ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸತನವಿಲ್ಲದ ಗೂಡ್ಸ್ ಗಾಡಿ ಓಡಿಸಿದ ಪ್ರಭು

By Mahesh
|
Google Oneindia Kannada News

ನವದೆಹಲಿ, ಫೆ. 25: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಪರವಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಎರಡನೇ ಬಾರಿಗೆ ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ಮಂಡಿಸಿದರು.ಯಾವುದೇ ಹೊಸ ರೈಲು ಘೋಷಣೆ ಇಲ್ಲದೆ, ಪ್ರಯಾಣ ದರ ಏರಿಕೆ ಮಾಡದೆ ಗೂಡ್ಸ್ ಗಾಡಿಯಂತೆ ನಿಧಾನಗತಿಯ ಬಜೆಟ್ ನೀಡಿದ್ದಾರೆ.

ಗುರುವಾರ (ಫೆಬ್ರವರಿ 25) ಸಂಸತ್ತಿನಲ್ಲಿ 12ಗಂಟೆಯಿಂದ ಬಜೆಟ್ ಭಾಷಣ ಆರಂಭಗೊಂಡು ಒಂದು ಗಂಟೆ ಅವಧಿಯಲ್ಲಿ ಮುಕ್ತಾಯ ಕಂಡಿದೆ.. ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು ಪ್ರಭು ಅವರಿಗೆ ಸಾಥ್ ನೀಡಿದ್ದಾರೆ. ಒನ್ ಇಂಡಿಯಾ ಕನ್ನಡ ಬಜೆಟ್ ಲೈವ್ ಕವರೇಜ್ ತಪ್ಪದೇ ಓದಿ... [ಜನ ಸಾಮಾನ್ಯರಿಗೆ ಪ್ರಭು ರೈಲು ಬಜೆಟ್ಟಿನಿಂದ ಸಿಕ್ಕಿದ್ದೇನು?]
ಟ್ವೀಟ್ಸ್ : @OneindiaKannada ;
[ರೈಲ್ವೆ ಬಜೆಟ್ : ಕರ್ನಾಟಕದ ಬೇಡಿಕೆಗಳು]

Suresh Prabhu to present Railway Budget for the 2nd time


13.10: ಗೌತಮ ಬುದ್ಧನ ನೆನೆಯುತ್ತಾ ಬಜೆಟ್ ಭಾಷಣ ಮುಕ್ತಾಯಗೊಳಿಸಿದ ಸುರೇಶ್ ಪ್ರಭು.
* ಅಂತ್ಯೋದಯ ಏಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಲು ರಿಸರ್ವೇಷನ್ ಬೇಕಿಲ್ಲ.
* ಪ್ರಯಾಣಿಕರಿಗೆ ಸ್ಥಳೀಯ ಖಾದ್ಯ ಆಯ್ಕೆ ಮಾಡುವ ಅವಕಾಶ ಸಿಗಲಿದೆ.

13.09: ರೈಲ್ ಬಂಧು, ಎಫ್ ಎಂ ವಾಹಿನಿ ಸೂಕ್ತ ಬಳಕೆಗೆ ಕ್ರಮ.


13.08: ಇ ಕಾಮರ್ಸ್ ಸೌಲಭ್ಯ ಬಳಸಿ ಮನೆ ಮನೆಗೆ ಸರಕು ತಲುಪಿಸುವ ಯೋಜನೆ.
13.05:
ಕೂಲಿಗಳನ್ನು ಸಹಾಯಕರು ಎಂದು ಕರೆಯಲಾಗುವುದು ಹೊಸ ಡ್ರೆಸ್ ಕೋಡ್ ಜಾರಿ.

13.00: ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಡ್ರೋನ್, ಜಿಪಿಎಸ್ ಉನ್ನತ ತಂತ್ರಜ್ಞಾನ ಬಳಕೆ
* ಅಹಮದಾಬಾದ್- ಮುಂಬೈ ನಡುವೆ ಹೈಸ್ಪೀಡ್ ರೈಲು ಯೋಜನೆಗೆ ಜಪಾನ್ ನೆರವು.

12.58: ಮಹಿಳೆ ಮತ್ತು ಮಕ್ಕಳಿಗಾಗಿ: ಮಕ್ಕಳಿಗೆ ಹೊಸ ಮೆನು, ಬೇಬಿ ಫುಡ್, ಬಿಸಿ ನೀರು ಇನ್ನಿತರ ಸೌಲಭ್ಯ

* 400 ರೈಲು ನಿಲ್ದಾಣಗಳಲ್ಲಿ ಇ ಕೆಟರಿಂಗ್ ಸೌಲಭ್ಯ ಅಳವಡಿಕೆ


12. 56: ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಹೆಚ್ಚಿನ ರೈಲುಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆ.
12.55: ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ, ಕರ್ನಾಟಕ ಸರ್ಕಾರದ ಸಹಕಾರದ ನಿರೀಕ್ಷೆ.

