ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಖನೌನ ಕಟ್ಟಡದಲ್ಲಿ ಅಡಗಿದ್ದ ಶಂಕಿತ ಐಸಿಸ್ ಉಗ್ರನ ಹತ್ಯೆ

By ವಿಕಾಸ್ ನಂಜಪ್ಪ
|
Google Oneindia Kannada News

ಲಖನೌ, ಮಾರ್ಚ್ 08 : ಉತ್ತರಪ್ರದೇಶದ ಲಖನೌನ ಕಟ್ಟಡವೊಂದರಲ್ಲಿ ಅಡಗಿ ಕುಳಿತು, ಯದ್ವಾತದ್ವಾ ಗುಂಡು ಹಾರಿಸುತ್ತಿದ್ದ ಶಂಕಿತ ಉಗ್ರ ಸೈಫುಲ್ಲಾನನ್ನು ಬುಧವಾರ ಬೆಳಗಿನ ಜಾವ ಹತ್ಯೆಗೈಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದಲ್ಲಿ ಮಂಗಳವಾರ ಭೋಪಾಲ್-ಉಜ್ಜಯಿನಿ ರೈಲಿನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ಹಿಂದೆ, ಐಸಿಸ್ ಸದಸ್ಯನಾಗಿರುವನೆನ್ನಲಾದ ಸೈಫುಲ್ಲಾನ ಕೈವಾಡವಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಡಗಿದ್ದ ಸೈಫುಲ್ಲಾ ಮೇಲೆ ಗುಂಡು ಹಾರಿಸುವುದನ್ನು ನಿಲ್ಲಿಸಿ ಶರಣಾಗಬೇಕೆಂದು ಪೊಲೀಸರು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ, ನಾನು ಶರಣಾಗುವುದಿಲ್ಲ. ಆದರೆ, ಸಾವನ್ನಪ್ಪಲು ಇಚ್ಛಿಸುತ್ತೇನೆ ಎಂದು ಸೈಫುಲ್ಲಾ ಹೇಳಿದ್ದ.

Lucknow encounter ends, suspected IS militant killed

ಇಷ್ಟಾದರೂ ಶರಣಾಗಲು ಇಚ್ಛಿಸದ ಆತನ ಮೇಲೆ ಚಿಲ್ಲಿ ಬಾಂಬ್ ಎಸೆಯಲಾಗಿತ್ತು. ಆತ ಪೊಲೀಸರ ಮೇಲೆ ಗುಂಡು ಹಾರಿಸುತ್ತಲೇ ಇದ್ದ. ಪೊಲೀಸರು ನಂತರ ಅನಿವಾರ್ಯವಾಗಿ ಆತನನ್ನು ಹತ್ಯೆಗೈಯಲೇಬೇಕಾಯಿತು.

ಆತ ಮಾಡುತ್ತಿದ್ದ ಕರೆಗಳ ಆಧಾರದ ಮೇಲೆ ಆತನ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಸೈಫುಲ್ಲಾ ದಕ್ಷಿಣ ಭಾರತದಲ್ಲಿರುವ ಇನ್ನೊಬ್ಬ ಐಸಿಸ್ ಸದಸ್ಯನಿಗೆ ಕರೆ ಮಾಡಿದ್ದರಿಂದ ಆತ ಐಸಿಸ್ ಸದಸ್ಯ ಎಂಬುದು ಖಚಿತವಾಗಿತ್ತು.

ಮಧ್ಯಪ್ರದೇಶದಲ್ಲಿ ರೈಲಿನಲ್ಲಿ ಸ್ಫೋಟ ಸಂಭವಿಸಿದ ಕೂಡಲೆ ಆತ ಇನ್ನೊಬ್ಬನಿಗೆ ಕರೆ ಮಾಡಿ ಇದರ ಬಗ್ಗೆ ಮಾತನಾಡಿದ್ದ. ಈ ಘಟನೆಯ ಹಿಂದೆ ಸಿಮಿಯ ಕೈವಾಡವಿರುವುದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
One terror suspect has been killed in the encounter that took place near Lucknow Uttar Pradesh. Saifullah who refused to surrender was killed after the long and bloody encounter. The police say that he is a suspect in the Madhya Pradesh train blast and also a member of the Islamic State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X