ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹ್ಮದ್ ಸಾವು ಪ್ರಕಟಣೆ ತಡವಾಗಿದ್ದು ಅಮಾನವೀಯ : ಖರ್ಗೆ

ಇ ಅಹ್ಮದ್ ಅವರು ಹೃದಯಾಘಾತದಿಂದ ಅಗಲಿದ್ದಾರೆ ಎಂದು ಕೇಂದ್ರ ಸರಕಾರಕ್ಕೆ ಮೊದಲೇ ಗೊತ್ತಿತ್ತು. ಆದರೆ, ಇದನ್ನು ಪ್ರಕಟಿಸುವುದನ್ನು ಮುಂದೂಡಿದ್ದಾರೆ. ಇದು ಅಮಾನವೀಯ ಎಂದು ಖರ್ಗೆ ಅವರು ಆರೋಪಿಸಿದರು.

By Prasad
|
Google Oneindia Kannada News

ನವದೆಹಲಿ, ಫೆಬ್ರವರಿ 01 : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಘಟನೆಯ ನಾಯಕ ಇ ಅಹ್ಮದ್ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಇಂದು ಮಂಡಿಸಲಾಗುತ್ತಿರುವ ಬಜೆಟ್ಟನ್ನು ಮುಂದೂಡಬೇಕೆಂದು ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಇದನ್ನು ನಾವು ಮಾತ್ರ ಆಗ್ರಹಿಸುತ್ತಿಲ್ಲ, ಜೆಡಿಯು ನಾಯಕರು, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಕೂಡ ಆಗ್ರಹಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ನುಡಿದರು. [ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

Mallikarjun Kharge urges NDA govt to postpone budget

ಇ ಅಹ್ಮದ್ ಅವರು ಹೃದಯಾಘಾತದಿಂದ ಅಗಲಿದ್ದಾರೆ ಎಂದು ಕೇಂದ್ರ ಸರಕಾರಕ್ಕೆ ಮೊದಲೇ ಗೊತ್ತಿತ್ತು. ಆದರೆ, ಇದನ್ನು ಪ್ರಕಟಿಸುವುದನ್ನು ಮುಂದೂಡಿದ್ದಾರೆ. ಇದು ಅಮಾನವೀಯ ಎಂದು ಖರ್ಗೆ ಅವರು ಆರೋಪಿಸಿದರು.

ಇಂದೇನು ಮಾರ್ಚ್ 31 ಅಲ್ಲ. ಬಜೆಟ್ ಮಂಡನೆಗೆ ಇನ್ನೂ ಸಾಕಷ್ಟು ಸಮಯವಿದೆ. ಆದ್ದರಿಂದ ಬಜೆಟ್ ಮಂಡನೆ ಮುಂದೂಡುವುದೇ ಹಿತಕರ ಎಂದು ಖರ್ಗೆ ಆಗ್ರಹಿಸಿದರು. [ಜೇಟ್ಲಿ ಬಜೆಟ್ 2017 : ತೆರಿಗೆದಾರರ 10 ನಿರೀಕ್ಷೆಗಳು]

ಈಕೂಡಲೆ ನಾನು ಕೇರಳಕ್ಕೆ ಹೋಗುತ್ತಿದ್ದು, ಅಲ್ಲಿನ ಸಂಸದರನ್ನು ಭೇಟಿಯಾಗುವುದಾಗಿ ಅವರು ನುಡಿದರು. ಆದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಘಟನೆ, ದೇಶಕ್ಕೆ ಪಕ್ಷ ಮುಖ್ಯವೇನಲ್ಲ, ಆದ್ದರಿಂದ ಬಜೆಟ್ ಮುಂದೂಡುವುದು ಬೇಡ ಎಂದು ಹೇಳಿದೆ.

ಬಜೆಟ್ ಕಾಪಿಗಳು ಈಗಾಗಲೆ ಸಂಸತ್ತಿಗೆ ಬಂದಿರುವುದರಿಂದ ಬಜೆಟ್ ಮಂಡನೆ ಮುಂದೂಡುವುದು ಸರಿಯಲ್ಲ, ಮಾಡಲೂಬಾರದು ಎಂದು ಸಂಸದೀಯ ತಜ್ಞ ಸುಭಾಶ್ ಕಶ್ಯಪ್ ಅವರು ಅಭಿಪ್ರಾಯಪಟ್ಟಿದ್ದಾರೆ.

English summary
In our opinion,including JDU leaders and former PM Deve Gowda, the budget should be postponed: Mallikarjun Khadge, Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X