ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡಿಪೋರಾದಲ್ಲಿ ಎಲ್ಇಟಿ ಉಗ್ರ ಅಬು ಮುಸಾನ ಹತ್ಯೆ

By Prasad
|
Google Oneindia Kannada News

ಬಂಡಿಪೋರಾ (ಜಮ್ಮು ಮತ್ತು ಕಾಶ್ಮೀರ), ಜನವರಿ 19 : ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಪ್ರಾಂತ್ಯದಲ್ಲಿ ಭಾರತೀಯ ಸೈನಿಕರು ಮತ್ತು ಪೊಲೀಸರು ಲಷ್ಕರ್ ಇ ತಯ್ಬಾದ ಉಗ್ರ ಅಬು ಮುಸಾನನ್ನು ಗುರುವಾರ ಎನ್‌ಕೌಂಟರ್ ಮಾಡಿ ಹತ್ಯೆ ಮಾಡಿದ್ದಾರೆ. [ವಿಡಿಯೋ: ದಕ್ಷಿಣ ಕಾಶ್ಮೀರದ ಕಾಡಿನಲ್ಲಿ ಚಳಿ ಕಾಯಿಸುತ್ತಿರುವ ಉಗ್ರರು]

ಬಂಡಿಪೋರಾ ಜಿಲ್ಲೆಯ ಹಾಜಿನ್ ಎಂಬಲ್ಲಿ ಈ ಎನ್‌ಕೌಂಟರ್ ನಡೆದಿದ್ದು, ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಕೆಲವೇ ವಾರಗಳ ಹಿಂದೆ ಅನಂತನಾಗ್ ಜಿಲ್ಲೆಯಲ್ಲಿ ಮೂವರು ಉಗ್ರರನ್ನು ಭಾರತೀಯ ಸೈನಿಕರು ಹೊಡೆದು ಉರುಳಿಸಿದ್ದರು.

LeT commander Abu Musa killed in an encounter in Bandipora

ಜನವರಿ 6ರಂದು ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯ ಮಾಚು ಪ್ರದೇಶದಲ್ಲಿ ಅಲ್-ಬದರ್ ಸಂಘಟನೆಯ ಭಯೋತ್ಪಾದಕ ಮುಜಫರ್ ಅಹ್ಮದ್ ನನ್ನು ಭಾರತೀಯ ಸೇನೆ ಹತ್ಯೆ ಮಾಡಿತ್ತು.

ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (GREF) ಮೇಲೆ ಜನವರಿ 9ರಂದು ಉಗ್ರರು ದಾಳಿ ನಡೆಸಿ, 3 ಕಾರ್ಮಿಕರನ್ನು ಹತ್ಯೆಗೈದಿದ್ದರು. ರಾತ್ರಿ 1.15ರ ಸುಮಾರಿಗೆ ಪಟ್ಟಾಲ್ ದಲ್ಲಿ ಉಗ್ರರು ದಾಳಿ ನಡೆಸಿದ್ದರು. ಜಿಆರ್‌ಇಎಫ್ ನಲ್ಲಿ ದಾಳಿ ನಡೆದ ಸಮಯದಲ್ಲಿ 10 ಸೇನಾ ಸಿಬ್ಬಂದಿಗಳು ಮತ್ತು 8ರಿಂದ 10 ಕಾರ್ಮಿಕರಿದ್ದರು. [ಜಮ್ಮುನ ಅಖ್ನೂರ್ನಲ್ಲಿ ಉಗ್ರರ ದಾಳಿ, 3 ಕಾರ್ಮಿಕರ ಹತ್ಯೆ]

English summary
Lashkar-e-Taiba (LeT) commander Abu Musa was killed in an encounter with police and security forces in J&K's Bandipora (Hajin) Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X