ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ರಾಷ್ಟ್ರಪತಿಗಳು : ರಾಜೇಂದ್ರ ಪ್ರಸಾದ್ ರಿಂದ ಕೋವಿಂದ್ ತನಕ

By Mahesh
|
Google Oneindia Kannada News

ವದೆಹಲಿ, ಜುಲೈ 20: ಅಂದಿನಿಂದ ಇಂದಿನ ತನಕ ಭಾರತದ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಮೂಲಕವೇ ನಡೆದಿದೆ. ಡಾ. ರಾಜೇಂದ್ರ ಪ್ರಸಾದ್ ಅವರು ಕೂಡಾ ಚುನಾವಣೆ ಎದುರಿಸಿ 507,400 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರು. ನೀಲಂ ಸಂಜೀವ್ ರೆಡ್ಡಿ ಅವರು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಭಾರತದ ರಾಷ್ಟ್ರಪತಿಗಳ ಪಟ್ಟಿ ಇಲ್ಲಿದೆ...

ವ್ಯಕ್ತಿ ಚಿತ್ರ: ದಲಿತ ನಾಯಕ, ವಕೀಲ ರಾಮನಾಥ್ ಕೋವಿಂದ್ವ್ಯಕ್ತಿ ಚಿತ್ರ: ದಲಿತ ನಾಯಕ, ವಕೀಲ ರಾಮನಾಥ್ ಕೋವಿಂದ್

2012ರಲ್ಲಿ ಪ್ರಣಬ್ ಮುಖರ್ಜಿ ಶೇಕಡಾ 69 ಮತಗಳನ್ನು ಪಡೆದಿದ್ದರು.ಕೋವಿಂದ್ ಅವರು ಶೇ 65 ರಷ್ಟು ಮತಗಳನ್ನು ಪಡೆದಿದ್ದಾರೆ. ಜುಲೈ 17ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು ಶೇ.99 ರಷ್ಟು ಮತದಾನವಾಗಿದ್ದು, ಇದು ಇದುವರೆಗಿನ ಗರಿಷ್ಠ ಮತದಾನವೆನ್ನಿಸಿದೆ. ಜುಲೈ 20ರಂದು ಮತ ಎಣಿಕೆ ಮುಗಿದು ಅಧಿಕೃತ ಘೋಷಣೆಯಾಗಲಿದೆ.

List of Former Presidents of the Republic of India

ಭಾರತದ ರಾಷ್ಟ್ರಪತಿ ಅಯ್ಕೆ ಹೇಗೆ? ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?ಭಾರತದ ರಾಷ್ಟ್ರಪತಿ ಅಯ್ಕೆ ಹೇಗೆ? ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?

ಮೀರಾ ಕುಮಾರ್ ಅವರನ್ನು ಸೋಲಿಸಿದ ರಾಮನಾಥ್ ಕೋವಿಂದ್ ಅವರು ಜುಲೈ 25, 2017ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕೋವಿಂದ್ ಅವರಿಗೆ 7,02,044 ಎಲೆಕ್ಟ್ರೋಲ್ ಮತಗಳು ಹಾಗೂ ಮೀರಾ ಕುಮಾರ್ ಅವರಿಗೆ 3,67,314 ಮತಗಳು ಬಂದಿವೆ.

ಕೋವಿಂದ್ ಬಗ್ಗೆ 2016ರಲ್ಲೇ ಭವಿಷ್ಯ ನುಡಿದಿದ್ದ ನಿತೀಕ್ಷ್ಕೋವಿಂದ್ ಬಗ್ಗೆ 2016ರಲ್ಲೇ ಭವಿಷ್ಯ ನುಡಿದಿದ್ದ ನಿತೀಕ್ಷ್

ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಮತಗಳು 10.98 ಲಕ್ಷ. ರಾಷ್ಟ್ರಪತಿ ಆಯ್ಕೆಗೆ ಬೇಕಾಗಿರುವ ಸರಳ ಬಹುಮತ 5.49 ಲಕ್ಷ ಎಲೆಕ್ಟ್ರೋಲ್ ಮತಗಳು. ಒಟ್ಟು 776 ಸಂಸತ್ ಸದಸ್ಯರಲ್ಲಿ ಕೋವಿಂದ್ ಗೆ 524 ಜನರ ಬೆಂಬಲವಿದ್ದರೆ, ಮೀರಾ ಕುಮಾರ್ ಗೆ 235 ಸದಸ್ಯರ ಬೆಂಬಲವಿದೆ. ಕೋವಿಂದ್ ಅವರು 10,98,903 ಎಲೆಕ್ಟೋರಲ್ ಕಾಲೇಜು ಮತಗಳಲ್ಲಿ ಸುಮಾರು 7 ಲಕ್ಷ ಮತಗಳನ್ನು ಪಡೆಯುವ ಸಾಧ್ಯತೆ ಇದೆ. ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಸುಮಾರು 4 ಲಕ್ಷ ಮತಗಳನ್ನು ಪಡೆಯುವ ನಿರೀಕ್ಷೆಯಿದೆ.

ಮತ ಮೌಲ್ಯ: ಭಾರತದ ಮೊದಲ ಪ್ರಜೆಯನ್ನು ದೇಶದಲ್ಲಿನ ಅಷ್ಟೂ ಶಾಸಕರು ಮತ್ತು ಸಂಸದರು ಆಯ್ಕೆ ಮಾಡುತ್ತಾರೆ. ಪ್ರಸ್ತುತ ದೇಶದಲ್ಲಿ 776 ಸಂಸದರು ಮತ್ತು 4120 ಮಂದಿ ಶಾಸಕರು ಇದ್ದಾರೆ. ರಾಷ್ಟ್ರಪತಿ ಆಯ್ಕೆಗಾಗಿ ಈ ಜನಪ್ರತಿನಿಧಿಗಳಿಗೆ ನಿರ್ದಿಷ್ಟ ಮತ ಮೌಲ್ಯವನ್ನು ನಿಗದಿಪಡಿಲಾಗುತ್ತದೆ. ಎಲ್ಲ ಸಂಸದರ ಒಟ್ಟು ಮತ ಮೌಲ್ಯ 5,49,408 (776x708). ಹಾಗೆಯೇ, 4120 ಶಾಸಕರ ಒಟ್ಟು ಮತ ಮೌಲ್ಯ 5,49,474. ಇದರ ಸಂಗ್ರಹಿತ ಮೊತ್ತ 10,98, 903.

ರಾಷ್ಟ್ರಪತಿ ಚುನಾವಣೆ ಮತ ಲೆಕ್ಕಾಚಾರ, ಕೋವಿಂದ್ ರಿಗೆ ಸುಲಭ ಗೆಲುವುರಾಷ್ಟ್ರಪತಿ ಚುನಾವಣೆ ಮತ ಲೆಕ್ಕಾಚಾರ, ಕೋವಿಂದ್ ರಿಗೆ ಸುಲಭ ಗೆಲುವು

ಯಾರು ಹೆಚ್ಚು ಮತಗಳನ್ನು ಗಳಿಸುತ್ತಾರೋ ಅಥವಾ ಎಲ್ಲ ಸಂಸದರು, ಶಾಸಕರು ರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಬಯಸಿದರೆ ಆಗ ಈ ಮತ ಮೌಲ್ಯ ಗೌಣವಾಗಿ ರಾಷ್ಟ್ರಪತಿ ಸ್ಥಾನದ ಮೌಲ್ಯ ಅಗಣಿವಾಗುತ್ತದೆ. ಭಾರತದ ರಾಷ್ಟ್ರಪತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ...

