ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE:ಪಂಜಾಬ್, ಗೋವಾ ಚುನಾವಣೆ: ಮಾಜಿ ಕ್ರಿಕೆಟಿಗ ಸಿಧು ಮತದಾನ

|
Google Oneindia Kannada News

ಚಂಡೀಗಢ/ ಪಣಜಿ, ಫೆಬ್ರವರಿ 4: ಬಹು ನಿರೀಕ್ಷಿತ ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭೆಗೆ ಚುನಾವಣೆಯ ಮತದಾನ ಆರಂಭಗೊಂಡಿದೆ.

ಅಪನಗದೀಕರಣದ ನಂತರ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆ ಇದಾಗಿರುವುದರಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇದು ಭಾರೀ ದೊಡ್ಡ ಸವಾಲಾಗಿದೆ.

Manohar Parrikar, JJ Singh Cast Their Votes As Polls Begin In Goa, Punjab

ಎರಡೂ ರಾಜ್ಯಗಳಲ್ಲಿ ಈವರೆಗೆ ಆಗಿರುವ ಮತದಾನದ ಹೈಲೈಟ್ಸ್

- ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿಕೊಂಡಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಂದ ಅಮೃತಸರದ ಪೂರ್ವಭಾಗದ ಮತಗಟ್ಟೆಯಲ್ಲಿ ಮತದಾನ (ಬೆ. 11: 50)

-ಪಂಜಾಬ್ ಮುಖ್ಯಮಂತ್ರಿ ಗಾದಿಗೆ ಬಿಂಬಿತವಾಗಿರುವ ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ಮತದಾನ (ಬೆ. 11:49)

- ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಿಂದ ಜಲಂಧರ್ ಮತಗಟ್ಟೆಯಲ್ಲಿ ಮತದಾನ (ಬೆ. 11:30)

- ಇಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ದೋಷದಿಂದಾಗಿ ಕೆಲವೆಡೆ ಮತದಾನ ಕೆಲಮಟ್ಟಿಗೆ ಸ್ಥಗಿತ (ಬೆ. 11:29)

- ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅವರ ಪುತ್ರ ಹಾಗೂ ಪಂಜಾಬ್ ನ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಹಾಗೂ ಕೇಂದ್ರ ಸಚಿವ ಹರ್ ಸಿಮ್ರತ್ ಬಾದಲ್ ಅವರಿಂದ ಮತದಾನ (ಬೆ. 11:00)

- ಜಲಾಬಾದ್ ನ ಆಮ್ ಆದ್ಮಿ ಪಾರ್ಟಿ ಸಂಸದ ಭಾಗವತ್ ಮನ್ನ್ ಜಲಾಲಾಬಾದ್ ನಲ್ಲಿ ಮತ ಚಲಾವಣೆ (ಬೆ. 9:50)

-ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರಿಂದ ಮಾರ್ಗೋವಾದ ಮತಗಟ್ಟೆಯಲ್ಲಿ ಮತದಾನ (ಬೆ. 9:30)

- ಅಮೃತಸರ ಬೂತ್ ನಂಬರ್ 124, 125ರಲ್ಲಿ ಮತದಾನ ಯಂತ್ರ ಅಡಚಣೆಯಿಂದಾಗಿ ಮತದಾನಕ್ಕೆ ಸುಮಾರು 40 ನಿಮಿಷಗಳ ತಡೆ

- ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಅವರಿಂದ ಮತದಾನ (ಬೆ 8:20)

- ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರಿಂದ ಪಣಜಿಯಲ್ಲಿ ಮತದಾನ (ಬೆಳಗ್ಗೆ 8:10)

- ಅಕಾಲಿದಳ ಅಭ್ಯರ್ಥಿ ಜೆಜೆ ಸಿಂಗ್ ಅವರಿಂದ ಪಟಿಯಾಲಾ ಅರ್ಬನ್ ಕ್ಷೇತ್ರದ ಮತಗಟ್ಟೆಯಲ್ಲಿ ಮತದಾನ

- ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಕೈಕೊಟ್ಟ ಹಿನ್ನೆಲೆಯಲ್ಲಿ ಪಂಜಾಬ್ ನ ಜಲಂಧರ್ ನ ಬೂತ್ ನಂ. 66ರಲ್ಲಿ ಮತದಾನ ವಿಳಂಬ

- ಬೆಳಗ್ಗೆ ಏಳೂವರೆ ಗಂಟೆಯಿಂದಲೇ ಮತದಾನ ಶುರುವಾಗಿದೆ.

- ಮುಂಜಾನೆ ಆರೂವರೆಗೇ ಟ್ವೀಟ್ ಮಾಡಿದ ಪ್ರಧಾನಿ ಮೋದಿಯಿಂದ ಜನರು ಮುಕ್ತವಾಗಿ ಮತದಾನ ಮಾಡುವಂತೆ ಮನವಿ

English summary
Punjab and Goa vote today as elections in five states begin and will be held through this month and into the next. This is the first electoral test for the BJP after Prime Minister Narendra Modi's demonetisation drive on November 8, which has been criticised vociferously by the opposition parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X