂಗೀಕಾರವಾಗುವುದಿಲ್ಲ. ಒಂದೋ ಮಾಯಾವತಿ ತನ್ನ ರಾಜೀನಾಮೆಯನ್ನು ವಾಪಸ್ ಪಡೆಯಬೇಕು ಅಥವಾ ಸದನದ ಕಾನೂನಿನಂತೆ ರಾಜೀನಾಮೆ ಪತ್ರ ಬರೆದು ಅಧ್ಯಕ್ಷರಿಗೆ ಮರು ಸಲ್ಲಿಸಬೇಕು.

ಅಮರೀಂದರ್ ಸಿಂಗ್, ಸಿದ್ದು

ಅಮರೀಂದರ್ ಸಿಂಗ್, ಸಿದ್ದು

ಈ ಹಿಂದೆ ಕ್ಯಾ. ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿದ್ದು ಅವರ ರಾಜೀನಾಮೆ ಇದೇ ಕಾರಣಕ್ಕೆ ತಿರಸ್ಕೃತವಾಗಿತ್ತು. ಸಂಸತ್ತಿನ ಅಧಿವೇಶನದ ಎರಡನೇ ದಿನವೇ ( ಮೊದಲ ದಿನ ಮಾಜೀ/ಹಾಲೀ ಸದಸ್ಯರಿಗೆ ಶ್ರದ್ದಾಂಜಲಿ ನೀಡಿ ಬರ್ಖಾಸ್ತು ಮಾಡಲಾಗುತ್ತದೆ) ಮಾಯಾವತಿ, ಸಹರಣಪುರದಲ್ಲಿ ದಲಿತರ ಮೇಲೆ ದೌರ್ಜನ್ಯ ಎಸೆಯಲಾಗುತ್ತಿದೆ, ಸದನದಲ್ಲಿ ಮಾತನಾಡಲು ಕೇವಲ ಮೂರು ನಿಮಿಷದ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿಕೆ ನೀಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಮಾಯಾವತಿ ರಾಜೀನಾಮೆ

ಮಾಯಾವತಿ ರಾಜೀನಾಮೆ ನೀಡಿದ್ದು ಉತ್ತರಪ್ರದೇಶ ಚುನಾವಣೆಯಲ್ಲಿ ಹೀನಾಯ ಸೋಲು ಅನುಭಸಿದ್ದಕ್ಕಾಗಿ ಎನ್ನುವ ಟ್ವೀಟ್.

RSS ನಿಯಂತ್ರಿತ ಮೋದಿ ಸರಕಾರ

RSS ನಿಯಂತ್ರಿತ ಮೋದಿ ಸರಕಾರಕ್ಕೆ ದಲಿತರು ಮತ್ತು ಅಲ್ಪ ಸಂಖ್ಯಾತರ ಧ್ವನಿ ಕೇಳುತ್ತಿಲ್ಲ. ಇದಕ್ಕಾಗಿಯೇ ರಾಜ್ಯಸಭೆಯಲ್ಲಿ ಸಹೋದರಿ ಮಾಯಾವತಿ ಮಾತನಾಡಲು ಅವಕಾಶ ನೀಡಿಲ್ಲ.

ಹೀಗೊಂದು ಟ್ವೀಟ್

ರಾಜೀನಾಮೆ ನೀಡುತ್ತೇನೆ ಎನ್ನುವ ಮೊದಲು ಮಾಯಾವತಿಗೆ ತಿಳುವಳಿಕೆಯಿದ್ದರೆ ಸಾಕು. ಈಗಿರೋ ಬಿಎಸ್ಪಿ ಬಲಕ್ಕೆ ಮತ್ತೆ ರಾಜ್ಯಸಭಾ ಸ್ಥಾನ ಸಿಗುತ್ತಾ?

ಮಾಯಾವತಿಯ ರಾಜಕೀಯ ಮಾಡದಂತಾಗಲಿ

ದಯವಿಟ್ಟು ಮೀಸಲಾತಿ ಎನ್ನುವುದನ್ನು ನಿಲ್ಲಿಸಿ. ಯಾರೊಬ್ಬರೂ ದಲಿತರು ಅನ್ನೋ ವಿಚಾರದಲ್ಲಿ ಮಾಯಾವತಿಯ ಹಾಗೇ ರಾಜಕೀಯ ಮಾಡದಂತಾಗಲಿ.

English summary
BSP Leader and former Uttar Pradesh CM Mayawati resignation likely to be rejected on technical grounds and she knows it. Under the rules of Parliament, an MP's resignation must be limited to a single sentence and must not be conditional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X