ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾನಲ್ ಸಂಪಾದಕನಿಗೆ ಜೈಲೂಟ ಗ್ಯಾರಂಟಿ - ಮಲ್ಯ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್, 30: ಅಂತೂ ಇಂತೂ ಸಾಲಗಾರ ವಿಜಯ್ ಮಲ್ಯ ಮರುಪಾವತಿ ಹಾದಿಗೆ ಬಂದಿದ್ದಾರೆ. ಸೆಪ್ಟೆಂಬರ್ 2016 ರೊಳಗೆ ಬ್ಯಾಂಕುಗಳಿಂದ ಪಡೆದುಕೊಂಡಿರುವ 4 ಸಾವಿರ ಕೋಟಿ ಸಾಲವನ್ನು ಮರುಪಾವತಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಲ ಹಿಂದಕ್ಕೆ ನೀಡುತ್ತೇನೆ ಎಂದು ಮಲ್ಯ ಹೇಳಿದ್ದಾರೆ.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

ಮಲ್ಯ ವಕೀಲರು ಈ ಬಗ್ಗೆ ಸುಪ್ರೀಂ ಕೋರ್ಟ್ ಗೆ ಬುಧವಾರ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಮಲ್ಯರಿಂದ ಸಾಲ ಮರುಪಾವತಿಗೆ ಸಂಬಂಧಿಸಿ ಎಸ್ ಬಿಐ ನೇತೃತ್ವದ 17 ಬ್ಯಾಂಕುಗಳ ಒಕ್ಕೂಟ ಸುಪ್ರೀಂ ಮೆಟ್ಟಿಲೇರಿತ್ತು. ವಾರದೊಳಗೆ ಮಲ್ಯ ಉತ್ತರ ನೀಡಬೇಕು ಎಂದು ಅರ್ಜಿ ಸಲ್ಲಿಕೆ ಮಾಡಿತ್ತು. ಬುಧವಾರ ವಿಚಾರಣೆ ಆರಂಭಕ್ಕೂ ಮುನ್ನ ಮಲ್ಯ ಪರ ವಕೀಲರು ಸಾಲ ಮರುಪಾವತಿ ವಿಚಾರವನ್ನು ತಿಳಿಸಿದ್ದಾರೆ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

Mallya offers to pay Rs 4,000 crore by Septemeber 2016

ಆದರೆ ಬ್ಯಾಂಕ್ ಗಳು ಹೇಳಿಕೆಗೆ ಅಪಸ್ವರ ಎತ್ತಿವೆ. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದೇವೆ. ಸೆಪ್ಟೆಂಬರ್ ವರೆಗೆ ಕಾಯಲು ಅಸಾಧ್ಯ ಎಂದು ಹೇಳಿವೆ. ಒಟ್ಟಿನಲ್ಲಿ ಮಲ್ಯ ಕೆಲ ದಿನಗಳ ಅವಕಾಶ ಕೇಳಿದ್ದಾರೆ.

ವಿವಿಧ ಬ್ಯಾಂಕುಗಳಲ್ಲಿ 9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿರುವ ಮಲ್ಯ ಸುಸ್ತಿದಾರ ಎಂದು ಕರೆಸಿಕೊಂಡಿದ್ದಾರೆ. ಅಲ್ಲದೇ ಜಾರಿ ನಿರ್ದೇಶನಾಲಯ ಸಹ ಮಲ್ಯಗೆ ನೋಟಿಸ್ ನೀಡಿದ್ದು ಏಪ್ರಿಲ್ 2 ಕ್ಕೆ ಹಾಜರಾಗಿ ವಿವರಣೆ ನೀಡುವಂತೆ ತಿಳಿಸಿತ್ತು. ಸದ್ಯ ಮಲ್ಯ ಇಂಗ್ಲೆಂಡಿನಲ್ಲಿದ್ದು ಅರ್ಧಕ್ಕಿಂತ ಕಡಿಮೆ ಸಾಲ ಮರುಪಾವತಿ ಮಾಡುತ್ತೇನೆ ಎಂದು ನ್ಯಾಯಾಲಯಕ್ಕೆ ವಕೀಲರ ಮೂಲಕ ತಿಳಿಸಿದ್ದಾರೆ.[ಟ್ವಿಟ್ಟರ್‌ನಲ್ಲಿ ಮಾಧ್ಯಮಗಳಿಗೆ ತಿರುಗೇಟು ನೀಡಿದ ಮಲ್ಯ!]

ಅಲ್ಲದೇ, ತಮ್ಮ ವಿರುದ್ಧ ಇಲ್ಲ ಸಲ್ಲದ ಕಾಮೆಂಟ್ ಮಾಡಿದ ಟಿವಿ ಚಾನಲ್ ವೊಂದರ ಸಂಪಾದಕರ ಬಗ್ಗೆ ಕಿಡಿಕಾರಿರುವ ಮಲ್ಯ "ಈ ಮನುಷ್ಯ ಜೈಲು ಯುನಿಫಾರ್ಮ್ ಹಾಕ್ಕೊಳ್ತಾನೆ ಮತ್ತು ಜೈಲು ಊಟ ಮಾಡೋದು ಗ್ಯಾರಂಟಿ" ಎಂದು ಚಾಟಿ ಬೀಸಿದರು.

17 ಬ್ಯಾಂಕ್ ಗಳಲ್ಲಿ ಮಲ್ಯ 9500 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿದ್ದಾರೆ. ಅದರಲ್ಲಿ 4 ಸಾವಿರ ಕೋಟಿ ಅಂದರೆ ಶೇ. 40 ನ್ನು ಸೆಪ್ಟೆಂಬರ್ ಒಳಗೆ ತುಂಬಿಕೊಡುತ್ತೇನೆ ಎಂದು ಮಲ್ಯ ಹೇಳಿದ್ದಾರೆ.

ಮಾರ್ಚ್ 11ರಂದು ಮಲ್ಯ ಮಾಡಿದ್ದ ಟ್ವೀಟ್

English summary
Former chairman of the UB group Vijay Mallya today offered to pay Rs 4,000 crore to the banks which have moved the Supreme Court to recover their dues. Mallya made the offer to pay the Rs 4,000 crore via video conferencing. Mally's advocate making the submissions before the Bench today said that his client would oay Rs 4,000 crore by September 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X