ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚತುಷ್ಕೋನ ಸ್ಪರ್ಧೆಗೆ ಸಜ್ಜಾದ ಮಹಾರಾಷ್ಟ್ರ

By Mahesh
|
Google Oneindia Kannada News

ಮಹಾರಾಷ್ಟ್ರದಲ್ಲಿ ಅ.15 ರಂದು ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್ ಸಿಪಿ, ಎಂಎನ್‍ಎಸ್, ಐಎನ್‍ಎಲ್ ಡಿ ಸೇರಿದಂತೆ ಘಟಾನುಘಟಿ ನಾಯಕರ ಹಣೆಬರಹಗಳು ಮತಪೆಟ್ಟಿಗೆಯಲ್ಲಿ ಭದ್ರವಾಗಲಿವೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಚುನಾವಣೆ ಸತ್ವ ಪರೀಕ್ಷೆ ಎನಿಸಿದೆ.

ರೈತರಿಗೆ 8,000 ಕೋ.ರೂ. ವಿದ್ಯುತ್‌ ಸಬ್ಸಿಡಿ, ಮುಂಬಯಿ ಮೆಟ್ರೋ ಮತ್ತು ಈಸ್ಟರ್ನ್ ಫ್ರೀವೇ ಮತ್ತು ಇತರ ಮೂಲಭೂತ ಸೌಕರ್ಯಗಳು ವಿಷಯಗಳನ್ನು ಕಾಂಗ್ರೆಸ್‌ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡಿದೆ. ಕಾಂಗ್ರೆಸ್‌-ಎನ್‌ಸಿಪಿ ಸರಕಾರ ನೀರಾವರಿ ಹಗರಣ, ಆದರ್ಶ್‌ ಹಗರಣ, ಮಧ್ಯಾಹ್ನದ ಊಟದ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆಸಿದೆ ಎಂದು ಮೋದಿ ಆರೋಪಿಸುವ ಮೂಲಕ ಜನರ ಗಮನ ಇನ್ನೊಂದೆಡೆ ಹರಿಸಿದ್ದಾರೆ. [ಮಹಾರಾಷ್ಟ್ರ, ಹರಿಯಾಣ ಮತದಾನ LIVE]

ಸುಮಾರು ಎರಡೂವರೆ ದಶಕದ ನಂತರ ಪ್ರಮುಖ ನಾಲ್ಕು ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಿದ್ದು, ಅದೃಷ್ಟ ಯಾರಿಗೆ ಕಾದಿದೆ, ಯಾರು ಜಯಭೇರಿ ಬಾರಿಸಲಿದ್ದಾರೆ ಎಂಬುದು ಭಾರಿ ಕುತೂಹಲಕಾರಿಯಾಗಿದೆ. ಮಹಾರಾಷ್ಟ್ರ ಚುನಾವಣೆಯ ಮುನ್ನೋಟ ಇಲ್ಲಿದೆ

Mahrashtra Assembly polls: All you need to know
ಮುಖ್ಯ ದಿನಾಂಕಗಳು:
* ಅಕ್ಟೋಬರ್ 13 : ಚುನಾವಣಾ ಪ್ರಚಾರ ಅಂತ್ಯ.
* ಅಕ್ಟೋಬರ್ 15 : ಮತದಾನ
* ಅಕ್ಟೋಬರ್ 19 : ಫಲಿತಾಂಶ

ಒಟ್ಟು ಅರ್ಭ್ಯರ್ಥಿಗಳು: 4,119
ಒಟ್ಟಾರೆ ಅಸೆಂಬ್ಲಿ ಕ್ಷೇತ್ರಗಳು: 288

ಪ್ರಮುಖ ಮುಖಂಡರು:
* ಎನ್ ಸಿಪಿ: ಅಜಿತ್ ಪವಾರ್ (ಬರಾಮತಿ ಕ್ಷೇತ್ರ)
* ಕಾಂಗ್ರೆಸ್ : ಪೃಥ್ವಿರಾಜ್ ಚವಾಣ್ (ದಕ್ಷಿಣ ಕರಾಡ್)
* ಬಿಜೆಪಿ : ದೇವೇಂದ್ರ ಫಡ್ನಾವೀಸ್ ನಾಗಪುರ (ನೈಋತ್ಯ)

* ಶಿವಸೇನಾ: ಉದ್ಧವ್ ಠಾಕ್ರೆ (ಸ್ಪರ್ಧಿಸುತ್ತಿಲ್ಲ)
* ಎಂಎನ್ ಎಸ್: ರಾಜ್ ಠಾಕ್ರೆ (ಸ್ಪರ್ಧಿಸುತ್ತಿಲ್ಲ)

[ಚುನಾವಣೆ ಪೂರ್ವ ಸಮೀಕ್ಷೆ ಫಲಿತಾಂಶ!]

ಕಳೆದ ಚುನಾವಣೆ(2009)
* ಮತದಾನ : 60%
* ಅಭ್ಯರ್ಥಿಗಳು : 3,559 ಅಭ್ಯರ್ಥಿಗಳು 211 ಮಹಿಳಾ ಅಭ್ಯರ್ಥಿಗಳು
* ಮತದಾನ ಕೇಂದ್ರ: 84,136.

2009ರ ಫಲಿತಾಂಶ:

* ಕಾಂಗ್ರೆಸ್ 169ರಲ್ಲಿ 82 ಸ್ಥಾನಗಳಿಸಿತು.
* ಎನ್ ಸಿಪಿ 114ರಲ್ಲಿ 62 ಸ್ಥಾನಗಳಿಸಿತು.
* ಬಿಜೆಪಿ : 119ರಲ್ಲಿ 46 ಸೀಟು ಪಡೆಯಿತು.
* ಶಿವಸೇನಾ 160 ಕ್ಷೇತ್ರಗಳಲ್ಲಿ 45 ಗೆಲುವು
* ಎಂಎನ್ಎಸ್: 145ರಲ್ಲಿ 13 ಸ್ಥಾನದಲ್ಲಿ ಜಯ.
* ಉಳಿದವರು 24 ಸ್ಥಾನಗಳು

ಲೋಕಸಭೆ ಚುನಾವಣೆ 2014 ಫಲಿತಾಂಶ:
ಬಿಜೆಪಿ : 23
ಕಾಂಗ್ರೆಸ್ : 2
ಎನ್ ಸಿಪಿ: 4
ಶಿವಸೇನಾ: 18

ಕಣದಲ್ಲಿರುವ ಕನ್ನಡಿಗರು: ಸಂತೋಷ್ ಶೆಟ್ಟಿ, ಜಗನ್ನಾಥ್, ಕೃಷ್ಣ ಹೆಗ್ಡೆ, ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ

English summary
With the campaigning for the Maharashtra Assembly polls comes to an end on October 13, the star campaigner and senior leaders of all the political parties are making their last ditch efforts to woo voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X