ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಯ ಭಾರೀ ಕಾರ್ಯಾಚರಣೆ: 44 ಶಂಕಿತ ಲಷ್ಕರ್ ಉಗ್ರರ ಬಂಧನ

By Balaraj
|
Google Oneindia Kannada News

ಶ್ರೀನಗರ, ಅ 19: ಉತ್ತರ ಕಾಶ್ಮೀರದ ಹಳೆಯ ನಗರ ಬಾರಾಮುಲ್ಲಾದಲ್ಲಿ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 44 ಉಗ್ರ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ.

ಸುಮಾರು ಏಳು ನೂರಕ್ಕೂ ಹೆಚ್ಚು ಮನೆಯನ್ನು ಜಾಲಾಡಿಸಿದ ಸೇನೆ, ಪೆಟ್ರೋಲ್ ಬಾಂಬ್, ಪಾಕಿಸ್ತಾನ ಮತ್ತು ಚೀನಾದ ಧ್ವಜ, ಲಷ್ಕರ್ ಮತ್ತು ಜೈಶ್ ಉಗ್ರ ಸಂಘಟನೆಯ ಲೆಟರ್ ಹೆಡ್ ಗಳನ್ನು ವಶಪಡಿಸಿಕೊಂಡಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಮನೀಶ್ ಕುಮಾರ್ ಹೇಳಿದ್ದಾರೆ. (ಗಡಿಯಲ್ಲಿ ಹೈಅಲರ್ಟ್, ಸನ್ನದ್ಧವಾಗಿದೆ ಸೇನೆ)

44 ಜನರನ್ನು ಸೇನೆ ಬಂಧಿಸಿದ ಬೆನ್ನಲ್ಲೇ ಬಾರಾಮುಲ್ಲಾದ ಸ್ಟೇಷನ್ ಹೌಸ್ ಆಫೀಸರಿಗೆ ಲಷ್ಕರ್ ಸಂಘಟನೆ ಎಚ್ಚರಿಕೆ ನೀಡಿದೆ. ಸೇನೆ, ಸಿಆರ್ಪಿಎಫ್ ಮತ್ತು ಬಿಎಸ್ಎಫ್ ಜಂಟಿಯಾಗಿ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ.

In a major joint operation by Indian Army 44 terror related activist held

ಬಾರಾಮುಲ್ಲಾದಲ್ಲಿ ಉಗ್ರರಿಗೆ ಸುರಕ್ಷಿತ ಪ್ರದೇಶವಾಗಿರುವ ಕ್ವಾಜೀ ಹಮಾಮ್, ಗನಾಯಿ ಹಮಾಮ, ತಾವಿದ್ ಗುಂಜ್ ಮತ್ತು ಜಾಮಿಯಾ ಪ್ರದೇಶಗಳಲ್ಲಿ ಸೇನೆ ಶಿಸ್ತುಬದ್ದ ದಾಳಿ ನಡೆಸಿ 44 ಜನರನ್ನು ಬಂಧಿಸಿದೆ.

ಇದರ ಜೊತೆಗೆ ಶಂಕಿತ ಉಗ್ರರ ತಂಗುದಾಣವನ್ನು ಸೇನೆ ಸಂಪೂರ್ಣ ಧ್ವಂಸ ಮಾಡಿದೆ. ಸ್ಥಳೀಯರ ಪ್ರಕಾರ ಸೋಮವಾರ (ಅ 17) ತಡರಾತ್ರಿ ಸೇನೆ ಈ ಕಾರ್ಯಾಚರಣೆ ನಡೆಸಿದೆ.

ದಾಳಿ ನಡೆಸುವ ಮುನ್ನ ಮನೆಬಿಟ್ಟು ಹೊರಹೋಗದಂತೆ ಸೇನೆ ಸ್ಥಳೀಯರಿಗೆ ಸೂಚಿಸಿತ್ತು. ಉಗ್ರರನ್ನು ಪತ್ತೆಹಚ್ಚುವ ಸಲುವಾಗಿ ಪ್ರತೀ ಮನೆಮನೆಗೂ ತೆರಳಿ, ಸೇನೆ ಶೋಧನೆ ನಡೆಸಿತ್ತು.

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆಯ ನಂತರ, ಕಾಶ್ಮೀರ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗುತ್ತಿದ್ದು ಸೇನೆ ಮತ್ತು ಉಗ್ರರನ್ನು ಬೆಂಬಲಿಸುವ ಸ್ಥಳೀಯರ ನಡುವೆ ಸಂಘರ್ಷ ಉಂಟಾಗುತ್ತಿದೆ.

English summary
In a major joint operation by Indian Army, 44 held in Baramulla in J&K state for terror-related activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X