ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಮಹಾ ಸಮರ ಪ್ರಚಾರಕ್ಕೆ ಅಂತಿಮ ತೆರೆ

By Mahesh
|
Google Oneindia Kannada News

ಬೆಂಗಳೂರು, ಮೇ.10: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯ ನಡೆಸಿ ಜನರನ್ನು ಆಕರ್ಷಿಸಲು ಯತ್ನಿಸಿದ್ದು ಕೊನೆ ಹಂತ ತಲುಪಿದೆ. ಒಟ್ಟು 9 ಹಂತದ ಚುನಾವಣಾ ಪ್ರಕ್ರಿಯೆಯ ಕೊನೆಯ ಬಹಿರಂಗ ಪ್ರಚಾರ ಕಾರ್ಯಕ್ಕೆ ವಾರಣಾಸಿಯಲ್ಲಿ ಶನಿವಾರ ಸಂಜೆ ತೆರೆ ಬಿದ್ದಿದೆ.

ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದ 16ನೇ ಲೋಕಸಭೆ ಚುನಾವಣೆ ಮಹಾಸಮರದ ಬಹಿರಂಗ ಪ್ರಚಾರಕ್ಕೆ ಶನಿವಾರ(ಮೇ.10) ಅಂತ್ಯಗೊಳ್ಳುವುದರ ಮೂಲಕ ಎರಡು ತಿಂಗಳ ಕುರುಕ್ಷೇತ್ರ ಮುಕ್ತಾಯಗೊಂಡಿದೆ.

ಸೋಮವಾರ ನಡೆಯಲಿರುವ 9ನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಮೂರು ರಾಜ್ಯಗಳ 41 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಇಡೀ ವಿಶ್ವದ ಗಮನವೇ ಮೇ. 16ರ ಚುನಾವಣಾ ಫಲಿತಾಂಶದತ್ತ ಕೇಂದ್ರೀಕರಿಸಿದೆ. ಬಿಹಾರದ 6, ಪಶ್ಚಿಮ ಬಂಗಾಳ 17 ಮತ್ತು ಉತ್ತರ ಪ್ರದೇಶ 18 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 9 ಹಂತದ ಮತದಾನದಲ್ಲಿ 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಂತಾಗುತ್ತದೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಮಾಜವಾದಿ ಪಕ್ಷದ ನೇತಾರ ಮುಲಾಯಮ್ ಸಿಂಗ್ ಯಾದವ್, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯವನ್ನು ಮತದಾರ ಪ್ರಭು ತೀರ್ಮಾನಿಸಲಿದ್ದಾನೆ.

ಈವರೆಗೂ ಒಟ್ಟು 8 ಹಂತದ ಮತದಾನ ನಡೆದಿದ್ದು, 502 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾಯವಾಗಿದೆ. ಸೋಮವಾರ ನಡೆಯಲಿರುವ ಅಂತಿಮ ಹಂತದ ಮತದಾನದಲ್ಲಿ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಜೆಡಿಯು, ಬಿಎಸ್ ‌ಪಿ, ಎಸ್ ‌ಪಿ, ಆಮ್ ‌ಆದ್ಮಿ ಸೇರಿದಂತೆ ಪ್ರಮುಖ ಪಕ್ಷಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಅಂತಿಮ ಹಂತದ ಪ್ರಚಾರದ ಚಿತ್ರಗಳು, 8 ಹಂತದ ಚುನಾವಣಾ ಹಿನ್ನೋಟ ಇಲ್ಲಿದೆ...

ದೆಹಲಿಯಲ್ಲಿ ಯಾವ ಪಕ್ಷ ಸರ್ಕಾರ ರಚನೆ?

ದೆಹಲಿಯಲ್ಲಿ ಯಾವ ಪಕ್ಷ ಸರ್ಕಾರ ರಚನೆ?

ಶುಕ್ರವಾರ (ಮೇ.16) ಬೆಳಗ್ಗೆ 8 ಗಂಟೆಯಿಂದ ದೇಶಾದ್ಯಂತ ಏಕಕಾಲದಲ್ಲಿ ಮತ ಎಣಿಕೆ ನಡೆಯಲಿದ್ದು, ದೆಹಲಿಯಲ್ಲಿ ಯಾವ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂಬುದು ಫಲಿತಾಂಶದಿಂದ ಹೊರಬೀಳಲಿದೆ.

