ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಮುಖ್ಯಮಂತ್ರಿಗಳ ಪಿಂಚಣಿ ಶೇ 600ರಷ್ಟು ಏರಿಕೆ!

By Mahesh
|
Google Oneindia Kannada News

ಭೋಪಾಲ್, ಏಪ್ರಿಲ್ 25: ಮಾಜಿ ಮುಖ್ಯಮಂತ್ರಿಗಳ ಪಿಂಚಣಿ ಮೊತ್ತ ಶೇ 600ರಷ್ಟು ಏರಿಕೆ!. ಯಾರಿಗುಂಟು ಯಾರಿಗಿಲ್ಲ. ಆದರೆ, ಇದೆಲ್ಲ ಮಧ್ಯಪ್ರದೇಶದಲ್ಲಿ ಮಾತ್ರ ಸಾಧ್ಯ. ಬಹುಶಃ ದೇಶದೆಲ್ಲೆಡೆ ಬರದ ಸಮಸ್ಯೆಯಿದ್ದರೂ ಮಧ್ಯಪ್ರದೇಶದಲ್ಲಿ ಒಂದು ಕಾಲದ ಜನಪ್ರತಿನಿಧಿಗಳಿಗೆ ಭರಪೂರ ಕೊಡುಗೆ ಸಿಗುತ್ತಿದೆ.

ಮಧ್ಯಪ್ರದೇಶ ಸರ್ಕಾರ ತನ್ನ ರಾಜ್ಯದಲ್ಲಿರುವ ಮಾಜಿ ಮುಖ್ಯಮಂತ್ರಿಗಳ ಪಿಂಚಣಿ ಮೊತ್ತವನ್ನು ದಿಢೀರ್ ಏರಿಕೆ ಮಾಡಿದೆ. ಜೀ ನ್ಯೂಸ್ ವರದಿಯಂತೆ 26,000 ರು ನಿಂದ 1.70 ಲಕ್ಷ ರು ತನಕ ತಿಂಗಳಿಗೆ ಪಿಂಚಣಿ ಸಿಗಲಿದೆ.

ಆದರೆ, ಮಾಜಿ ಮುಖ್ಯಮಂತ್ರಿಗಳು ಈಗ ಕೇಂದ್ರ ಹಾಗೂ ರಾಜ್ಯ ಕ್ಯಾಬಿನೆಟ್ ನಲ್ಲಿ ಸಕ್ರಿಯರಾಗಿದ್ದರೆ ಅವರಿಗೆ 1.7 ಲಕ್ಷ ರು ಮೌಲ್ಯದ ಪಿಂಚಣಿ ಸಿಗುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿದೆ.

OMG!600% hike? Good news for MP's ex-CMs; pension increased from Rs 26,000 to Rs 1.7 lakh

ಒಂದೆಡೆ ಬರದ ಪರಿಸ್ಥಿತಿ ಕಂಡು ಬಿಜೆಪಿ (ಕರ್ನಾಟಕ) ಪ್ರತಿನಿಧಿಗಳು ಸಂಸದರು, ಶಾಸಕರು ತಿಂಗಳ ಸಂಬಳವನ್ನು ದಾನ ಮಾಡುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಧಿಕಾರದಲ್ಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರ ಮಧ್ಯಪ್ರದೇಶ ಸರ್ಕಾರ ಸಂಬಳ, ಭತ್ಯೆ ಏರಿಕೆಯಲ್ಲಿ ತೊಡಗಿದೆ.

ಆದರೆ, ಈ ಸಂಬಳ, ಪಿಂಚಣಿ ಏರಿಕೆ ಕಳೆದ 6 ವರ್ಷಗಳಿಂದ ಆಗಿರಲಿಲ್ಲ. ಹಾಗಾಗಿ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಶಿವರಾಜ್ ಸಿಂಗ್ ಹೇಳಿದ್ದಾರೆ.

ಶಾಸಕರ ಸಂಬಳ ಹಾಗೂ ಭತ್ಯೆ 71,000 ರು ನಿಂದ 1.10 ಲಕ್ಷ ರುಗೇರಿದೆ. ಮುಖ್ಯಮಂತ್ರಿ ಹಾಗೂ ಸ್ಪೀಕರ್ ಗಳ ಸಂಬಳ ಕ್ರಮವಾಗಿ 1.43 ಲಕ್ಷ ರು ನಿಂದ 2 ಲಕ್ಷ ರು ಹಾಗೂ 1.20 ಲಕ್ಷ ರು ನಿಂದ 1.85 ಲಕ್ಷ ರು ಗೇರಿದೆ. ಸಚಿವರ ಸಂಬಳ ಕೂಡಾ 1.20 ಲಕ್ಷ ರು ನಿಂದ 1.70 ಲಕ್ಷ ರು ಆಗಿದೆ. ರಾಜ್ಯಸಚಿವ ಖಾತೆ ಹೊಂದಿರುವವರು 1.03 ಲಕ್ಷ ರು ಬದಲಿಗೆ 1.50 ಲಕ್ಷ ರು ಪಡೆಯಲಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
Can you imagine a 600% hike, and that too in pension? Surprisingly, the Madhya Pradesh government has increased ex-CMs' pension by over 600%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X