ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ: ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆ ಕಣಕ್ಕೆ

By Sachhidananda Acharya
|
Google Oneindia Kannada News

ಇದೇ ಮೊದಲ ಬಾರಿಗೆ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕಣಕ್ಕಿಳಿಯುತ್ತಿದ್ದಾರೆ. ವಿಶೇಷ ಅಂದರೆ ಈಕೆ ಕಣಕ್ಕಿಳಿಯುತ್ತಿರುವುದು ಇರೋಮ್ ಶರ್ಮಿಳಾರ 'ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್ (PRAJA)' ಎಂಬ ಹೊಸ ಪಕ್ಷದಿಂದ.

16 ವರ್ಷಗಳ ಕಾಲ 'ಸೇನಾ ವಿಶೇಷಾಧಿಕಾರ ಕಾಯ್ದೆ (AFSPA)' ವಿರುದ್ಧ ಅಮರಣಾಂತ ಉಪವಾಸ ನಿರಶನ ಕೈಗೊಂಡು ರಾಷ್ಟ್ರ , ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿದ್ದ ಇರೋಮ್ ಶರ್ಮಿಳಾ ಕಳೆದ ವರ್ಷ ತಮ್ಮ ಉಪವಾಸ ಹೋರಾಟ ನಿಲ್ಲಿಸಿದ್ದರು. ಇದೀಗ ಸಕ್ರಿಯ ರಾಜಕಾರಣದ ಮೂಲಕ ಶರ್ಮಿಳಾ ತಮ್ಮ ಹೋರಾಟ ಮುಂದುವರಿಸಲು ಹೊರಟಿದ್ದು, ಮಣಿಪುರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.[5 ರಾಜ್ಯಗಳಲ್ಲಿ ಚುನಾವಣೆ ಮತದಾನ, ಫಲಿತಾಂಶ: ನಿಮಗಿದು ತಿಳಿದಿರಲಿ]

manipur: muslim women candidate contesting, first time in history

ಚುಣಾವಣೆಯಲ್ಲಿ ಸ್ಪರ್ಧಿಸಲು ಇರೋಮ್ ಶರ್ಮಿಳಾ 'ಪೀಪಲ್ ರಿಸರ್ಜೆನ್ಸ್ ಅಂಡ್ ಜಸ್ಟಿಸ್ ಅಲಯನ್ಸ್' ಎಂಬ ಪಕ್ಷ ಹುಟ್ಟುಹಾಕಿದ್ದಾರೆ. ಅರವಿಂದ್ ಕೇಜ್ರಿವಾಲ್ ಮಾದರಿಯಲ್ಲಿ ಶರ್ಮಿಳಾ ಮಣಿಪುರ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಮಾತ್ರವಲ್ಲ ಮಣಿಪುರ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರನ್ನು ಅವರ ಪಕ್ಷ ಕಣಕ್ಕಿಳಿಸುತ್ತಿದೆ.[ಐರೋಮ್ ಶರ್ಮಿಳಾ ಹೊಸ ರಾಜಕೀಯ ಪಕ್ಷ ಘೋಷಣೆ]

50 ವರ್ಷಗಳ ನಂತರ ಮಣಿಪುರ ಹೇಗಿರಬೇಕು ಎಂಬ ಯೋಜನೆ ಹಾಕಿಕೊಂಡು ಇರೋಮ್ ಶಾರ್ಮಿಳಾ ಚುನಾವಣೆಗೆ ಹೊರಟಿದ್ದಾರೆ. ಅವರ ಜತೆ ವಿಶ್ವಸಂಸ್ಥೆ ಸೇರಿದಂತೆ ಮತ್ತಿತರ ಪ್ರತಿಷ್ಠಿತ ಕೇಂದ್ರಗಳಲ್ಲಿ ಕೆಲಸ ಮಾಡಿದ ಪರಿಣತರು ಕೈಜೋಡಿಸದ್ದಾರೆ. ಮಣಿಪುರದ ಸಾಂಪ್ರದಾಯಿಕ ಸಂಸ್ಕೃತಿ 'ಮೀತೇಯಿ' ಪುನರ್ ಸ್ಥಾಪನೆ ಅವರ ಚುನಾವಣಾ ಮಂತ್ರವಾಗಿದೆ.

ಇದು ಇರೋಮ್ ಶರ್ಮಿಳಾ ಪಕ್ಷ ಸ್ಪರ್ಧಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, 60ರಲ್ಲಿ 5 ಸ್ಥಾನಗಳಿಗಷ್ಟೇ ಸ್ಪರ್ಧಿಸುತ್ತಿದೆ. ಈ ಮೂಲಕ ಸಣ್ಣ ಹೆಜ್ಜೆಯಿಂದ ತನ್ನ ರಾಜಕೀಯ ಜೀವನ ಆರಂಭಿಸಲು ಇರೋಮ್ ಶರ್ಮಿಳಾ ಹೊರಟಿದ್ದಾರೆ.

English summary
First time in the history of Manipur, a Muslim women candidate is contesting in the upcoming state assembly election from ‘People’s Resurgence and Justice Alliance’ (PRAJA) party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X