ವಾರಣಾಸಿಯಲ್ಲಿ ಅಂತಿಮ ಮತದಾನ

ವಾರಣಾಸಿಯಲ್ಲಿ ಅಂತಿಮ ಮತದಾನ

ಸೋಮವಾರ ನಡೆಯಲಿರುವ ಮತದಾನದಲ್ಲಿ 41 ಲೋಕಸಭಾ ಕ್ಷೇತ್ರಗಳಿಗೆ ಸುಮಾರು 6 ಕೋಟಿ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸ್ಪರ್ಧಾಕಣದಲ್ಲಿ 601 ಅಭ್ಯರ್ಥಿಗಳಿದ್ದಾರೆ.

ಅಂತಿಮ ಹಂತದ ಪ್ರಚಾರ ಅಂತ್ಯ

ಅಂತಿಮ ಹಂತದ ಪ್ರಚಾರ ಅಂತ್ಯ

ಅಂತಿಮ ಹಂತದ 601 ಅಭ್ಯರ್ಥಿಗಳಲ್ಲಿ 119 ಅಭ್ಯರ್ಥಿಗಳು (ಶೇ.20ರಷ್ಟು) ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದರೆ, 171 ಅಭ್ಯರ್ಥಿಗಳು ಕೋಟ್ಯಾಧಿಪತಿಗಳಾಗಿದ್ದಾರೆ. ಅತ್ಯಾಚಾರ, ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಕೆಲವು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗಿರುವವರಿದ್ದಾರೆ.

ಚಿತ್ರದಲ್ಲಿ : ಮೋದಿ ಅವರಿಗೆ ಮಿರ್ಜಾಪುರದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು

ರಾಹುಲ್ ‌ಗಾಂಧಿ ರೋಡ್ ‌ಶೋ

ರಾಹುಲ್ ‌ಗಾಂಧಿ ರೋಡ್ ‌ಶೋ

ಹದಿನಾರನೆ ಲೋಕಸಭೆ ಚುನಾವಣೆಯ ಬಹಿರಂಗ ಅಂತ್ಯಗೊಂಡಿದ್ದು, ನಟಿ ನಗ್ಮಾ ಅವರು ರಾಹುಲ್ ಗಾಂಧಿ ಜತೆ ವಾರಣಾಸಿಯ ರೋಡ್ ಶೋನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಘಟಾನುಘಟಿಗಳಿಂದ ಭರ್ಜರಿ ಮತಯಾಚನೆ

ಘಟಾನುಘಟಿಗಳಿಂದ ಭರ್ಜರಿ ಮತಯಾಚನೆ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಬ್ಬರದ ಪ್ರಚಾರ ನಡೆಸಿದರೆ, ಉತ್ತರ ಪ್ರದೇಶದಲ್ಲಿ ಮುಲಾಯಮ್ ಸಿಂಗ್ ಯಾದವ್, ಮಾಯಾವತಿ, ಬಿಹಾರದಲ್ಲಿ ನಿತೀಶ್ ‌ಕುಮಾರ್ ಸೇರಿದಂತೆ ಘಟಾನುಘಟಿಗಳು ಮತಯಾಚನೆ ಮಾಡಿದರು.

ಅಜಯ್ ರಾಯ್ ಪರ ಪ್ರಚಾರ ಮೆರವಣಿಗೆ

ಅಜಯ್ ರಾಯ್ ಪರ ಪ್ರಚಾರ ಮೆರವಣಿಗೆ

ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಪರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭರ್ಜರಿ ಚುನಾವಣಾ ಪ್ರಚಾರ ಮೆರವಣಿಗೆ ನಡೆಸಿದರು.

ಚಿತ್ರದಲ್ಲಿ: ವಾರಣಾಸಿಯ ಮಕ್ಕಳು ಕಾಂಗ್ರೆಸ್ ಯುವರಾಜನನ್ನು ನೋಡಲು ಹಾತೊರೆದು ಕಾಯುತ್ತಿರುವುದು
ವಾರಣಾಸಿಯಲ್ಲಿ ರೋಡ್ ಶೋ ಸರಣಿ

ವಾರಣಾಸಿಯಲ್ಲಿ ರೋಡ್ ಶೋ ಸರಣಿ

ಗುರುವಾರ ಅರವಿಂದ್ ಕೇಜ್ರಿವಾಲ್ ರೋಡ್ ಶೋ ಕಂಡಿದ್ದ ವಾರಣಾಸಿ ಇಂದು ರಾಹುಲ್ ‌ಗಾಂಧಿ ಬಹಿರಂಗ ಪ್ರಚಾರದ ವೈಖರಿಗೆ ಬೆರಗಾಯಿತು. ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಐದು ಕಡೆ ಸಮಾವೇಶ ನಡೆಸಿದ್ದು ವಿಶೇಷ

