ಮಣಿಪುರದಲ್ಲಿ ಕಾಂಗ್ರೆಸ್ ಪಾರಮ್ಯ ಕೊನೆಯಾಗುತ್ತದೆಯೆ?

Posted By:
Subscribe to Oneindia Kannada

ಇಂಫಾಲ, ಮಾರ್ಚ್ 9: ಮಣಿಪುರ ವಿಧಾನಸಭೆ ಫಲಿತಾಂಶದ ಬಗ್ಗೆ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ ಎಂಬುದರ ಮಾಹಿತಿ ಇಲ್ಲಿದೆ.

ಸಿ ವೋಟರ್ ಸಮೀಕ್ಷೆ
ಕಾಂಗ್ರೆಸ್: 17-23
ಬಿಜೆಪಿ 25-31
ಟಿಎಂಸಿ: 0
ಇತರೆ: 9-15

Manipur Election Result 2017 Live:
ಇಂಡಿಯಾ ಟುಡೇ-ಮೈ ಆಕ್ಸಿಸ್

ಕಾಂಗ್ರೆಸ್ 30-36

ಬಿಜೆಪಿ 16-22

ಬಿಎಸ್ ಪಿ 3-5

ಇತರರು 3-6

2012ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 42 ಸ್ಥಾನ ಗಳಿಸಿತ್ತು. ಆ ನಂತರ ಮಣಿಪುರ ಸ್ಟೇಟ್ ಕಾಂಗ್ರೆಸ್ ಪಾರ್ಟಿಯ ಐವರು ಸದಸ್ಯರು ಕಾಂಗ್ರೆಸ್ ನಲ್ಲೇ ಸೇರಿದ್ದರಿಂದ ಅರವತ್ತು ಸದಸ್ಯ ಬಲದ ಮಣಿಪುರ ವಿಧಾಸಸಭೆಯಲ್ಲಿ ಕೈ ಪಕ್ಷ 47 ಸಂಖ್ಯಾಬಲ ಹೊಂದಿತ್ತು. ಕಾಂಗ್ರೆಸ್ ನಿಂದ ಓಕ್ರಂ ಇಬೋಬಿ ಸಿಂಗ್ ಮುಖ್ಯಮಂತ್ರಿಯಾಗಿದ್ದರು.

ಈ ಬಾರಿ ಮಣಿಪುರ ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಓಕ್ರಂ ಇಬೋಬಿ ಸಿಂಗ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಭಾರತದಲ್ಲೇ ಯಾವ ಮುಖ್ಯಮಂತ್ರಿ ವಿರುದ್ಧವೂ ಈ ಪರಿಯ ಆರೋಪ ಇಲ್ಲ ಎಂದು ಹೇಳುವ ಮೂಲಕ ಹುಬ್ಬೇರುವಂತೆ ಮಾಡಿದ್ದರು.

ಎರಡು ಬೇರೆ ರೀತಿಯ ಸಮೀಕ್ಷೆ ಹೊರಬಂದಿದ್ದು, ಅಲ್ಲಿ ಹದಿನೈದು ವರ್ಷದಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಆಡಳಿತ ಏನಾಗುತ್ತದೆ ಎಂಬುದು ತಿಳಿಯಬೇಕಿದೆ. ಅದಕ್ಕೆ ಮಾರ್ಚ್ 11ರವರೆಗೆ ಕಾಯಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Manipur Election Result 2017 Live. Here are the updates for Manipur Assembly Election Results 2017.
Please Wait while comments are loading...