ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನೈಶ್ವರನಿಗೆ ಮಹಿಳೆಯಿಂದ ಪೂಜೆ: ಪರ-ವಿರೋಧ ಚರ್ಚೆ ಆರಂಭ

|
Google Oneindia Kannada News

ಮುಂಬೈ, ನವೆಂಬರ್, 29: ಮಹಾರಾಷ್ಟ್ರದ ಪ್ರಸಿದ್ಧ ಶನಿ ಸಿಂಗಣಾಪುರ ದೇಗುಲದಲ್ಲಿ ದೇವರ ಮೂರ್ತಿಗೆ ಮಹಿಳೆಯೊಬ್ಬರು ಪೂಜೆ ಸಲ್ಲಿಡಸಿ ತೈಲಾಭಿಷೇಕ ಮಾಡಿರುವ ವಿಚಾರ ಭಕ್ತರಲ್ಲಿ ಗೊಂದಲ ಸೃಷ್ಟಿಸಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ವೀಕ್ಷಣೆ ಮಾಡಿದ ನಂತರ ದೇವಾಲಯದಲ್ಲಿ ಶುದ್ಧೀಕರಣ ಕುರಿತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತಾಗಿ ಪರ-ವಿರೋಧದ ಚರ್ಚೆ ಸಹ ಆರಂಭವಾಗಿದೆ. ಘಟನೆಗೆ ಸಂಬಂಧಿಸಿ ದೇವಾಲಯದ ಆರು ಜನ ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.[ಶನೈಶ್ಚರ ಜಯಂತಿ ವಿಶೇಷ ತಿಳಿದುಕೊಳ್ಳಿ]

temple

ಮಹಿಳೆ ತೈಲಾಭಿಷೇಕ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಕೆಲವರು ಮಹಿಳೆಗೆ ಶಭಾಷ್ ಎಂದಿದ್ದರೆ, ಸಂಪ್ರದಾಯವಾದಿಗಳು ಇದನ್ನು ವಿರೋಧ ಮಾಡಿದ್ದಾರೆ.[ಋತುಚಕ್ರ ಪತ್ತೆಹಚ್ಚಿ ಅಂದವನ ವಿರುದ್ಧ ಮಹಿಳೆಯರ ಸಮರ]

ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶ ಸಂಬಂಧ ಎದ್ದಿದ್ದ ವಿವಾದ ಇನ್ನು ಬಗೆಹರಿದಿಲ್ಲ. ಈ ನಡುವೆಯೇ ಮಹಿಳಾಪರ ಹೋರಾಟಗಾರರಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದ್ದು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಶನಿ ಸಿಂಗಣಾಪುರದ ವಿಶೇಷವೇನು?
ಇಲ್ಲಿಯ ಶನೈಶ್ವರ ದೇವರಿ ದೇಶದಲ್ಲೇ ಪ್ರಸಿದ್ಧಿ. ಇಲ್ಲಿನ ಯಾವ ಮನೆಗಳಿಗೂ ಬಾಗಿಲುಗಳಿಲ್ಲ. ಕಳ್ಳತನ ನಡೆದ ಉದಾಹರಣೆಗಳು ಇಲ್ಲ. ಪ್ರತಿ ಶನಿವಾರ ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡೇ ಇಲ್ಲಿಗೆ ಪೂಜೆ ಸಲ್ಲಿಸಲು ಆಗಮಿಸುತ್ತದೆ.

English summary
A woman to enter and offer prayers at a famous Shani shrine at a village in Ahmednagar district in ‘breach' of the age-old practice of prohibiting entry of women has prompted the temple committee to suspend six security men and the villagers to form purification rituals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X