ವಾರಣಾಸಿಯಲ್ಲಿ ರೋಡ್ ಶೋ, ಜನಸಮೂಹ

ವಾರಣಾಸಿಯಲ್ಲಿ ರೋಡ್ ಶೋ, ಜನಸಮೂಹ

ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಚಾರದ ರೋಡ್ ಶೋದಲ್ಲಿದ್ದಷ್ಟೆ ಸಂಖ್ಯೆಯ ಜನ ಇಂದು ರಾಹುಲ್ ‌ಗಾಂಧಿ ಶೋದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

ಕಾಂಗ್ರೆಸ್ ಬಲ ಪ್ರದರ್ಶನ ಮಾಡಿದ್ದಾರೆ

ಕಾಂಗ್ರೆಸ್ ಬಲ ಪ್ರದರ್ಶನ ಮಾಡಿದ್ದಾರೆ

ವಾರಣಾಸಿಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಗೋಲ್ ಜಡ್ಡಾ ಚೌರಾಹಾ ಪ್ರದೇಶದಿಂದ ಲಂಕಾ ಪ್ರದೇಶದವರೆಗೆ ರೋಡ್ ಶೋ ನಡೆಸಿ ಕಾಂಗ್ರೆಸ್ ಬಲ ಪ್ರದರ್ಶನ ಮಾಡಿದ್ದಾರೆ.

ಅಂತಿಮ ಹಂತ ಪಶ್ಚಿಮ ಬಂಗಾಳದಲ್ಲೂ ಮತದಾನ

ಅಂತಿಮ ಹಂತ ಪಶ್ಚಿಮ ಬಂಗಾಳದಲ್ಲೂ ಮತದಾನ

ಸೋಮವಾರ ಮೇ 12ರಂದು ಅಂತಿಮ ಹಂತದ ಹಾಗೂ 9ನೇ ಹಂತದ ಮತದಾನ ನಡೆಯಲಿದ್ದು, ಬಿಹಾರ (6), ಉತ್ತರಪ್ರದೇಶ (18) ಹಾಗೂ ಪಶ್ಚಿಮ ಬಂಗಾಳದ (17) ಲೋಕಸಭಾ ಕ್ಷೇತ್ರ ಸೇರಿದಂತೆ ಒಟ್ಟು 41 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದರೆ 543 ಕ್ಷೇತ್ರಗಳಲ್ಲೂ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಎಂಟನೇ ಹಂತದ ಚುನಾವಣೆ ವಿವರ

ಎಂಟನೇ ಹಂತದ ಚುನಾವಣೆ ವಿವರ

ಎಂಟನೇ ಹಂತದ ಚುನಾವಣೆ ಮತದಾನ: ಮೇ 7 ರಂದು ಆಂಧ್ರಪ್ರದೇಶ (25), ಬಿಹಾರ (7), ಹಿಮಾಚಲ ಪ್ರದೇಶ(4), ಜಮ್ಮುಕಾಶ್ಮೀರ (2), ಉತ್ತರ ಪ್ರದೇಶ (15), ಉತ್ತರಾಖಂಡ (5), ಪಶ್ಚಿಮ ಬಂಗಾಳ (6) ಸೇರಿದಂತೆ ಒಟ್ಟು 64 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

ಏಳನೇ ಹಂತದ ಚುನಾವಣೆ ಮತದಾನ

ಏಳನೇ ಹಂತದ ಚುನಾವಣೆ ಮತದಾನ

ಏಳನೇ ಹಂತದ ಚುನಾವಣೆ ಮತದಾನ ಏ.30 ರಂದು ಆಂಧ್ರಪ್ರದೇಶ (17), ಬಿಹಾರ (7), ಗುಜರಾತ್ (26), ಜಮ್ಮು-ಕಾಶ್ಮೀರ (1), ಪಂಜಾಬ್ (13), ಉತ್ತರಪ್ರದೇಶ (14), ಪಶ್ಚಿಮ ಬಂಗಾಳ (9), ದಾದಾರ್ ಮತ್ತು ನಾಗರ್ ಹವೇಲಿಯ (1) ಕ್ಷೇತ್ರ ಸೇರಿದಂತೆ 89 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿತ್ತು.

ಚಿತ್ರದಲ್ಲಿ: ವಾರಣಾಸಿಯಲ್ಲಿ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಮೆರವಣಿಗೆ
ಆರನೇ ಹಂತದ ಚುನಾವಣಾ ಮತದಾನ

ಆರನೇ ಹಂತದ ಚುನಾವಣಾ ಮತದಾನ

ಆರನೇ ಹಂತದ ಚುನಾವಣಾ ಮತದಾನ: ಏ.24 ರಂದು ಅಸ್ಸೋಂ (6), ಬಿಹಾರ (7), ಛತ್ತೀಸ್‌ಗಡ (7), ಜಮ್ಮುಕಾಶ್ಮೀರ (1), ಜಾರ್ಖಂಡ್ (4), ರಾಜಸ್ಥಾನ (5), ತಮಿಳುನಾಡು (39), ಉತ್ತರ ಪ್ರದೇಶ (12), ಪಶ್ಚಿಮ ಬಂಗಾಳ (6) ಸೇರಿದಂತೆ ಒಟ್ಟು 117 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು.