ಅಧಿಕಾರ ಸಂಖ್ಯೆ ಹೆಸರು (ಜನನ-ಮರಣ ವರ್ಷ)
ಅಧಿಕಾರ ಅವಧಿ
14 ರಾಮನಾಥ್ ಕೋವಿಂದ್ (ಜನನ-1945) ಜುಲೈ 25, 2017-
13 ಪ್ರಣಬ್ ಮುಖರ್ಜಿ (ಜನನ- 1935)
ಜುಲೈ 25,2012 ರಿಂದ ಜುಲೈ 25, 2017
12 ಪ್ರತಿಭಾ ಪಾಟೀಲ್ (ಜನನ- 1934)
ಜುಲೈ 25. 2007 ರಿಂದ ಜುಲೈ 24, 2012
11 ಎಪಿಜೆ ಅಬ್ದುಲ್ ಕಲಾಂ (ಜನನ- 1931-2015)
ಜುಲೈ 25, 2002 ರಿಂದ ಜುಲೈ 25, 2007
10 ಡಾ. ಕೆ ಆರ್ ನಾರಾಯಣನ್ (1920-2005)
ಜುಲೈ 25, 1997 ರಿಂದ ಜುಲೈ 25, 2002
9 ಡಾ. ಶಂಕರ ದಯಾಳ ಶರ್ಮ (1918-1999)
ಜುಲೈ 25, 1992 ರಿಂದ ಜುಲೈ 25, 1997
8 ರಾಮಸ್ವಾಮಿ ವೆಂಕಟರಾಮನ್ (1910-2009)
ಜುಲೈ 25, 1987 ರಿಂದ ಜುಲೈ 25, 1992
7 ಗ್ಯಾನಿ ಜೈಲ್ ಸಿಂಗ್ (1916-1994)
ಜುಲೈ 25,1982 ರಿಂದ ಜುಲೈ 25, 1987
6 ನೀಲಂ ಸಂಜೀವ ರೆಡ್ಡಿ (1913-1996)
ಜುಲೈ 25, 1977 ರಿಂದ ಜುಲೈ 25,1982
ಹಂಗಾಮಿ ಬಿ ಡಿ ಜತ್ತಿ ಫೆಬ್ರವರಿ 11, 1977 ರಿಂದ ಜುಲೈ 25, 1977
5 ಫಕ್ರುದ್ದೀನ್ ಅಲಿ ಅಹ್ಮದ್ (1905-1977)
ಆಗಸ್ಟ್ 24, 1974 ರಿಂದ ಫೆಬ್ರವರಿ 11, 1977
4 ವರಾಹಗಿರಿ ವೆಂಕಟ ಗಿರಿ ಆಗಸ್ಟ್ 24, 1969 ರಿಂದ ಆಗಸ್ಟ್ 24, 1974
ಹಂಗಾಮಿ ಮಹಮ್ಮದ್ ಹಿದಾಯತುಲ್ಲಾ ಜುಲೈ 20, 1969 ರಿಂದ ಆಗಸ್ಟ್ 24, 1969
ಹಂಗಾಮಿ ವರಾಹಗಿರಿ ವೆಂಕಟ ಗಿರಿ (1894-1980)
ಮೇ 3, 1969 ರಿಂದ ಜುಲೈ 20, 1969
3 ಡಾ. ಜಾಕಿರ್ ಹುಸೇನ್ (1897-1969)
ಮೇ 13, 1967 ರಿಂದ ಮೇ 3, 1969
2 ಡಾ. ಸರ್ವಪಲ್ಲಿ ರಾಧಾಕೃಷ್ಣನ್ (1888-1975)
ಮೇ 13, 1962 ರಿಂದ ಮೇ 13, 1967
1 ಡಾ. ರಾಜೇಂದ್ರ ಪ್ರಸಾದ್ (1884-1963)
ಜನವರಿ 26, 1950 ರಿಂದ ಮೇ 13, 1962

(ಒನ್ಇಂಡಿಯಾ ಸುದ್ದಿ)

English summary
Former Presidents of the Republic of India, listed. Dr Rajendra Prasad was the only president to serve for two terms. The terms of Varahagiri Venkata Giri, Muhammad Hidayatullah, and Basappa Danappa Jatti, who have functioned as acting presidents, are therefore not numbered. Ram Nath Kovind is set to become next President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X