ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015ರಲ್ಲಿ ಭಾರೀ ಸದ್ದು ಮಾಡಿದ ಪ್ರಮುಖ ಸುದ್ದಿಗಳು

|
Google Oneindia Kannada News

ಸೂರ್ಯ ದಿನಾಲು ಮೂಡಣ ದಿಕ್ಕಿನಲ್ಲಿ ಹುಟ್ಟಿ ಪಡುವಣ ದಿಕ್ಕಿನಲ್ಲಿ ಮುಳುಗಿ ಎಲ್ಲರ ಕಣ್ ಆರಳಿಸಿ ನೋಡ ನೋಡುತ್ತಿದ್ದಂತೆಯೇ ಮತ್ತೊಂದು ವರ್ಷ ಕಳೆದು ಹೋಯಿತು.

2015ಕ್ಕೆ ವಿದಾಯ ಹೇಳಿ, 2016ಕ್ಕೆ ಸ್ವಾಗತ ಕೋರಿಯಾಗಿದೆ. ಹಲವು ಕಹಿ ಮತ್ತು ಸಿಹಿ ಘಟನೆಗಳಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ.

ಪ್ರಧಾನಿ ಮೋದಿಯವರ ನಿರಂತರ ವಿದೇಶ ಪ್ರವಾಸ, ತಮಿಳುನಾಡಿನಲ್ಲಿ ನಾಗರೀಕರಿಗೆ ನರಕಸದೃಶವಾದ ಅತಿವೃಷ್ಟಿ, ಬಿಹಾರದ ಚುನಾವಣೆ.. ಹೀಗೆ ಹಲವಾರು ವಿದ್ಯಮಾನ/ಘಟನೆಗಳು ಕಳೆದ ವರ್ಷ ನಡೆದು ಹೋಗಿದೆ. 2015ರಲ್ಲಿ ಭಾರೀ ಸುದ್ದಿ ಮಾಡಿದ ಪ್ರಮುಖ ಸುದ್ದಿಗಳು.

ಕಬ್ಬನ್ ಪಾರ್ಕ್ ಗ್ಯಾಂಗ್ ರೇಪ್ ಪ್ರಕರಣ
ನವೆಂಬರ್ 11 ಬುಧವಾರ ರಾತ್ರಿ ತುಮಕೂರಿನ ಮಹಿಳೆ (30) ಬೆಂಗಳೂರಿನ ಟೆನ್ನಿಸ್ ಕ್ಲಬ್ಬಿನ ಸದಸ್ಯತ್ವ ಸ್ಥಾನ ಪಡೆಯಲು ಆಗಮಿಸಿದ್ದರು. ಕಬ್ಬನ್ ಪಾರ್ಕಿನ ಇಬ್ಬರು ಭದ್ರತಾ ಸಿಬ್ಬಂದಿಗಳೇ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಾಯಿತು.

ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಗಳನ್ನು 376ರ ಪೋಕ್ಸೋ ಕಾಯ್ದೆ ಅಡಿ ಬಂಧಿಸಿದರು.

ಇತರ ಪ್ರಮುಖ ಸುದ್ದಿಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಪ್ರಾಮಾಣಿಕ ದಕ್ಷ ಅಧಿಕಾರಿ ಎಸ್ ಐ ಜಗದೀಶ್ ಹತ್ಯೆ

ಪ್ರಾಮಾಣಿಕ ದಕ್ಷ ಅಧಿಕಾರಿ ಎಸ್ ಐ ಜಗದೀಶ್ ಹತ್ಯೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್ಐ ಜಗದೀಶ್, ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಕಳ್ಳರಿಬ್ಬರನ್ನು ಸೆರೆಹಿಡಿಯಲು ತಮ್ಮ ನಾಲ್ವರು ಸಿಬ್ಬಂದಿಗಳ ಜೊತೆ ಡ್ಯೂಟಿಯಲ್ಲಿದ್ದಾಗಲೇ ಆರೋಪಿಗಳು ಪೊಲೀಸ್ ಸಬ್ ಇನ್ಸ್ ಪಕ್ಟರ್ ಜಗದೀಶ್ (38) ಅವರನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ನೆಲಮಂಗಲದಲ್ಲಿ ನಡೆದಿತ್ತು. ಈ ಬೀಭತ್ಸ ಕೃತ್ಯದ ಘಟನೆಯ ವಿಚಾರಣೆ ನ್ಯಾಯಾಲಯದಲ್ಲಿದೆ.

ನರೇಂದ್ರ ಮೋದಿ ಅಚ್ಚರಿಯ ಲಾಹೋರ್ ಭೇಟಿ

ನರೇಂದ್ರ ಮೋದಿ ಅಚ್ಚರಿಯ ಲಾಹೋರ್ ಭೇಟಿ

ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ್ದು, ರಾಜತಾಂತ್ರಿಕ ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ಮೋದಿಯವರ ಪಾಕಿಸ್ತಾನ ಭೇಟಿ. ವಾಜಪೇಯಿ ನಂತರ ಭಾರತದ ಪ್ರಧಾನಿಯೊಬ್ಬರು ಪಾಕಿಸ್ತಾನಕ್ಕೆ ಹೋಗಿದ್ದು ಇದೇ ಮೊದಲು.

