ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರ, ಒಬ್ಬನ ಬಂಧನ, ಇಬ್ಬರು ನಾಪತ್ತೆ

|
Google Oneindia Kannada News

ಲಖನೌ, ಜೂನ್ 1: ಇಲ್ಲಿನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ರೋಗಿಯ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಪ್ರಕರಣದಲ್ಲಿ ಗುರುವಾರ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನಿಬ್ಬರು ಆರೋಪಿಗಳು ತಲೆ ತಪ್ಪಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಲಿಫ್ಟ್ ಆಪರೇಟರ್ ವಿನಯ್, ಸಂತೋಷ್ ಹಾಗೂ ಶಿವಕುಮಾರ್ ಆರೋಪಿಗಳು. ಈ ಪೈಕಿ ಶಿವಕುಮಾರ್ ನನ್ನು ಬಂಧಿಸಲಾಗಿದೆ.

ಹರ್ದೋಯಿ ಮೂಲದ ಅತ್ಯಾಚಾರ ಸಂತ್ರಸ್ತೆ ಆಕೆಯ ಪತಿಯನ್ನು ಬುಧವಾರ ರಾತ್ರಿ ಹತ್ತು ಮೂವತ್ತರ ವೇಳೆಗೆ ಆಸ್ಪತ್ರೆಗೆ ಕರೆತಂದಿದ್ದಾರೆ. ಆಗ ಆಕೆಯನ್ನು ತನ್ನ ಕೋಣೆಗೆ ಕರೆದೊಯ್ದ ವಿನಯ್, ಊಟ ತಂದುಕೊಡುವುದಾಗಿ ಹೇಳಿದ್ದಾನೆ.[ಬೆಂಗಳೂರಿನಲ್ಲಿ ನೆರೆಮನೆಯವನಿಂದಲೇ ಅಪ್ರಾಪ್ತೆಯ ಮೇಲೆ ಅತ್ಯಾಚಾರ]

Liftman, 2 others trick KGMU patient's wife, allegedly gang-rape her

ಅದಾಗಲೇ ಇತರ ಇಬ್ಬರು ಅಲ್ಲಿದ್ದಾರೆ. ಮೂವರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಎಲ್ಲ ಪ್ರಯತ್ನ ನಡೆಸಿದ್ದಾರೆ.[ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ವ್ಯಕ್ತಿಯ ಕೊಲೆ]

ಈಚೆಗೆ ಉತ್ತರಪ್ರದೇಶದ ರಾಮ್ ಪುರದಲ್ಲಿ ಪುಂಡರ ಗುಂಪೊಂದು ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Uttar Pradesh Police on Thursday arrested one person out of the three for allegedly gang-raping a lady at the King George's Medical University (KGMU) in Lucknow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X