ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ

|
Google Oneindia Kannada News

ಬೆಂಗಳೂರು, ಅ.18 : ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಲಿದ್ದು, ಫಲಿತಾಂಶ ಕುತೂಹಲ ಕೆರಳಿಸಿದೆ. ಚುನಾವಣೋತ್ತರ ಸಮೀಕ್ಷೆಗಳು ಉಭಯ ರಾಜ್ಯಗಳಲ್ಲೂ ಕೇಸರಿ ರಂಗು ಚೆಲ್ಲಲಿದೆ ಎಂದು ಹೇಳಿದ್ದು, ಜನರು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ.

[ಮಹಾರಾಷ್ಟ್ರ, ಹರಿಯಾಣ ಫಲಿತಾಂಶ ಅಪ್ದೇಟ್ಸ್]

288 ಕ್ಷೇತ್ರಗಳ ಮಹಾರಾಷ್ಟ್ರ ಮತ್ತು 90 ಕ್ಷೇತ್ರಗಳ ಹರ್ಯಾಣ ವಿಧಾನಸಭೆಗೆ ಅ.15ರಂದು ಚುನಾವಣೆ ನಡೆದಿತ್ತು. ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದ್ದು, 11 ಗಂಟೆಯ ವೇಳೆಗೆ ಫಲಿತಾಂಶ ಏನಾಗಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. [ಮತದಾನೋತ್ತರ ಸಮೀಕ್ಷೆ ವಿವರ ಇಲ್ಲಿದೆ]

Maharashtra, Haryana

ಅ.15ರಂದು ನಡೆದ ಚುನಾವಣೆಯಲ್ಲಿ ಹರ್ಯಾಣ ರಾಜ್ಯದಲ್ಲಿ ದಾಖಲೆಯ 76.54ರಷ್ಟು ಮತ್ತು ಮಹಾರಾಷ್ಟ್ರದಲ್ಲಿ 63.13ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಇದು ಮಹತ್ವದ ಚುನಾವಣೆಯಾಗಿದ್ದರೆ. ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ತಮ್ಮ ಶಕ್ತಿ ಏನೆಂದು ಚುನಾವಣೆ ಮೂಲಕ ತೋರಿಸಲಿವೆ.[ಮೈತ್ರಿಗೆ ಶಿವಸೇನಾ ಓಕೆ, ಬಿಜೆಪಿ ಕೇಳ್ತಿದೆ ಏಕೆ?]

ಉಭಯ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದ್ದರಿಂದ ಮರಳಿ ಅಧಿಕಾರದ ಗದ್ದುಗೆ ಏರುತ್ತೇವೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೂತನ ಅಧ್ಯಕ್ಷ ಅಮಿತ್ ಶಾ ಚಾಣಾಕ್ಯ ತಂತ್ರಗಾರಿಕೆ ಹೇಗೆ ಕೆಲಸ ಮಾಡಿದೆ? ಎಂದು ಭಾನುವಾರ ತಿಳಿಯಲಿದೆ.

ಚುನಾವಣೆಗೆ ಮುಂಚೆಯೇ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆಗೆ ಮೈತ್ರಿ ಕಡಿದುಕೊಂಡಿರುವ ಬಿಜೆಪಿಗೆ 150 ರಿಂದ 155 ಸ್ಥಾನಗಳು ಬರಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ ಹಾಗೂ ದೇವೇಂದ್ರ ಫಡ್ನವೀಸ್ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿ ಬರುತ್ತಿವೆ.

ಒನ್ ಇಂಡಿಯಾ ಕನ್ನಡ ಬೆಳಗ್ಗೆ 8 ಗಂಟೆಯಿಂದ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿಯನ್ನು ಓದುಗರಿಗೆ ನೀಡಲಿದೆ. ಚುನಾವಣೆ ಮಾಹಿತಿಯನ್ನು ಟ್ವೀಟರ್‌ನಲ್ಲಿಯೂ ಪಡೆಯಿರಿ.

English summary
Counting of votes for the Assembly elections in Maharashtra and Haryana will be held on Sunday October 19. The vote counting for the 288 member Maharashtra Assembly and 90 member Haryana Assembly will start at 8 a.m. in the two states which went to polls on October 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X