ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ನಿದ್ದೆಗೆಡಿಸಿದ ಎಮ್ಮೆಗೆ ಡಿಎನ್ ಎ ಟೆಸ್ಟ್!

|
Google Oneindia Kannada News

ಲಖನೌ, ಫೆ. 27: ಅತ್ಯಾಚಾರ ಪ್ರಕರಣಗಳಲ್ಲಿ, ತಂದೆ ಅಥವಾ ತಾಯಿ ಯಾರು ಎಂಬ ವಿವಾದ ಎದುರಾದಾಗ ಡಿಎನ್ ಎ ಪರೀಕ್ಷೆ ಮೊರೆ ಹೋಗುವುದನ್ನು ಕೇಳಿದ್ದೇವೆ. ಅನೇಕ ಸಂದರ್ಭಗಳಲ್ಲಿ ಇದು ನ್ಯಾಯಾಲಯಕ್ಕೆ ಸಾಕ್ಷಿಯಾಗಿಯೂ ಮಾರ್ಪಡುತ್ತದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರಿಗೆ ಎಮ್ಮೆಯೊಂದಕ್ಕೆ ಡಿಎನ್ ಎ ಟೆಸ್ಟ್ ಮಾಡಬೇಕಾಗಿದೆ!

ಕಳ್ಳರು ಕದ್ದೊಯ್ದ ಎಮ್ಮೆಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಇದೀಗ ಎಮ್ಮೆ ಮಾಲೀಕನನ್ನು ಗುರುತಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸರ ವಶದಲ್ಲಿರುವ ಎಮ್ಮೆ ನನ್ನದು, ನನ್ನದು ಎಂದು ಅಕ್ಕಪಕ್ಕದ ಮನೆಯವರಲ್ಲಿ ಜಗಳ ಉಂಟಾಗಿದ್ದು ಪೊಲೀಸರು ಪಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ.

india

ಗಂಗಾಗಂಜ್ ಪ್ರದೇಶದ ನೆರೆಹೊರೆಯವರಾದ ರಾಮ್ ಬಚ್ಚನ್ ಮತ್ತು ಅವಾಧ್ ರಾಮ್ ಎಂಬುವರು ಎಮ್ಮೆ ತಮ್ಮದೆಂದು ಪೊಲೀಸರ ಬಳಿ ಬಂದು ಕುಳಿತುಕೊಂಡಿದ್ದಾರೆ. ರಾಮ್ ಬಚ್ಚನ್ ಎಮ್ಮೆ ತಮ್ಮದೆಂದು ಮೊದಲು ಪೊಲೀಸರಿಗೆ ಅಹವಾಲು ಸಲ್ಲಿಸಿದರು. ಕೆಲ ದಿನಗಳ ನಂತರ ಅವಾಧ್ ರಾಮ್ ಸಹ ಈ ಎಮ್ಮೆ ತಮಗೆ ಸೇರಬೇಕು ಎಂದು ದೂರು ನೀಡಿದರು.

ಇಬ್ಬರ ನಡುವಿನ ವಿವಾದ ತಾರಕಕ್ಕೇರಿದಾಗ ಪೊಲೀಸರು ನಿಜವಾದ ಮಾಲೀಕನನ್ನು ಪತ್ತೆ ಮಾಡಲು ಬಗೆಬಗೆಯ ಪರೀಕ್ಷೆ ಮಾಡಬೇಕಾಯಿತು. ಇಬ್ಬರ ಬಳಿಯೂ ಎಲ್ಲೆಯ ಹಾಲು ಕರೆಯಲು ಹೇಳಿದಾಗ ಎಮ್ಮೆ ಯಾವುದೇ ತಕರಾರು ಮಾಡಲಿಲ್ಲ. ಇಬ್ಬರು ಆಹಾರ ನೀಡಿದಾಗ ಎಮ್ಮೆ ಹೊಟ್ಟೆ ತುಂಬಿಸಿಕೊಂಡಿತು.

ಡಿಎನ್ ಎ ಪರೀಕ್ಷೆಯೇ ಪರಿಹಾರ
ಗ್ರಾಮಸ್ಥರು ಹೇಳಿದ ಎಲ್ಲ ಬಗೆಯ ಪರೀಕ್ಷೆ ಮುಗಿಸಿರುವ ಪೊಲೀಸರು ಈಗ ಡಿಎನ್ ಎ ಪರೀಕ್ಷೆಯೇ ಪರಿಹಾರ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇಬ್ಬರ ಬಳಿ ಇರುವ ಕರುಗಳ ಆಧಾರದಲ್ಲಿ ಡಿಎನ್ ಎ ಪರೀಕ್ಷೆ ನಡೆಸಿ ನಿಜವಾದ ಮಾಲೀಕನನ್ನು ಪತ್ತೆಹಚ್ಚಬೇಕಾಗಿದೆ.

English summary
A buffalo that went missing last week and was later traced by the police in Gosainganj area on the outskirts of Lucknow now has two people claiming her ownership. It has now been decided to conduct a DNA test of the buffalo and two calves to settle the dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X