ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸರ್ಜಿಕಲ್ ಸ್ಟ್ರೈಕ್' ವೀರರಿಗೆ ಸೇನಾ ಪ್ರಶಸ್ತಿಗಳ ಗೌರವ

ಸೆಪ್ಟೆಂಬರ್ 8ರಂದು ಗಡಿ ನಿಯಂತ್ರಣ ರೇಖೆ ದಾಟಿ 'ಸರ್ಜಿಕಲ್ ಸ್ಟ್ರೈಕ್' ನಡೆಸಿದ 19ಸೈನಿಕರನ್ನು ಗಣರಾಜ್ಯೋತ್ಸವದ ದಿನ ವಿವಿಧ ಪ್ರಶಸ್ತಿ ನೀಡ ಗೌರವಿಸಲಾಯಿತು.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 26: ಗಡಿ ನಿಯಂತ್ರಣ ರೇಖೆ ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಸೈನಿಕರನ್ನು 68ನೇ ಗಣ ರಾಜ್ಯೋತ್ಸವದ ದಿನ ಸನ್ಮಾನಿಸಲಾಯಿತು. ಎರಡು ವಿಶೇಷ ಬೆಟಾಲಿಯನ್ನಿನ 19 ಸೈನಿಕರಿಗೆ ಕೀರ್ತಿ ಚಕ್ರ, 5 ಶೌರ್ಯ ಚಕ್ರ ಹಾಗೂ ಇತರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಸೆಪ್ಟೆಂಬರ್ 28ರಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಪಾಲ್ಗೊಂಡಿದ್ದ ಮೇಜರ್ ರೋಹಿತ್ ಸೂರಿಯವರಿಗೆ ಕೀರ್ತಿ ಚಕ್ರ, ಕೊಲೋನೆಲ್ ಕಪಿಲ್ ಯಾದವ್, ಕೊಲೋನೆಲ್ ಹರ್ಪ್ರೀತ್ ಸಂಧುರವರಿಗೆ ಯುದ್ಧ ಸೇವಾ ಪದಕ ನೀಡಿ ಗೌರವಿಸಲಾಗಿದೆ. ಶತ್ರು ರಾಷ್ಟ್ರದ ಗಡಿಯೊಳಕ್ಕೆ ರಾತ್ರಿ ಹೊತ್ತು ನುಗ್ಗಿ ಮಿಂಚಿನ ಕಾರ್ಯಾಚರಣೆ ಮಾಡಿದ್ದ ತಂಡದ ಇತರ ಸದಸ್ಯರಿಗೂ ಬೇರೆ ಬೇರೆ ಸೇನಾ ಪದಕಗಳನ್ನು ಗಣರಾಜ್ಯೋತ್ಸವದ ದಿನ ಪ್ರದಾನ ಮಾಡಲಾಯಿತು.[ಗಣರಾಜ್ಯೋತ್ಸವದಂದು ಅಸ್ಸಾಂ, ಮಣಿಪುರಗಳಲ್ಲಿ ಬಾಂಬ್ ಸ್ಫೋಟ]

Let us salute the brave sons who carried out the Sep 28 surgical strikes

ಇನ್ನು ಲೆಫ್ಟಿನೆಂಟ್ ಹವಾಲ್ದಾರ್ ಪ್ರೇಮ್ ಬಹದ್ದೂರ್ ರೇಶ್ಮಿ ಮಗರ್ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಪ್ರತಿ಺ಷ್ಠಿತ ಶೌರ್ಯ ಚಕ್ರ ಪ್ರಶಸ್ತಿಯನ್ನು 10 ಜನರಿಗೆ ನೀಡಲಾಗಿದ್ದು, ಒಬ್ಬರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ.[ಜಗತ್ತಿನ ಟಾಪ್ 10 ಶಕ್ತಿಶಾಲಿ ಮಿಲಿಟರಿ ದೇಶಗಳು]

Let us salute the brave sons who carried out the Sep 28 surgical strikes

ಒಟ್ಟು 343 ಯೋಧರಿಗೆ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿವಿಧ ಪ್ರಶಸ್ತಿ, ಪದಕಗಳನ್ನು ನೀಡಿ ಸೈನಿಕರ ವಿಶಿಷ್ಟ ಸೇವೆಗೆ ಗೌರವ ಸಲ್ಲಿಸಲಾಯಿತು.

English summary
Nineteen personnel of the two Special Forces battalions which carried out the across the Line of Control on September 28 were decorated with gallantry awards including the Kirti Chakra and five Shaurya Chakras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X