12.50: ಮುಂಬೈಗೆ ಸಬ್ ಅರ್ಬನ್ ರೈಲು ಘೋಷಣೆ
* ಕೋಲ್ಕತ್ತಾದಲ್ಲಿ 100 ಕಿ.ಮೀ ಮೆಟ್ರೋ ಮೊದಲ ಹಂತ ಜೂನ್ 2018ಕ್ಕೆ ಮುಕ್ತಾಯ
12.46: ಹಮ್ ಸಫರ್ ಹಾಗು ತೇಜಸ್ ಹೊಸ ರೈಲುಗಳ ಘೋಷಣೆ

12.45: ಕೊಂಕಣ್ ರೈಲ್ವೆಯಲ್ಲೂ ಅಂಗವಿಕಲರಾಗಿ ಸಾರಥಿ ಸೇವೆ ಸೌಲಭ್ಯ. [ರೈಲ್ವೆ ಬಜೆಟ್‌ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?]

Suresh Prabhu
12.40: ಹೊಸ ಡಬ್ಬಲ್ ಡೆಕ್ಕರ್ ಸೇವೆಯಿಂದ ಶೇ40ರಷ್ಟು ಹೆಚ್ಚು ಜನ ಪ್ರಯಾಣಿಸಬಹುದು.
12.38:
ವಡೋದರಾದಲ್ಲಿರುವ ರೈಲ್ವೆ ಅಕಾಡೆಮಿಯಲ್ಲಿ ರೈಲು ವಿಶ್ವವಿದ್ಯಾಲಯ ಸ್ಥಾಪನೆ.

12.37: ವಿದೇಶಿ ಪ್ರವಾಸಿಗರಿಗೆ ಟಿಕೆಟ್ ಪಡೆಯಲು ಹೊಸ ಸೌಲಭ್ಯ.
* ಬಾರ್ ಕೋಡ್, ಸ್ಕಾನರ್ ಟಿಕೆಟ್ ನೀಡಿಕೆ.ಸ್
* ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ಪಾಸ್
* ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಪ್ರತ್ಯೇಕ ಬೋಗಿ

12.30: 100 ರೈಲು ನಿಲ್ದಾಣಗಳಲ್ಲಿ ವೈಫೈ ಅಳವಡಿಕೆ ನಂತರ 400 ನಿಲ್ದಾಣಕ್ಕೆ ವಿಸ್ತರಣೆ.

12.28: ಹಿರಿಯ ನಾಗರಿಕರಿಗೆ ಟಿಕೆಟ್ ಕಾಯ್ದಿರಿಸುವ ಮಿತಿ ಹೆಚ್ಚಳ
12.27: 17 ಸಾವಿರ ಬಯೋ ಟಾಯ್ಲೆಟ್ ಗಳ ಅಳವಡಿಕೆ, 1,600 ಕಿ.ಮೀ ವಿದ್ಯುತೀಕರಣ ಈ ವರ್ಷ ಸಾಧಿಸಲಾಗುವುದು.

12.26: 2018-19ರ ವೇಳೆಗೆ 14 ಕೋಟಿ man-days ಉದ್ಯೋಗ ಸೃಷ್ಟಿ.
12.25: ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಮಾಜಿಕ ಜಾಲ ತಾಣಗಳ ಬಳಕೆ.

12.23: ಮುಂದಿನ 5 ವರ್ಷಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ 8.5 ಲಕ್ಷ ಕೋಟಿ ರು ಹೂಡಿಕೆ.

12.20: 2014ರ ನವೆಂಬರ್ ನಿಂದ ಇಲ್ಲಿ ತನಕ ಸುಮಾರು 24,000 ಕೋಟಿ ರು ಮೊತ್ತದ ಗುತ್ತಿಗೆಗಳನ್ನು ನೀಡಲಾಗಿದೆ.

12.19: ಪ್ರಸಕ್ತ ವರ್ಷ 2,500 ಕಿ.ಮೀ ಬ್ರಾಡ್ ಗೇಜ್ ಲೈನ್ ಪರಿವರ್ತನೆ ಗುರಿ.
* ಕಳೆದ ವರ್ಷ ಘೋಷಣೆ ಮಾಡಿದ 139 ಯೋಜನೆಗಳು ಕಾರ್ಯಗತವಾಗಿವೆ.
* ಆದಾಯ ಪ್ರಗತಿ ಶೇ 10.1 ಸಾಧನೆ ಗುರಿ ಹೊಂದಲಾಗಿದೆ.
12.18: ಕಳೆದ ಬಜೆಟ್ ಗೆ ಹೋಲಿಸಿದರೆ ಸುಮಾರು 8,720 ಕೋಟಿ ರು ಉಳಿತಾಯ,

12.17: ವಿಷನ್ 2020

12.15: 2016-17 ಸಾಲಿನ ಯೋಜನಾ ಗಾತ್ರ 1.21 ಲಕ್ಷ ಕೋಟಿ ರು ಎಂದು ನಿಗದಿಪಡಿಸಲಾಗಿದೆ.

