ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ದಿನ ಕಾಲ 'ಮಂಗಳ'ನೊಂದಿಗೆ ಮಾತಿಲ್ಲ

|
Google Oneindia Kannada News

ಬೆಂಗಗಳೂರು, ಜೂ. 08: ದೇಶದ ಹೆಮ್ಮೆಯನ್ನು ಜಗತ್ತಿಗೆ ಸಾರಿದ ಮಂಗಳಯಾನ 'ಮಾಮ್' ಜೂ. 8 ರಿಂದ 15 ದಿನಗಳ ಕಾಲ ಸಂಪರ್ಕ ಕಡಿದುಕೊಳ್ಳಲಿದೆ. ಮಂಗಳ ಮತ್ತು ಭೂಮಿ ನಡುವೆ ಸೂರ್ಯ ಅಡ್ಡ ಬರುವುದೇ ಸಂಪರ್ಕ ಕಡಿತವಾಗಲು ಕಾರಣ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.

ಜೂನ್ 22ರವರೆಗೂ ನೌಕೆ ಬ್ಲಾಕೌಟ್‌ ವಲಯದಲ್ಲಿರುತ್ತದೆ. ನಂತರ ಮತ್ತೆ ಸಂಪರ್ಕ ಸಾಧಿಸಲಾಗುವುದು. ಈ ಸಂದರ್ಭದಲ್ಲಿ ಕಕ್ಷೆ ತಾನೇ ತಾನಾಗಿ ಇರುವ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು ಯಾವ ಸಮಸ್ಯೆಗಳು ಆಗುವುದಿಲ್ಲ ಎಂದು ತಿಳಿಸಿದ್ದಾರೆ.[ಮಂಗಳಲೋಕಕ್ಕೆ ಮಂಗಳಯಾನ; ನಡೆದುಬಂದ ದಾರಿ!]

mars

ಬ್ಲಾಕ್‌ಔಟ್ ಅವಧಿಯಲ್ಲಿ ಕಕ್ಷೆ ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಪ್ರೋಗ್ರಾಮ್ ಮಾಡಲಾಗಿದೆ. ಮಂಗಳಯಾನ ನೌಕೆ ಕೆಂಪುಗ್ರಹದ ಅಂಗಳವನ್ನು ಯಶಸ್ವಿಯಾಗಿ ತಲುಪಿದ ನಂತರ ಮೊದಲ ಬಾರಿಗೆ ದೀರ್ಘ ಕಾಲ ಸಂಪರ್ಕ ಕಡಿದುಕೊಳ್ಳಲಿದೆ.

ಮುಂದಿನ ವರ್ಷ ಮೇ ತಿಂಗಳಲ್ಲಿ ಮತ್ತೆ ಬ್ಲಾಕ್‌ಔಟ್ ವಿದ್ಯಮಾನ ಜರುಗಲಿದೆ. ಆ ಅವಧಿಯಲ್ಲೂ ನೌಕೆಯು ಅವಲಂಬನ ಇಲ್ಲದ ಸ್ಥಿತಿಯಲ್ಲಿರುತ್ತದೆ. ಬಾಹ್ಯಾಕಾಶ ಅಂಗಳದಲ್ಲಿ ಇಂಥ ಘಟನಾವಳಿಗಳು ಜರುಗುತ್ತಲೇ ಇರುತ್ತವೆ.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?]

ಬ್ಲಾಕ್‌ಔಟ್ ಎಂದರೇನು?
ಸೌರಮಂಡಲದಲ್ಲಿರುವ ಗ್ರಹಗಳ ಕ್ರಮದ ಲೆಕ್ಕಾಚಾರದಂತೆ ಮಂಗಳ ಗ್ರಹ ಭೂಮಿಯ ಹಿಂದಿದೆ. ಈ ಎರಡೂ ಗ್ರಹಗಳ ನಡುವೆ ಸೂರ್ಯನ ಪ್ರವೇಶವಾದಾಗ ರೇಡಿಯೊ ಸಿಗ್ನಲ್‌ಗಳು ಭೂಮಿ ತಲುಪುವುದು ಕಷ್ಟ. ಒಂದು ವೇಳೆ ಈ ಹಂತದಲ್ಲಿ ಉಪಗ್ರಹ ಕೆಲಸ ಮಾಡಿದರೆ ಅವುಗಳಿಗೆ ಹಾನಿಯಾಗುವ ಅಪಾಯವಿರುತ್ತದೆ. ಹಾಗಾಗಿ ಅವುಗಳನ್ನು ತಟಸ್ಥ ಸ್ಥಿತಿಯಲ್ಲಿ ಇಡಲಾಗುತ್ತದೆ.[ಸಾಕ್ಷಾತ್ ದೇವರನ್ನೇ ಸಂಕಷ್ಟದಲ್ಲಿ ಸಿಲುಕಿಸುವ ಗ್ರಹಣ!]

ಕಳೆದ ಸಪ್ಟೆಂಬರ್ 24 ರಂದಯ ಮಂಗಳ ಗ್ರಹದ ಅಧ್ಯಯನಕ್ಕೆ ಭಾರತ ಅತಿ ಕಡಿಮೆ ವೆಚ್ಚದ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಇದು ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿತ್ತು.

English summary
The country's low-cost Mars mission that is in a rendezvous with the red planet for an extended period will enter the "blackout" phase snapping communication with the satellite. From June 8 to 22, the sun will block Mars from the earth snapping communication with the satellite. MOM during this period will go into an "autonomous mode" and will take its decisions, a senior Indian Space Research Organisation official told PTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X