ನಾಲ್ಕು ಐದನೇ ಹಂತದ ಚುನಾವಣಾ ಮತದಾನ

ನಾಲ್ಕು ಐದನೇ ಹಂತದ ಚುನಾವಣಾ ಮತದಾನ

ಏ.17 ರಂದು 4ನೇ ಹಂತದ ಮತದಾನದಲ್ಲಿ ಅಸ್ಸೋಂ (3), ಗೋವಾ (2), ಸಿಕ್ಕಿಂ (1) ಹಾಗೂ ತ್ರಿಪುರಾ (1) ಸೇರಿದಂತೆ ಒಟ್ಟು 7 ಕ್ಷೇತ್ರಗಳಿಗೆ ಮತದಾನ ನಡೆದಿದೆ.

ಏ.15 ರಂದು 5ನೇ ಹಂತದ ಮತದಾನದಲ್ಲಿ ಬಿಹಾರ (7), ಛತ್ತೀಸಗಡ (3), ಜಮ್ಮು-ಕಾಶ್ಮೀರ(1), ಜಾರ್ಖಂಡ್(6), ಕರ್ನಾಟಕ (28), ಮಣಿಪುರ (1), ಒಡಿಸ್ಸಾ (11), ರಾಜಸ್ಥಾನ (20), ಉತ್ತರಪ್ರದೇಶ (11), ಪಶ್ಚಿಮ ಬಂಗಾಳದ 4 ಕ್ಷೇತ್ರಗಳು ಸೇರಿದಂತೆ ಒಟ್ಟು 121 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಚಿತ್ರದಲ್ಲಿ: ಆಮ್ ಆದ್ಮಿ ಪಕ್ಷದ ಶಾಜಿಯಾ ಇಲ್ಮಿ ಚುನಾವಣಾ ಪ್ರಚಾರ.

ಮೊದಲ 3 ಹಂತದ ಚುನಾವಣಾ ಮತದಾನ

ಮೊದಲ 3 ಹಂತದ ಚುನಾವಣಾ ಮತದಾನ

ಏ.7 ರಂದು ಆರಂಭಗೊಂಡ ಮತದಾನ ಮೇ 12 ರವರೆಗೆ ಒಟ್ಟು 9 ಹಂತಗಳಲ್ಲಿ ನಡೆದಿದೆ.

* ಏ.7 ರಂದು ಅಸ್ಸೋಂ (5) ಹಾಗೂ ತ್ರಿಪುರಾ (1) ಸೇರಿದಂತೆ ಒಟ್ಟು 6 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು.

* ಏ.9 ರಂದು ಅರುಣಾಚಲ ಪ್ರದೇಶ(2), ಮಣಿಪುರ (1), ಮೇಘಾಲಯ (2), ಮಿಜೋರಾಂ (1), ನಾಗಾಲ್ಯಾಂಡ್(1) ಸೇರಿದಂತೆ ಒಟ್ಟು 7 ಕ್ಷೇತ್ರಗಳಲ್ಲಿ ಮತದಾರರ ತಮ್ಮ ಮತ ಚಲಾಯಿಸಿದರು.

* ಏ.10 ರಂದು ಬಿಹಾರ (6), ಛತ್ತೀಸ್‌ಗಡ (1), ಹರಿಯಾಣ (10), ಜಮ್ಮು-ಕಾಶ್ಮೀರ (1), ಜಾರ್ಖಂಡ್ (4), ಮಧ್ಯಪ್ರದೇಶ (10), ಒಡಿಸ್ಸಾ (10), ಉತ್ತರಪ್ರದೇಶ (10), ಅಂಡಮಾನ್-ನಿಕೋಬಾರ್ (1) ಹಾಗೂ ಚಂಡೀಗಡ (1) ಲೋಕಸಭಾ ಕ್ಷೇತ್ರ ಸೇರಿದಂತೆ ಒಟ್ಟು 91 ಕ್ಷೇತ್ರಗಳಿಗೆ ಮತದಾನ ನಡೆದಿದೆ.

English summary
It's election time. Each political party, their leaders and supporters are spending nervous nights as we proceed towards May 16. But for the time being, everyone related to Indian politics is busy giving the final touches to the preparations. Oneindia brings news related to the upcoming election in pictures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X