ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ನೀಡಿದ ಕೇರಳ ಕಂಪನಿ

Posted By:
Subscribe to Oneindia Kannada

ತಿರುವನಂತಪುರಂ, ಜುಲೈ 20: ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ನೀಡಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಎರಡು ಕಂಪೆನಿಗಳು ತೆಗೆದುಕೊಂಡ ನಿರ್ಧಾರ ಚರ್ಚೆಗೆ ನಾಂದಿಹಾಡಿತ್ತು. ಈ ಕುರಿತು ಈಗಾಗಲೇ ನೀವು 'ಒನ್ ಇಂಡೀಯಾ'ದಲ್ಲಿ ಓಡಿರುತ್ತೀರಿ.

ಋತುಸ್ರಾವ ಮೊದಲ ದಿನ ಮಹಿಳಾ ಉದ್ಯೋಗಿಗಳಿಗೆ ಖಾಸಗಿ ಕಂಪೆನಿ ರಜಾ ಘೋಷಣೆ

ಆದರೆ ಈ ನಿಯಮವನ್ನು ಮಲಯಾಳಂ ಚಾನೆಲ್ ವೊಂದು ತನ್ನ ಕಚೇರಿಯಲ್ಲಿ ಜಾರಿಗೆ ತಂದಿದೆ. ಕೇರಳದ ಪ್ರಸಿದ್ಧ ಚಾನೆಲ್ ಗಳಲ್ಲೊಂದಾದ ಮಾತೃಭೂಮಿ, ವರ್ಷದಲ್ಲಿ 12 ದಿನ ಮಹಿಳೆಯರಿಗೆ ವೇತನ ಸಹಿತ ರಜೆ ನೀಡುವ ನಿರ್ಧಾರಮಾಡಿದೆ. ದೇಶದಾದ್ಯಂತ ಮಹಿಳೆಯರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Mathrubhumi -a malyalam channel gives a day off to women employees during their menstruation

ಇದಕ್ಕೂ ಮುನ್ನ ಮುಂಬೈ ಮೂಲದ ಕಲ್ಚರಲ್ ಮಷಿನ್ ಕಂಪೆನಿ ಈ ನಿಯಮವನ್ನು ಜಾರಿಗೆ ತಂದಿತ್ತು, ನಂತರ ಗೋಜೋಪ್ ಕಂಪೆನಿ ಸಹ ಈ ನಿಯಮವನ್ನು ಸ್ವಾಗತಿಸಿ, ತಾನೂ ಅಳವಡಿಸಿಕೊಂಡಿತ್ತು.

'ಋತುಸ್ರಾವದ ಸಮಯದಲ್ಲಿ ದೇಹದಲ್ಲಾಗುವ ಹಾರ್ಮೋನ್ ವ್ಯತ್ಯಯದಿಂದಾಗಿ ಮಹಿಳೆಯರು ಮಾನಸಿಕ ಹಾಗೂ ದೈಹಿಕವಾಗಿ ತೀರಾ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಕಚೇರಿಗೆ ಬಂದು, ಒತ್ತಡದ ಕೆಲಸ ಮಾಡುವುದು ನಿಜಕ್ಕೂ ಕಷ್ಟದ ವಿಚಾರ. ಆದ್ದರಿಂದಲೇ ಇಂಥ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರ ಒಳಿತಿಗೆ ನಾವು ಬದ್ಧ' ಎಂಬುದು ಈ ಮೂರೂ ಕಂಪೆನಿಯ ಮುಖ್ಯಸ್ಥರ ನುಡಿ.

Raichur :A computer operator kicks woman in Corporation office | Oneindia kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Kerala based malayalam channel, Mathrubhumi has implemented a new facility to its female employees. Employees can take leave on first day of the menstruation.
Please Wait while comments are loading...