ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಸಾವಿರ ಶೂರಿಟಿ ಕೊಟ್ಟು ಜೈಲು ತಪ್ಪಿಸಿಕೊಂಡ ತಾಯಿಮಗ

|
Google Oneindia Kannada News

ದೆಹಲಿ, ಡಿಸೆಂಬರ್ 19 : ನ್ಯಾಷನಲ್ ಹೆರಾಲ್ಡ್ ಆಸ್ತಿಯ ಅಕ್ರಮ ಪರಭಾರೆ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೆಹಲಿಯ ಪಟಿಯಾಲಾ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಶನಿವಾರ ಮಧ್ಯಾಹ್ನ ಇಬ್ಬರು ಕೋರ್ಟ್‌ಗೆ ಹಾಜರಾಗಿದ್ದರು.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕ 50 ಸಾವಿರ ರೂ. ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಯಿತು. ಐದು ನಿಮಿಷಗಳಲ್ಲಿ ಇಬ್ಬರು ನಾಯಕರು ಜಾಮೀನು ಪಡೆದು ಹೊರನಡೆದರು. ಪ್ರಕರಣದ ಮುಂದಿನ ವಿಚಾರಣೆ 2016ರ ಫೆಬ್ರವರಿ 20ರ ಮಧ್ಯಾಹ್ನ 2ಗಂಟೆಗೆ ನಡೆಯಲಿದೆ. [ಏನಿದು ನ್ಯಾಷನಲ್ ಹೆರಾಲ್ಡ್ ಹಗರಣ?]

rahul gandhi

ಸಮಯ 3.30 : ಪ್ರಕರಣದ ದೂರುದಾರ ಸುಬ್ರಮಣ್ಯ ಸ್ವಾಮಿ ಅವರು, ಸೋನಿಯಾ ಗಾಂಧಿಯವರ ಪಾಸ್ ಪೋರ್ಟ್ ಜಪ್ತಿ ಮಾಡಿ ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದ್ದರು. ಆದರೆ, ಕೋರ್ಟ್ ಮನವಿ ತಿರಸ್ಕರಿಸಿದೆ.

ಸಮಯ 3.20 : ಸೋನಿಯಾ ಗಾಂಧಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಅವರಿಗೆ ಅಹ್ಮದ್ ಪಟೇಲ್ ಶ್ಯೂರಿಟಿ ನೀಡಿದರು.

ಸಮಯ 3.10 : ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಫೆಬ್ರವರಿ 20ಕ್ಕೆ ಮುಂದೂಡಿದೆ. [ಹೆರಾಲ್ಡ್ : ಒಂದಿಷ್ಟು ತಮಾಷೆಯ, ಕೆಣಕುವ ಟ್ವೀಟುಗಳು]

ಸಮಯ 3.05 : ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಸೋನಿಯಾ, ರಾಹುಲ್‌ಗೆ ಜಾಮೀನು ಮಂಜೂರು [ನ್ಯಾಷನಲ್ ಹೆರಾಲ್ಡ್ ಕೇಸ್ : ಬಿಜೆಪಿ ವಿರುದ್ಧ ಬೀದಿಗಿಳಿದ ಕಾಂಗ್ರೆಸ್]

ಸಮಯ 3.01 : ಕೋರ್ಟ್‌ನಲ್ಲಿ ವಿಚಾರಣೆ ಆರಂಭ. ವಾದ ಆರಂಭಿಸಿದ ಸೋನಿಯಾ ಪರ ವಕೀಲ ಕಪಿಲ್ ಸಿಬಲ್

ಸಮಯ 2.43 : ಪಟಿಯಾಲಾ ಕೋರ್ಟ್ ತಲುಪಿದ ಸೋನಿಯಾ ಗಾಂಧಿ, ರಾಹುಲ್

ಸಮಯ 2.30 : ಪಟಿಯಾಲಾ ಕೋರ್ಟ್‌ನತ್ತ ಹೊರಟ ರಾಹುಲ್ ಗಾಂಧಿ

ಸಮಯ 2.25 : ಕೋರ್ಟ್‌ಗೆ ಆಗಮಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ವಾದ್ರಾ ಇತರ ನಾಯಕರು

ಸಮಯ 2.15 : ಪಟಿಯಾಲಾ ಕೋರ್ಟ್ ತಲುಪಿದ ಕಾಂಗ್ರೆಸ್ ನಾಯಕ ಮತ್ತು ಸೋನಿಯಾ ಪರ ವಕೀಲ ಅಭಿಷೇಕ್ ಸಿಂಘ್ವಿ

English summary
Congress President Sonia Gandhi and Vice president Rahul Gandhi granted bail by Patiala House court in National Herald case on Saturday, December 19, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X