ಶೀನಾ ಬೋರಾ ಹತ್ಯಾ ಪ್ರಕರಣ

ಶೀನಾ ಬೋರಾ ಹತ್ಯಾ ಪ್ರಕರಣ

ತನ್ನ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕನೊಂದಿಗೆ ಸೇರಿ ಇಂದ್ರಾಣಿ ಮುಖರ್ಜಿ, ತನ್ನ ಸ್ವಂತ ಮಗಳಾದ ಶೀನಾ ಬೋರಾಳನ್ನು ಹತ್ಯೆಗೈದಿದ್ದಳು. ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯಾಧಾರ ನಾಶ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಯಾಕೂಬ್ ಮೆಮನ್ ಗೆ ಗಲ್ಲು

ಯಾಕೂಬ್ ಮೆಮನ್ ಗೆ ಗಲ್ಲು

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್ 1994ರಲ್ಲಿ ಕಾಠ್ಮಂಡುವಿನಲ್ಲಿ ಸೆರೆಯೊಗಿದ್ದ. ಪ್ರಕರಣ ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ವಿಚಾರಣೆ ನಡೆಯಿತಾದರೂ ಅಂತಿಮವಾಗಿ ರಾಷ್ಟ್ರಪತಿಯವರು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಆತನಿಗೆ ಗಲ್ಲು ಶಿಕ್ಷೆ ಖಾಯಂ ಆಯಿತು. 2015ರ ಜುಲೈ 31 ರಂದು ಯಾಕೂಬ್ ನನ್ನು ಗಲ್ಲಿಗೇರಿಸಲಾಗಿತ್ತು.

ಭೂಗತ ಪಾತಕಿ ಚೋಟಾ ರಾಜನ್ ಬಂಧನ

ಭೂಗತ ಪಾತಕಿ ಚೋಟಾ ರಾಜನ್ ಬಂಧನ

55 ವರ್ಷದ ಭೂಗತ ಪಾತಕಿ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ, ನೂರಾರು ಹತ್ಯಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದ, ಭಾರತೀಯ ಪೊಲೀಸರಿಂದ ರೆಡ್ ಕಾರ್ನರ್ ನೋಟಿಸ್ ಪಡೆದಿದ್ದ, ವಿವಿಧ ವೇಷ ಧರಿಸಿ ತಲೆಮರೆಸಿಕೊಂಡಿದ್ದ ರಾಜನ್ ನಾನಾ ದೇಶಗಳಿಗೆ ಪರಾರಿಯಾಗಿ ಪೊಲೀಸರಿಗೆ ತಲೆನೋವಾಗಿದ್ದ. ಕೊನೆಗೆ ಸಿಡ್ನಿಯಿಂದ ಬಾಲಿ ಬೀಚ್ ರೆಸಾರ್ಟ್ ಗೆ ರಾಜನ್ ಆಗಮಿಸಿರುವ ಕುರಿತು ಮಾಹಿತಿ ಪಡೆದ ಇಂಡೋನೇಷ್ಯಾ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ನಂತರ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು.

ನಟ ಸಲ್ಮಾನ್ ಖಾನ್ ಖುಲಾಸೆ

ನಟ ಸಲ್ಮಾನ್ ಖಾನ್ ಖುಲಾಸೆ

ಬಾಲಿವುಡ್ ನಟ ಸಲ್ಮಾನ್ ಖಾನ್ ರ ಬೆನ್ನು ಬಿಡದೇ ಅಂಟಿಕೊಂಡಿದ್ದ ಗುದ್ದೋಡು ಹಿಟ್ ಅಂಡ್ ರನ್ ಪ್ರಕರಣಕ್ಕೆ ಮುಂಬೈ ಹೈಕೋರ್ಟ್ 2015ರಲ್ಲಿ ಅಂತ್ಯವಾಡಿತ್ತು. ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಅಪರಾಧಿ ಎಂದು ಸಾಬೀತು ಪಡಿಸುವ ಭಲವಾದ ಸಾಕ್ಶ್ಯಿಗಳಿಲ್ಲ ಎಂದು ಹೈಕೋರ್ಟ್ ಸಲ್ಮಾನ್ ನನ್ನು ನಿರಪರಾಧಿ ಎಂದು ಘೋಷಣೆ ಮಾಡಿತ್ತು.

ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿ

ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿ

ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು ಐಎಎಸ್ ಅಧಿಕಾರಿ ಡಿ ಕೆ ರವಿ ಸಂಶಯಾಸ್ಪದ ಸಾವು. ಮರಳು ಮಾಫಿಯಾವನ್ನು ದಕ್ಷತೆ ಮತ್ತು ಪ್ರಾಮಾಣಿಕವಾಗಿ ಎದುರಿಸಿದ್ದ ಡಿ ಕೆ ರವಿ ಬೆಂಗಳೂರಿನ ತಮ್ಮ ಫ್ಲಾಟ್ ನಲ್ಲಿ ಮಾರ್ಚ್ 2015ರಲ್ಲಿ ಸಾವನ್ನಪ್ಪಿದ್ದರು.

ಮಲ್ಲಿಕಾರ್ಜುನ ಬಂಡೆ

ಮಲ್ಲಿಕಾರ್ಜುನ ಬಂಡೆ

ಕಲಬುರಗಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಹತ್ಯೆಯಾಗಿತ್ತು. ಭೂಗತ ಪಾತಕಿ ಮುನ್ನಾ ಬಂಡೆಯನ್ನು ಕೊಂದಿದ್ದು ಎಂದು ಸಿಐಡಿ ವರದಿಯಿಂದ ದೃಢಪಟ್ಟಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ತನಿಖೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಗೃಹ ಸಚಿವರಾಗಿದ್ದ ಜಾರ್ಜ್ ಹೇಳಿಕೆ ನೀಡಿದ್ದರು.

English summary
Major incident occurred during the year 2015. Country has witnessed several Political, Natural calamity, Law and order issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X