ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್ ಕೀ ಬಾತ್: 1975ರ ಜೂನ್ 25 ಇತಿಹಾಸದ ಕರಾಳ ದಿನ, ತುರ್ತು ಪರಿಸ್ಥಿತಿ ನೆನೆದ ಮೋದಿ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 25: "ಎಲ್ಲರಿಗೂ ಈದ್ ಹಾಗೂ ಜಗನ್ನಾಥ ರಥ ಯಾತ್ರೆಯ ಶುಭಾಶಯಗಳು. ನಮ್ಮಲ್ಲಿ ಪವಿತ್ರ ತಿಂಗಳು ರಂಜಾನ್ ನ್ನು ಗೌರವದಿಂದ ನೋಡಲಾಗುತ್ತದೆ. ವಿವಿಧತೆಯೇ ಭಾರತದ ಶಕ್ತಿ ಮತ್ತು ವಿಶೇಷ," ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕೀ ಬಾತ್'ನಲ್ಲಿ ಹೇಳಿದ್ದಾರೆ.

ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನ 33ನೇ ಕಂತು ಇವತ್ತು ಪ್ರಸಾರವಾಯಿತು.

ಮನ್ ಕೀ ಬಾತ್: ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿಮನ್ ಕೀ ಬಾತ್: ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿ

ಮನ್ ಕೀ ಬಾತ್ ನಲ್ಲಿ ಪ್ರಧಾನಿಗಳು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರು. ಜತೆಗೆ ಯೋಗದ ಮಹತ್ವ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದರು.

ಜೂನ್ 25, 1975ನ್ನು ಮರೆಯಲು ಸಾಧ್ಯವಿಲ್ಲ

ಜೂನ್ 25, 1975ನ್ನು ಮರೆಯಲು ಸಾಧ್ಯವಿಲ್ಲ

"ಪ್ರಜಾಪ್ರಭುತ್ವವನ್ನು ಪ್ರೀತಿಸುವವರು ಯಾರೂ ಜೂನ್ 25, 1975ರ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಇಡೀ ದೇಶವೇ ಅವತ್ತು ಜೈಲಾಗಿತ್ತು. ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಯಿತು," ಎಂದು ಪ್ರಧಾನಿ ನರೇಂದ್ರ ಮೋದಿ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರು.

"ಪ್ರಜಾಪ್ರಭುತ್ವ ನಮ್ಮ ವ್ಯವಸ್ಥೆ ಮಾತ್ರವಲ್ಲ ನಮ್ಮ ತತ್ವ. ಶಾಶ್ವತ ಜಾಗರೂಕತೆಯಿಂದ ಇರುವುದು ಸ್ವಾತಂತ್ರ್ಯಕ್ಕೆ ನಾವು ಕೊಡುವ ಬೆಲೆ," ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.

ಪ್ರಧಾನಿ ಮಾತಿಗೆ ಕಿವಿಯಾದ ಉತ್ತರಾಖಂಡ್ ಸಿಎಂ

ಪ್ರಧಾನಿ ಮಾತಿಗೆ ಕಿವಿಯಾದ ಉತ್ತರಾಖಂಡ್ ಸಿಎಂ

ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಮ್ಮ ಸಂಪುಟ ಸದಸ್ಯರೊಂದಿಗೆ ಮನ್ ಕೀ ಬಾತ್ ಆಲಿಸಿದ್ದು ವಿಶೇಷವಾಗಿತ್ತು. ಡೆಹ್ರಾಡೂನ್ ನಲ್ಲಿ ಅವರು ಮನ್ ಕೀ ಬಾತ್ ಆಲಿಸಿದರು.

ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳುಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು

ಬಿಜ್ನೂರ್ ಜನತೆ ಅಭಿನಂದಿಸಿದ ಮೋದಿ

ಬಿಜ್ನೂರ್ ಜನತೆ ಅಭಿನಂದಿಸಿದ ಮೋದಿ

ಇತ್ತೀಚೆಗೆ ಸರಕಾರದ ಹಣ ಹಿಂತುರುಹಿಸಿ ತಾವೇ ತಮ್ಮ ಹಣದಲ್ಲಿ ಟಾಯ್ಲೆಟ್ ಕಟ್ಟುತ್ತೇವೆ ಎಂದು ನಿರ್ಧರಿಸಿದ ಬಿಜ್ನೋರ್ ನ ಮುಬಾರಕ್ ಪುರ ಮುಸ್ಲಿಂ ಸಮುದಾಯವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

ಮನ್ ಕೀ ಬಾತ್: ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿಮನ್ ಕೀ ಬಾತ್: ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿ

ಬಡವರ ದೇವರು ಜಗನ್ನಾಥ

ಬಡವರ ದೇವರು ಜಗನ್ನಾಥ

"ಜಗನ್ನಾಥ ದೇವರು ಬಡವರ ದೇವರು. ಕೆಲವರಿಗೆ ಗೊತ್ತಿರಬಹುದು ಇಂಗ್ಲೀಷಿನಲ್ಲಿ ಜಗ್ಗರ್ ನಾಟ್ ಅಂದರೆ ಬೃಹತ್ ರಥ; ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೇಶದ ಹಲವು ಭಾಗಗಳಲ್ಲಿ ಮಹಾನ್ ಭಕ್ತಿ ಮತ್ತು ಉತ್ಸಾಹದಿಂದ ಜಗನ್ನಾಥ ರಥ ಯಾತ್ರೆ ಆಚರಿಸಲಾಗುತ್ತಿದೆ. ಎಲ್ಲರಿಗೂ ಜಗನ್ನಾಥ ರಥಯಾತ್ರೆಯ ಶುಭಾಶಯಗಳು," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಯೋಗದಿಂದ ಏಕತೆ

ಯೋಗದಿಂದ ಏಕತೆ

ಯೋಗ ವಿಶ್ವವನ್ನು ಇವತ್ತು ಒಂದುಗೂಡಿಸಿದೆ. ಜಗತ್ತಿಗೆ ಭಾರತ ನೀಡಿದ ಮಹಾನ್ ಕೊಡುಗೆ ಯೋಗ ಎಂದು ಮೋದಿ ಹೇಳಿದರು. ಅಹಮದಾಬಾದ್ ನಲ್ಲಿ 55,000 ಸಾವಿರ ಯೋಗಪಟುಗಳು ಏಕಕಾಲದಲ್ಲಿ ಯೋಗ ಪ್ರದರ್ಶನ ಮಾಡಿ ವಿಶ್ವದಾಖಲೆ ಸ್ಥಾಪಿಸಿದ್ದಕ್ಕೆ ಪ್ರಧಾನಿ ಅಭಿನಂದನೆಯನ್ನೂ ಸಲ್ಲಿಸಿದರು

ಮೋದಿಯವರ 'ಮನ್ ಕಿ ಬಾತ್' ಪುಸ್ತಕದ ರೂಪದಲ್ಲಿಮೋದಿಯವರ 'ಮನ್ ಕಿ ಬಾತ್' ಪುಸ್ತಕದ ರೂಪದಲ್ಲಿ

English summary
Mann Ki Baat: Prime minister Narendra Modi greets nation on Eid, Jagannath Rath Yatra and praises India’s unity in diversity. He said that, ‘India's diversity is its uniqueness and strength’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X