ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲ್ ಇಂಡಿಯಾ ಬೋಕ್ಚೋದ್ ವಿರುದ್ಧ 'ಮೋದಿ ಜೆರಾಕ್ಸ್' ಗುಡುಗು!

ತಮ್ಮ ಚಿತ್ರ ಉಪಯೋಗಿಸಿ ಪ್ರಧಾನಿ ಮೋದಿ ಲೇವಡಿ ಮಾಡಿದ್ದ ಎಐಬಿ ಗ್ರೂಪ್ ಗೆ ಕೇರಳದ ಮೋದಿ ತದ್ರೂಪಿ ಕಿಡಿ. ಕೇರದಲ್ಲಿರುವ ರಾಮಚಂದ್ರನ್, ಮೋದಿ ತದ್ರೂಪಿಯಂತಿದ್ದು ಎಲ್ಲರ ಗಮನ ಸೆಳೆದಿದ್ದಾರೆ.

|
Google Oneindia Kannada News

ಮುಂಬೈ, ಜುಲೈ 19: ಪ್ರಧಾನಿ ನರೇಂದ್ರ ಮೋದಿಯವರ ವಿಚಾರದಲ್ಲಿ ಹುಡುಗಾಟಿಕೆ ಮಾಡಿಕೊಂಡು ಹಣ ಮಾಡುವುದು ಸರಿಯಲ್ಲವೆಂದು ಕೇರಳದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ತದ್ರೂಪಿ ವ್ಯಕ್ತಿ ಎಂ.ಪಿ. ರಾಮಚಂದ್ರನ್ ಅವರು ಗುಡುಗಿದ್ದಾರೆ.

ಮೋದಿ ವಿರುದ್ಧದ ಅಣಕು ಚಿತ್ರ ಹಾಕಿದ್ದಕ್ಕೆ ಎಫ್ಐಆರ್ಮೋದಿ ವಿರುದ್ಧದ ಅಣಕು ಚಿತ್ರ ಹಾಕಿದ್ದಕ್ಕೆ ಎಫ್ಐಆರ್

ಅವರು ಹಾಗೆ ಗುಡುಗಿರುವುದು ಟ್ವಿಟರ್ ನಲ್ಲಿ ತಮಾಷೆಯ ತುಣುಕುಗಳು, ಜೋಕ್ಸ್, ಕಾಮಿಡಿ ಮಾದರಿಯ ವಿಚಾರಗಳನ್ನು ಹಂಚಿಕೊಳ್ಳುವ ಆಲ್ ಇಂಡಿಯಾ ಬಾಕ್ಚೋದ್ (ಎಐಬಿ) ಸಂಸ್ಥೆಯ ವಿರುದ್ಧ.

Making money off shaming PM wrong: Modi's lookalike on AIB meme

ಇದರ ಹಿಂದೆ ಪುಟ್ಟದೊಂದು ಕತೆಯಿದೆ. ಈ ರಾಮಚಂದ್ರನ್, ಪ್ರಧಾನಿ ಮೋದಿಯವರ ಪಡಿಯಚ್ಚಿನಂತಿದ್ದಾರೆ. ಹಾಗಾಗಿ, ಅವರನ್ನು ಕಂಡಾಗ ಬಹುತೇಕ ಮಂದಿ ಗೊಂದಲ ಮಾಡಿಕೊಳ್ಳೋದು ಸಹಜ. ಹಲವಾರು ಮಂದಿ ಅವರ ಬಳಿ ಸೆಲ್ಫಿ ತೆಗೆದುಕೊಂಡು ಹೋಗುವುದನ್ನು ಮಾಡುತ್ತಾರೆ. ರಾಮಚಂದ್ರನ್ ಅವರಿಗೂ ಇದು ಒಗ್ಗಿಹೋಗಿದೆ.

ಆದರೆ, ವಿಚಾರ ಅದಲ್ಲ. ಇತ್ತೀಚೆಗೆ, ಇವರ ಭಾವಚಿತ್ರವೊಂದನ್ನು ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದ ಎಐಬಿ, ಅದಕ್ಕೆ ನಾಯಿಯ ಕಿವಿ, ಮೂಗು ಹಾಕಿ ತಮಾಷೆಯ ವಸ್ತುವನ್ನಾಗಿಸಿ (ಮೆಮೆ) ಅಂತರ್ಜಾಲದಲ್ಲಿ ಹರಿಯಬಿಟ್ಟಿತ್ತು.

ಇದರ ವಿರುದ್ಧ ಸಿಡಿದೆದ್ದಿರುವ ರಾಮಚಂದ್ರನ್, ''ನೀವು (ಎಐಬಿ) ತಮಾಷೆ ಮಾಡುತ್ತಿರುವ ವ್ಯಕ್ತಿಯು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಹೊಂದಿದ್ದು, ನನಗೂ ಅವರು ರೋಲ್ ಮಾಡೆಲ್ ಆಗಿದ್ದಾರೆ. ಹೀಗಾಗಿ, ಅಂಥವರ ಬಗ್ಗೆ ಹೀಗೆ ಕೇವಲವಾಗಿ ತಮಾಷೆ ಮಾಡಿ ದುಡ್ಡು ಮಾಡುವುದು ಸರಿಯಲ್ಲ'' ಎಂದು ಟೀಕಿಸಿದ್ದಾರೆ.

English summary
People might not know who MP Ramachandran is, but they know how he looks, thanks to his uncanny resemblance to Prime Minister Narendra Modi. The 64-yr-old from Kannur who has shot to the limelight after AIB’s controversial tweet, broke his silence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X