12.10: ಅಟಲ್ ಬಿಹಾರಿ ವಾಜಪೇಯಿ, ಹರಿವಂಶ್ ರಾಯ್ ಬಚ್ಚನ್ ಅವರ ಕವನದ ಸಾಲುಗಳನ್ನು ಉಲ್ಲೇಖಿಸಿದ ಸುರೇಶ್ ಪ್ರಭು.

12.05: ರೈಲ್ವೆ ಬಜೆಟ್ ಮೋದಿ ಅವರ ಕನಸು, ಆಶಯದಂತೆ ರೂಪಿಸಲಾಗಿದೆ. ಪ್ರಯಾಣಿಕರ ತೃಪ್ತಿ, ಉದ್ಯೋಗ ಸೃಷ್ಟಿ ನಮ್ಮ ಗುರಿಯಾಗಿದೆ.

12.00: 2016-17ನೇ ಸಾಲಿನ ರೈಲ್ವೆ ಬಜೆಟ್ ಭಾಷಣ ಅರಂಭಿಸಿದ ಸಚಿವ ಸುರೇಶ್ ಪ್ರಭು.
11.45: ರೈಲ್ವೆ ಬಜೆಟ್ ಪ್ರತಿಯೊಂದಿಗೆ ಸಂಸತ್ ಭವನ ಪ್ರವೇಶಿಸಿದ ರೈಲ್ವೆ ಸಚಿವ ಸುರೇಶ್ ಪ್ರಭು

11.30: ಬಜೆಟ್ ಕಾಪಿಯೊಂದಿಗೆ ರೈಲು ಭವನ ತಲುಪಿದ ರೈಲ್ವೆ ಸಚಿವ ಸುರೇಶ್ ಪ್ರಭು ಹಾಗೂ ರಾಜ್ಯ ಸಚಿವ ಮನೋಜ್ ಸಿನ್ಹಾ.

ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲು, ಮೆಟ್ರೋ, ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಕರ್ನಾಟಕ ರಾಜ್ಯಕ್ಕಿದೆ.

ಮೊಬೈಲಿನಲ್ಲಿ ಅಪ್ಡೇಟ್ಸ್ ಪಡೆಯಲು

ಮೋದಿ ಕನಸಿನ ಡೈಮಂಡ್ ಚತುಷ್ಪಥ ಯೋಜನೆ-ದೇಶದ ಮೆಟ್ರೋ ನಗರಗಳನ್ನು ಹೈ ಸ್ಪೀಡ್ ರೈಲು, ಪಾರ್ಸೆಲ್ ರೈಲು, ವಿಶೇಷ ರೈಲುಗಳ ಮೂಲಕ ಸಂಪರ್ಕ ಸಾಧಿಸುವ ಯೋಜನೆ ಸರ್ಕಾರಕ್ಕಿದೆ. [ರೈಲ್ವೆ ಬಜೆಟ್ 2015: ಪ್ರಭು ಪ್ರಥಮ ಚುಂಬನ ಅನುಭವ]

* ಬಾಕಿ ಉಳಿದಿರುವ 300 ಯೋಜನೆಗೆ ಹಣ ಸಂಗ್ರಹ ಗುರಿ. ಆದಾಯ 136,079.26 ಕೋಟಿ ರು ನಷ್ಟಿದೆ. 141,416.05 ಕೋಟಿ ರು ನಿರೀಕ್ಷೆ ಇತ್ತು. ಶೇ 3.77 ರಷ್ಟು ಆದಾಯ ಕುಸಿತವಾಗಿದೆ. [ಭಾರತೀಯ ರೈಲ್ವೆ : ಅಂಕಿ ಸಂಖ್ಯೆಯಲ್ಲಿ ಚುಕು ಬುಕು]


* ಪ್ರಯಾಣಿಕರ ಸುರಕ್ಷತೆಗೆ ತಂತ್ರಜ್ಞಾನ ಬಳಕೆ, ರೈಲ್ವೆ ಸುರಕ್ಷತಾ ದಳ (ಆರ್ ಪಿಎಫ್) ಕ್ಕೆ ಹೆಚ್ಚಿನ ಶಕ್ತಿ.
* ಸಬ್ ಅರ್ಬನ್ ರೈಲಿಗೆ ಆದ್ಯತೆ. ಮುಂಬೈನಲ್ಲಿ ಎಸಿ ಸಬ್ ಅರ್ಬನ್ ರೈಲಿಗೆ ಚಾಲನೆ ನಂತರ ಇತರೆ ನಗರಗಳಿಗೆ ಸಿಗಲಿದೆ.

Suresh Prabhu


ಸುರೇಶ್ ಪ್ರಭುರಿಂದ ರೈಲ್ವೆ ಬಜೆಟ್ ಮಂಡನೆ ವಿಡಿಯೋ ನೇರ ಪ್ರಸಾರ:

English summary
Railway Minister Suresh Prabhakar Prabhu presented the Railway Budget 2015-16 on Feb.25, 2016. catch live updates on Oneindia Kannada portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X